Asianet Suvarna News Asianet Suvarna News

ಹೆಚ್ಚಿದ ಕೊರೋನಾ: ಕೇರಳದಲ್ಲಿ ಮತ್ತೆ ಕಂಪ್ಲೀಟ್ ಲಾಕ್‌ಡೌನ್

  • ಕೇರಳದಲ್ಲಿ ಮತ್ತೆ ಹೆಚ್ಚಿದ ಕೊರೋನಾ
  • ಕಂಪ್ಲೀಟ್ ಲಾಕ್‌ಡೌನ್ ಘೋಷಿಸಿದ ಸರ್ಕಾರ
Kerala revises COVID-19 regulations full lockdown on July 31 and Aug 1 dpl
Author
Bangalore, First Published Jul 29, 2021, 12:17 PM IST
  • Facebook
  • Twitter
  • Whatsapp

ತಿರುವನಂತಪುರಂ(ಜು.29): ಜುಲೈ ಕೊನೆಯ ವಾರದಲ್ಲಿ ದೇಶದ ಕೊರೋನಾ ಪಾಸಿಟಿವ್ ಕೇಸ್ ಹೆಚ್ಚಾಗುತ್ತಲೇ ಇದೆ. ಮೂರನೇ ದಿನಕ್ಕೆ ಅತೀ ಹೆಚ್ಚು ಕೊರೋನಾ ಕೇಸುಗಳು ದಾಖಲಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ವಾರಾಂತ್ಯಕ್ಕೆ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ದೇಶದಲ್ಲಿ ಏಕಾಏಕಿ ಕೊರೋನಾ ಕೇಸ್ ಹೆಚ್ಚಾಗುವಲ್ಲಿ ಕೇರಳದಲ್ಲಿ ಕಂಡು ಬಂದ ಪ್ರಕರಣಗಳೂ ಪ್ರಮುಖ ಕಾರಣ.

ಕೇರಳ ಸರ್ಕಾರ COVID-19 ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ನೀಟ್ ಪರೀಕ್ಷೆ ಅವಶ್ಯಕತೆಗಳ ಹಿನ್ನೆಲೆಯಲ್ಲಿ ಫೋಟೋ ಸ್ಟುಡಿಯೋಗಳನ್ನು ಈಗ ಅನುಮತಿ ಪಡೆದ ದಿನಗಳಲ್ಲಿ ತೆರೆಯಲು ಅವಕಾಶ ಮಾಡಿಕೊಟ್ಟಿದೆ.

ಬೀಜಗಳು ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಸಹ ಇತ್ತೀಚಿನ ಸರ್ಕಾರದ ಆದೇಶದಲ್ಲಿ ಅಗತ್ಯ ಸೇವೆಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಅಂತಹ ಅಂಗಡಿಗಳು ಅಗತ್ಯವಿರುವ ಸಿಬ್ಬಂದಿಗಳೊಂದಿಗೆ ಎಲ್ಲಾ ದಿನಗಳಲ್ಲಿ ತೆರೆಯಬಹುದು.

ಪ್ರತಿಕಾಯ: ಮ.ಪ್ರ. ನಂ.1, ಕೇರಳಕ್ಕೆ ಕಡೆಯ ಸ್ಥಾನ!

ಕೇರಳದಲ್ಲಿ COVID-19 ನಿಯಮಗಳು ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳಲ್ಲಿ ಏಳು ದಿನಗಳ ಸರಾಸರಿ ಪಾಸಿಟಿವ್ ದರವನ್ನು ಆಧರಿಸಿವೆ. ಕಡಿಮೆ ಟಿಪಿಆರ್ ಹೊಂದಿರುವಲ್ಲಿ ಕೆಲವು ಸೌಲಭ್ಯ ನೀಡಿ ಹೆಚ್ಚಿದ್ದಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ. ಇತ್ತೀಚಿನ ಸರ್ಕಾರದ ಆದೇಶವು ಜುಲೈ 31 ಮತ್ತು ಆಗಸ್ಟ್ 1 ರಂದು ರಾಜ್ಯವು ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದಿದೆ.

ಸದ್ಯಕ್ಕೆ ಭಾರತದಲ್ಲಿ ದಾಖಲಾಗುತ್ತಿರುವ ದಿನಂಪ್ರತಿ ಕೊರೋನಾ ಕೇಸುಗಳ ಒಟ್ಟು ಸಂಖ್ಯೆಯ ಅರ್ಧದಷ್ಟು ಪ್ರಕರಣ ನೆರೆ ರಾಜ್ಯ ಕೇರಳದಲ್ಲಿ ಪತ್ತೆಯಾಗುತ್ತಿರುವುದು ಕರ್ನಾಟಕ್ಕೆ ಆತಂಕವನ್ನು ಉಂಟು ಮಾಡಿದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ ಜು.28ರಂಣದು 22,056 ಇದ್ದರೆ ಮಹಾರಾಷ್ಟ್ರದಲ್ಲಿ 6.857 ಪ್ರಕರಣ ಪತ್ತೆಯಾಗಿದೆ. ಆಂಧ್ರಪ್ರದೇಶದಲ್ಲಿ 2 ಸಾವಿರ ಪ್ರಕರಣ ಪತ್ತೆಯಾಗಿದೆ.

ಜೂನ್ 14 ಮತ್ತು ಜುಲೈ 6 ರ ನಡುವೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) 11 ರಾಜ್ಯಗಳಲ್ಲಿ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಜನಸಂಖ್ಯೆಯ ಕನಿಷ್ಠ ಮೂರನೇ ಎರಡರಷ್ಟು ಜನರು ಕರೋನವೈರಸ್ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶವು (79%) ಅಗ್ರಸ್ಥಾನದಲ್ಲಿದ್ದರೆ, ಕೇರಳ (44.4%) ಕೆಳಭಾಗದಲ್ಲಿದೆ.

Follow Us:
Download App:
  • android
  • ios