* ಕರ್ನಾಟಕದ ಶೇ.69 ಜನರಲ್ಲಿ ಪ್ರತಿಕಾಯ ಶಕ್ತಿಕರ್ನಾಟಕದ ಶೇ.69 ಜನರಲ್ಲಿ ಪ್ರತಿಕಾಯ ಶಕ್ತಿ* ಪ್ರತಿಕಾಯ: ಮ.ಪ್ರ. ನಂ.1, ಕೇರಳಕ್ಕೆ ಕಡೆಯ ಸ್ಥಾನ
ನವದೆಹಲಿ(ಜು.29): ಕರ್ನಾಟಕ, ಕೇರಳ ಸೇರಿದಂತೆ 11 ರಾಜ್ಯಗಳಲ್ಲಿ ಕೋವಿಡ್ ರೋಗ ನಿರೋಧಕ ಶಕ್ತಿ ಹೇಗಿದೆ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸೀರೋ ಸಮೀಕ್ಷೆ ನಡೆಸಿದೆ.
ಇದರಲ್ಲಿ ಮಧ್ಯಪ್ರದೇಶದಲ್ಲಿ ಶೇ.79 ಜನರಲ್ಲಿ ಪ್ರತಿಕಾಯ ಉತ್ಪತ್ತಿಯಾಗಿದ್ದು, ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಕೇರಳದ ಶೇ.44 ಜನರಲ್ಲಿ ಪ್ರತಿಕಾಯ ಉತ್ಪತ್ತಿ ಆಗಿದ್ದು, ಕೊನೆಯ ಸ್ಥಾನ ಪಡೆದಿದೆ.
70 ಜಿಲ್ಲೆಗಳಲ್ಲಿ ಜೂನ್ 14ರಿಂದ ಜುಲೈ 6ರರವರೆಗೆ ಈ ಸಮೀಕ್ಷೆ ನಡೆಸಲಾಗಿದೆ. ಇನ್ನುಳಿದಂತೆ ರಾಜಸ್ಥಾನ, ಗುಜರಾತ್ ಹಾಗೂ ಬಿಹಾರದ ಶೇ.75, ಛತ್ತೀಸ್‌ಗಢದ ಶೇ.74, ಉತ್ತರಾಖಂಡದ ಶೇ.73, ಉತ್ತರ ಪ್ರದೇಶದ ಶೇ.71, ಆಂಧ್ರಪ್ರದೇಶದ ಶೇ.79, ಕರ್ನಾಟಕದ ಹಾಗೂ ತಮಿಳುನಾಡಿನ ಶೇ.69 ಹಾಗೂ ಒಡಿಶಾದ ಶೇ.68 ಜನರಲ್ಲಿ ಪ್ರತಿಕಾಯ ಕಂಡುಬಂದಿದೆ ಎಂದು ತಿಳಿಸಲಾಗಿದೆ.
ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ!
ಜೆನೆಕಾ ಮತ್ತು ಫೈಝರ್‌ನ ಎರಡೂ ಡೋಸ್ ಪಡೆದ 6 ವಾರಗಳ ಬಳಿಕ ದೇಹದಲ್ಲಿ ಒಟ್ಟಾರೆ ಪ್ರತಿಕಾಯಗಳ ಪ್ರಮಾಣದಲ್ಲಿ ಇಳಿಕೆಯಾಗಲು ಆರಂಭಿಸಿ, 10 ವಾರಗಳ ಅವಧಿಯಲ್ಲಿ ಒಟ್ಟಾರೆ ಪ್ರಮಾಣದಲ್ಲಿ ಶೇ.50ರಷ್ಟುಕುಸಿತ ಕಾಣುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.
ಸೋಂಕಿನಿಂದ ರಕ್ಷಣೆ ನೀಡುವ ಪ್ರತಿಕಾಯಗಳು ಈ ವೇಗದಲ್ಲಿ ಇಳಿಕೆಯಾದರೆ, ಸೋಂಕಿನಿಂದ ರಕ್ಷಣೆ ನೀಡುವ ಪ್ರಮಾಣ ಕೂಡಾ ಇಳಿಕೆಯಾಗುವ ಆತಂಕ ವ್ಯಕ್ತವಾಗಿದೆ ಎಂದು ಯುನಿವರ್ಸಿಟಿ ಕಾಲೇಜು ಆಫ್ ಲಂಡನ್‌ನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಕುರಿತ ವರದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
