ಬರೋಬ್ಬರಿ 9 ತಿಂಗಳ ಬಳಿಕ ಮೂವರು ಕೇರಳಿಗರು ಮನೆ ಸೇರಿದ್ದಾರೆ. ಗಡಿ ರೇಖೆ ದಾಡಿದ ಕಾರಣಕ್ಕೆ ನೈಜೀರಿಯಾ ನೌಕಾ ಪಡೆಯಿಂದ ಬಂಧನಕ್ಕೊಳಗಾಗಿದ್ದ ಖಾಸಗಿ ಹಡಗಿನಲ್ಲಿದ್ದ 16 ಭಾರತೀಯರ ಪೈಕಿ ಮೂವರು ಇದೀಗ ತವರಿಗೆ ವಾಪಾಸ್ಸಾಗಿದ್ದಾರೆ

ಕೊಚ್ಚಿ(ಜೂ.11): ನೈಜೀರಿಯನ್ ನೌಕಾಪಡೆಯಿಂದ ಅರೆಸ್ಟ್ ಆಗಿದ್ದ 16 ಭಾರತೀಯರ ಪೈಕಿ ಇದೀಗ ಮೂವರು ಕೇರಳಿಗರು ಮರಳಿ ಮನೆ ಸೇರಿದ್ದಾರೆ. 9 ತಿಂಗಳ ಹಿಂದೆ ಖಾಸಗಿ ಹಡಗು ನೈಜೀರಿಯನ್ ಗಡಿ ರೇಖೆ ದಾಡಿದ ಕಾರಣಕ್ಕೆ ಹಡಗು ಸೇರಿದಂತೆ ಸಿಬ್ಬಂದಿಗಳನ್ನು ನೈಜೀರಿಯನ್ ನೌಕಾಪಡೆ ಬಂಧಿಸಿತ್ತು. ಕಳೆದ 9 ತಿಂಗಳಿನಿಂದ ಕೇಂದ್ರ ಸರ್ಕಾರ ಸತತ ಪ್ರಯತ್ನದ ಮೂಲಕ 16 ಭಾರತೀಯರನ್ನು ಬಂಧನ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ. ಇವರ ಮೇಲಿನ ಎಲ್ಲಾ ಪ್ರಕರಣಗಳನ್ನು ನೈಜೀರಿಯಾ ರದ್ದುಗೊಳಿಸಿದೆ. ಈ ಪೈಕಿ ಮೂವರು ಶನಿವಾರ(ಜೂ.10) ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಇದೇ ವೇಳೆ ಈ ಮೂವರ ಕುಟುಂಬಸ್ಥರು ಆಗಮಿಸಿ ಆತ್ಮೀಯವಾಗಿ ಸ್ವಾಗತಿಸಿ ಭಾವುಕರಾದರು.

ತೈಲ ತುಂಬಿದ ಎಂಟಿ ಹೆರಾಯಿತ್ ಇಡುನ್ ಹಡಗು ನೈಜೀರಿಯನ್ ಗಡಿ ರೇಖೆ ದಾಟಿತ್ತು. ಹೀಗಾಗಿ ನೈಜೀರಿಯನ್ ನೌಕಾ ಪಡೆ ಹಡಗನ್ನು ವಶಕ್ಕೆ ಪಡೆದು ಸಿಬ್ಬಂಧಿಗಳನ್ನು ಬಂಧಿಸಿತ್ತು. 26 ಮಂದಿ ಇದ್ದ ಈ ಹಡಗಿನಲ್ಲಿ 16 ಭಾರತೀಯರು, ಶ್ರೀಲಂಕಾದ 8 ಮಂದಿ, ಫಿಲಿಪೇನ್ಸ್ ಹಾಗೂ ಪೊಲೆಂಡ್‌ನಿಂದ ತಲಾ ಒಬ್ಬರು ಅರೆಸ್ಟ್ ಆಗಿದ್ದರು. 9 ತಿಂಗಳ ಹಿಂದೆ ಇವರ ಬಂಧನವಾಗಿತ್ತು. ಪ್ರಕರಣ ವನ್ನು ಗಂಭೀರವಾಗಿ ಪರಗಿಣಿಸಿದ ನೈಜೀರಿಯನ್ ಸರ್ಕಾರ ಹಲವು ಪ್ರಕರಣ ದಾಖಲಿಸಿತ್ತು. ಇತ್ತ ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು. ಹೀಗಾಗಿ ಇವರ ಬಿಡುಗಡೆ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿತ್ತು. 

ವಿಮಾನದಲ್ಲೇ ಪ್ರಾಣಬಿಟ್ಟ ಪ್ರಯಾಣಿಕ: ದೆಹಲಿ-ದೋಹಾ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್

ಆದರೆ ಭಾರತದ ಸರ್ಕಾರ ರಾಜತಾಂತ್ರಿಕ ಮಾರ್ಗ ಅನುಸರಿಸಿ 16 ಭಾರತೀಯರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಕೇರಳದ ಸಾನು ಜೋಸ್, ಮಿಲ್ಟನ್ ಡಿ ಕೌತ್ ಹಾಗೂ ವಿ ವಿಜಿತ್ ಇದೀಗ ಮರಳಿ ಮನೆ ಸೇರಿಕೊಂಡಿದ್ದಾರೆ. ಈ ಮೂವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಕಳೆದ 9 ತಿಂಗಳಿನಿಂದ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕುಟಂಬಸ್ಥರು ಕೊನೆಗೂ ತಮ್ಮ ಆಪ್ತರನ್ನು ಆಲಂಗಿಸುವ ಅವಕಾಶ ಬಂದಿದೆ.

100ಕ್ಕೂ ಹೆಚ್ಚು ಆಫ್ರಿಕನ್ ಪ್ರಜೆಗಳಿಂದ ಪೊಲೀಸರ ಮೇಲೆ ದಾಳಿಗೆ ಯತ್ನ

ಭಾರತದ ಪ್ರಬಲ ರಾಜತಾಂತ್ರಿಕ ಮಾರ್ಗದ ಮೂಲಕ ಬಂಧ ಮುಕ್ತಗೊಳಿಸಲಾಗಿದೆ. ನೈಜೀರಿಯಾ ಕೋರ್ಟ್ 16 ಭಾರತೀಯರ ಮೇಲಿನ ಎಲ್ಲಾ ಪ್ರಕರಣಗಳನ್ನು ಖುಲಾಸೆಗೊಳಿಸಿದೆ. ಇತ್ತ ಮನೆ ಸೇರಿಕೊಂಡಿರುವ ಮೂವರು ಕೇರಳಿಗರು ತಮ್ಮ ಕರಾಳ ದಿನ ನೆನೆದು ಭಾವುಕರಾಗಿದ್ದಾರೆ. 9 ತಿಂಗಳು ನೈಜಿರಿಯಾ ಜೈಲಿನಲ್ಲಿ ನಿಜಕ್ಕೂ ನರಕಯಾತನೆ ಅನುಭವಿಸಿದ್ದೇವೆ. ಕುಡಿಯಲು ಯೋಗ್ಯವಲ್ಲ ನೀರನ್ನು ನಮಗೆ ನೀಡಲಾಗುತ್ತಿತ್ತು. ಕುಡಿದರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ. ಇತ್ತ ಅತ್ಯಂತ ಕಳಪೆ ಗುಣುಟ್ಟದ ಆಹಾರ ನೀಡಲಾಗಿತ್ತು. ಒಂದೊಂದು ದಿನವೂ ಒಂದು ವರ್ಷವಿದ್ದ ಅನುಭವಾಗಿತ್ತು. ಬಿಡುಗೆಯಾಗುತ್ತೇವೆ ಎಂಬು ಭರವಸೆ ಕಳೆದುಕೊಳ್ಳಲು ಆರಂಭವಾಗಿತ್ತು. ಆದರೆ ಭಾರತ ಸರ್ಕಾರದ ನೆರವಿನಿಂದ ಇದೀಗ ಮನೆ ಸೇರಿಕೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.