Asianet Suvarna News Asianet Suvarna News

ಪತಿಯ ಬೆದರಿಸಲು ಹೋಗಿ ಬೆಂಕಿ ಹಚ್ಚಿಕೊಂಡ ಗರ್ಭಿಣಿ ಪತ್ನಿ: ಮಗು ಸಾವು

ಗರ್ಭಿಣಿಯೊಬ್ಬಳು ತನ್ನ ಪತಿಗೆ ಬೆದರಿಸಲು ಹೋಗಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪರಿಣಾಮ  ಹೊಟ್ಟೆಯಲ್ಲಿದ್ದ ಏಳು ತಿಂಗಳ ಮಗು ಮೃತಪಟ್ಟಿದೆ.  

Kerala Pregnant wife sets herself on fire after threatening her husband child dies akb
Author
First Published Jan 6, 2023, 1:01 PM IST

ತಿರುವನಂತಪುರ:  ಗರ್ಭಿಣಿಯೊಬ್ಬಳು ತನ್ನ ಪತಿಗೆ ಬೆದರಿಸಲು ಹೋಗಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪರಿಣಾಮ  ಹೊಟ್ಟೆಯಲ್ಲಿದ್ದ ಏಳು ತಿಂಗಳ ಮಗು ಮೃತಪಟ್ಟಿದೆ.  ಆಕೆಯ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 27 ವರ್ಷ ಪ್ರಾಯದ ಅರುಣಿಮಾ ಎಂದು ಗುರುತಿಸಲಾಗಿದೆ.  ಘಟನೆಯ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊಟ್ಟೆಯಲ್ಲೇ ಮೃತಪಟ್ಟ ಮಗುವನ್ನು ಹೊರ ತೆಗೆದು ಮಹಿಳೆಯನ್ನು ಉಳಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಮಹಿಳೆ ಅರುಣಿಮಾ ಪತಿ ಅಜಯ್ ಪ್ರಕಾಶ್ ( Ajay Prakash) ಯೋಧನಾಗಿದ್ದು, (Soldier) ರಜೆಯ ಮೇಲೆ ಊರಿಗೆ ಬಂದಿದ್ದಾಗ ಈ ಅನಾಹುತ ನಡೆದಿದೆ.  ಇಬ್ಬರೂ ಪರಸ್ಸಲಾ ಮುರ್ಯಾಂಕರದ( Parassala Muryankara) ನಿವಾಸಿಗಳಾಗಿದ್ದಾರೆ.  ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ಪರಿಣಾಮ ಅರುಣಿಮಾಗೆ ತೀವ್ರ ಗಾಯಗಳಾಗಿದ್ದರೆ, ಇತ್ತ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ.  ಘಟನೆ ನಡೆದ ಸಮಯದಲ್ಲಿ ಬೇರೆ ಯಾರೂ ಮನೆಯಲ್ಲಿ ಇರಲಿಲ್ಲ.  ಅರುಣಿಮಾ (Arunima) ಕೂಡ ಅಜಯ್ ಜೊತೆಯೇ  ಆತ ಕೆಲಸ ಮಾಡುವ ಸ್ಥಳದಲ್ಲೇ ವಾಸವಿದ್ದು, ಇತ್ತೀಚೆಗೆ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು.  ಆದರೆ ಇವರಿಬ್ಬರ ಮಧ್ಯೆ ಯಾವುದೇ ಕೌಟುಂಬಿಕ ಸಮಸ್ಯೆ ಇರಲಿಲ್ಲ ಎಂದು ತಿಳಿದು ಬಂದಿದೆ.  ವಾರದ ಹಿಂದೆಯೇ ಘಟನೆ ನಡೆದಿದ್ದು,  ಮೊದಲಿಗೆ ಅರುಣಿಮಾಳನ್ನು ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ತಿರುವನಂತಪುರದ (Thiruvananthapuram) ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

Mandya: ಧನದಾಹಿ ಪತಿಯ ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಪತ್ನಿ ಬಲಿ?..! ಕೊಲೆ ಶಂಕೆ

ಅರುಣಿಮಾ ದೇಹದ ಶೇಕಡಾ 60 ಸುಟ್ಟಗಾಯಗಳಾಗಿದ್ದು,  ಅರುಣಿಮಾ ಹೊಟ್ಟೆಯಲ್ಲಿದ್ದ ಮಗು ಅಲ್ಲೇ ಮೃತಪಟ್ಟಿದೆ. ರಜೆ ಮುಗಿಸಿ ಪತಿ ಮತ್ತೆ ಕರ್ತವ್ಯಕ್ಕೆ ತೆರಳಲು ಹೊರಟ ಸಂದರ್ಭದಲ್ಲಿ ಈಕೆ ಈ ಕೃತ್ಯವೆಸಗಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಇವರು ವಾಸವಿದ್ದ ಮನೆಯನ್ನು ಜಪ್ತಿ ಮಾಡಿದ್ದಾರೆ.  ಅಲ್ಲದೇ ನ್ಯಾಯಾಧೀಶರ ಸಮ್ಮುಖದಲ್ಲಿ ಅರುಣೀಮಾ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.  ಈ ವೇಳೆ ಆಕೆ ಗಂಡನನ್ನು ಹೆದರಿಸುವ ಸಲುವಾಗಿ ಈ ಕೃತ್ಯವೆಸಗಿದ್ದಾಗಿ ಎಂದು ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಅಲ್ಲದೇ ಆಕೆಯ ತಂದೆಯೂ ಕೂಡ ಇದೇ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. 

ಮಹಿಳೆ ಗರ್ಭಿಣಿಯೆಂದು ತಿಳಿದು ಕೆಲಸದಿಂದ ವಜಾ ಮಾಡಿದ ಅಧಿಕಾರಿ, 15 ಲಕ್ಷ ರೂ. ದಂಡ !

Follow Us:
Download App:
  • android
  • ios