ದೇಶದಲ್ಲಿ ಮತ್ತೆ ಕೊವಿಡ್ ಪ್ರಕರಣ ಹೆಚ್ಚಳ; ಆರೋಗ್ಯ; ಆರೋಗ್ಯ ಇಲಾಖೆ ಹೈ ಅಲರ್ಟ್!
ದೇಶದಲ್ಲಿ ಕೊರೊನಾ ಮತ್ತೆ ಹೆಚ್ಚಳ ಆಗ್ತಿದೆ.ಎಲ್ಲವನ್ನೂ ಮಾನಿಟರ್ ಮಾಡಲಾಗ್ತಿದೆ. ಕೇಸ್ ಗಳು ದಿನೇದಿನ ಹೆಚ್ಚಳವಾಗ್ತಿದೆಯೇ ಎಂದು ನೋಡಲಾಗತಿದೆ. ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರು ( ಡಿ.16) ದೇಶದಲ್ಲಿ ಕೊರೊನಾ ಮತ್ತೆ ಹೆಚ್ಚಳ ಆಗ್ತಿದೆ.ಎಲ್ಲವನ್ನೂ ಮಾನಿಟರ್ ಮಾಡಲಾಗ್ತಿದೆ. ಕೇಸ್ ಗಳು ದಿನೇದಿನ ಹೆಚ್ಚಳವಾಗ್ತಿದೆಯೇ ಎಂದು ನೋಡಲಾಗತಿದೆ. ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಳವಾಗ್ತಿರುವ ಹಿನ್ನೆಲೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ, ಇನ್ಫ್ಲುಯೆನ್ಸಾ ಸೇರಿದಂತೆ ಅನೇಕ ಸಮಸ್ಯೆ ಬರುತ್ತಿದೆ. ಈಗಾಗಲೇ ಅನೇಕ ಪ್ರೋಟೋಕಾಲ್ ಫಾಲೋ ಮಾಡಲಾಗ್ತಿದೆ. ಇಂದು ಸಂಜೆ ವಿಕಾಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ಈ ಕುರಿತು ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಏನೆಲ್ಲಾ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ತೀರ್ಮಾನ ತೆಗೆದುಕೊಳ್ಳುತ್ತೇವೆ.
Health and Pandemic: ಈಗಿರೋ ನಾಲ್ಕು ವೈರಸ್ಸೇ ಭವಿಷ್ಯದ ದೊಡ್ಡ ಸಾಂಕ್ರಾಮಿಕ!
ಕೇರಳದಲ್ಲಿ ಪ್ರಕರಣ ಹೆಚ್ಚಳವಾಗ್ತಿದೆ ಹೀಗಾಗಿ ಕೇರಳದಿಂದ ಬರುವ ಪ್ರಯಾಣಿಕರನ್ನ ಹೇಗೆ ಮಾನಿಟರ್ ಮಾಡಬೇಕು, ಕೋವಿಡ್ ಯಾವ ತರ ಇದೆ ಅದರ ಎಫೆಕ್ಟ್ ಆಗಿದೆ. ದು ಯಾವ ರೀತಿಯ ಪ್ರಭಾವ ಬೀರುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ವೈರಲ್ ಫೀವರ್, ನ್ಯುಮೋನಿಯಾ ಈ ವಾತಾವರಣದಲ್ಲಿ ಹೆಚ್ಚಿರುತ್ತದೆ. ಸದ್ಯಕ್ಕೆ ಆತಂಕ ಪಡುವ ಬೆಳವಣಿಗೆ ಏನೂ ಇಲ್ಲ. ಏನೆಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ. ಜನರಿಗೆ ಕೂಡ ಹೆಚ್ಚು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸೂಚನೆ ಕೊಡುತ್ತಿದ್ದೇವೆ ಎಂದರು.
ಹಾರ್ಟ್ ಅಟ್ಯಾಕ್ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇ.22 ಹೆಚ್ಚಳ: ಡಾ. ಸಿ.ಎನ್. ಮಂಜುನಾಥ್