ಎದೆಹಾಲು ಕುಡಿಸುವಾಗಲೇ ಬಡಿದ ಸಿಡಿಲು, ಒಂದು ಕಿವಿ ಕಿವುಡು!
35 ವರ್ಷದ ಮಹಿಳೆ ಮತ್ತು ಆಕೆಯ ಎಂಟು ತಿಂಗಳ ಮಗು ಸಿಡಿಲಿನ ಆರ್ಭಟಕ್ಕೆ ಭಾರೀ ಆಘಾತ ಕಂಡಿದ್ದವು ಎಂದು ಪೂಮಂಗಲಂ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಹೇಳಿದ್ದಾರೆ.

ತಿರುವನಂತಪುರ (ಅ.25): ಇತ್ತೀಚೆಗೆ ಕೇರಳದ ತ್ರಿಶೂರ್ ಜಿಲ್ಲೆಯ ಕಲ್ಪರಂಬು ಪ್ರದೇಶದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯೊಳಗೆ ಮಗುವಿಗೆ ಹಾಲುಣಿಸುವಾಗ ಸಿಡಿಲಿನ ಆಘಾತ ಎದುರಿಸಿದ್ದಾರೆ. 35 ವರ್ಷದ ಮಹಿಳೆ ತನ್ನ ಎಂಟು ತಿಂಗಳ ಮಗುವಿಗೆ ತನ್ನ ಮನೆಯಲ್ಲಿ ಹಾಲುಣಿಸುತ್ತಿರುವಾಗಲೇ ಸಿಡಿಲು ಬಡಿದಿದೆ. ಸಿಡಿಲು ಬಡಿದ ಆಘಾತಕ್ಕೆ ತಾಯಿ ಹಾಗೂ ಮಗು ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಇನ್ನು ಸಿಡಿಲು ಬಡಿದ ಕಾರಣಕ್ಕೆ ತಾಯಿ ತನ್ನ ಒಂದು ಕಿವಿಯ ಶ್ರವಣ ನಷ್ಟವನ್ನು ಎದುರಿಸಿದ್ದಾರೆ ಎಂದು ಪೂಮಂಗಲಂ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿದ್ದ ವೈರಿಂಗ್ ಮತ್ತು ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳಿಗೂ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮಗುವಿಗೆ ಹಾಲುಣಿಸುವ ವೇಳೆ ಮಹಿಳೆ ಗೋಡೆಗೆ ಒರಗಿ ನಿಂತಿದ್ದು, ಇದೇ ಕಾರಣಕ್ಕೆ ಸಿಡಿಲು ಬಡಿದಿರಬಹುದು ಎಂದು ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸೋಮವಾರ ನಡೆದ ಘಟನೆಯಲ್ಲಿ ಮಹಿಳೆಯ ಬೆನ್ನು ಮತ್ತು ಕುತ್ತಿಗೆಗೆ ಸಣ್ಣ ಸುಟ್ಟಗಾಯಗಳಾಗಿದ್ದು, ಮಗುವಿಗೆ ಯಾವುದೇ ಗಾಯವಾಗಿಲ್ಲ ಎಂದು ಪಂಚಾಯತ್ ಸದಸ್ಯರು ತಿಳಿಸಿದ್ದಾರೆ.
ಸಿಡಿಲಾಘಾತದಿಂದಾಗಿ ಐಶ್ವರ್ಯ ಎನ್ನುವ ಹೆಸರಿನ ಮಹಿಳೆಯ ಎಡಕಿವಿ ಏನೂ ಕೇಳುತ್ತಿಲ್ಲ. ಅದಲ್ಲದೆ, ಆಕೆಯ ತಲೆಯ ಕೂದಲು ಕೂಡ ಸುಟ್ಟು ಹೋಗಿದೆ. ಸಿಡಿಲು ಬಡಿದ ಬೆನ್ನಲ್ಲಿಯೇ ಆಘಾತದಿಂದ ಮಗು ಮೇಲಕ್ಕೆ ಹಾರಿದೆ. ಮಗು ಗಾಳಿಯಲ್ಲಿ ಇದ್ದ ಕಾರಣಕ್ಕೆ ಯಾವುದೇ ಅಪಾಯವಾಗಿಲ್ಲ. ಇವರ ಅಕ್ಕಪಕ್ಕದ ಮನೆಯಲ್ಲೂ ಸಿಡಿಲಿನಿಂದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ವರದಿಯಾಗಿದೆ.
ಶಾಲಾ ಪಠ್ಯಪುಸ್ತಕದಲ್ಲಿ ಇಂಡಿಯಾ ಬದಲು 'ಭಾರತ', NCERT ಸಮಿತಿ ಶಿಫಾರಸು
ಘಟನೆಯ ನಂತರ ಐಶ್ವರ್ಯ ಅವರ ಪತಿ ಸುಬೀಶ್ ಕೂಡಲೇ ತನ್ನ ಹೆಂಡತಿ ಮತ್ತು ಮಗುವನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಅಪಘಾತದ ಸಮಯದಲ್ಲಿ ದಂಪತಿಯ ಇಬ್ಬರು ಹಿರಿಯ ಮಕ್ಕಳು ಮತ್ತು ಪೋಷಕರು ಮನೆಯೊಳಗೆ ಇದ್ದರೂ, ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಜಯದೇವ ಜಂಗಿ ಕುಸ್ತಿ ಕಾಳಗ, ಇದು ಮೈಸೂರಿನಲ್ಲಿ ನಡೆಯೋದಲ್ಲ