Asianet Suvarna News Asianet Suvarna News

ಇಂಧನ ತುಂಬಿಸ್ಕೊಂಡು ಹಣ ಕೊಡದ ಪೊಲೀಸ್; ತಡೆದ ಸಿಬ್ಬಂದಿಯನ್ನ ಕಾರ್ ಬಾನೆಟ್‌ ಮೇಲೆ 1 ಕಿ.ಮೀ. ಎಳೆದೊಯ್ದ!

ಪೊಲೀಸ್ ಅಧಿಕಾರಿ ಇಂಧನ ತುಂಬಿಸಿಕೊಂಡಿದ್ದಾನೆ. ಸಿಬ್ಬಂದಿ ಹಣ ಕೇಳಿದಾಗ ಪಾವತಿಸಲು ನಿರಾಕರಿಸಿ ಕಾರ್ ಸ್ಟಾರ್ಟ್ ಮಾಡಿದ್ದಾನೆ.

Kerala police officer Drags Petrol Pump Staffer On car Bonnet cctv footage viral mrq
Author
First Published Jul 17, 2024, 9:09 AM IST | Last Updated Jul 17, 2024, 9:09 AM IST

ತಿರುವನಂತಪುರ: ಪೊಲೀಸ್ ಅಧಿಕಾರಿಯೋರ್ವ (Police Officer) ಕಾರ್ ಬಾನೆಟ್ (Car Bonnet) ಮೇಲೆ ಪೆಟ್ರೋಲ್ ಪಂಪ್ ಸಿಬ್ಬಂದಿಯೋರ್ವರನ್ನು ಸುಮಾರು 1 ಕಿಲೋಮೀಟರ್ ದೂರ ಎಳೆದೊಯ್ದಿದ್ದಾನೆ. ಪೆಟ್ರೋಲ್ ಪಂಪ್ ಸಿಬ್ಬಂದಿಯನ್ನು (Petrol Pump Staff) ಎಳೆದೊಯ್ದಿದಿರುವ ವಿಡಿಯೋ (video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಗಾಯಾಳು ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಭಾನುವಾರ ಕೇರಳದ ಕಣ್ಣೂರು (Kerala's Kannur district) ನಗರದಲ್ಲಿ ನಡೆದಿದೆ. ಕೆ.ಸಂತೋಷ್ ಕುಮಾರ್ ಅಮಾನತುಗೊಳಗಾದ ಅಧಿಕಾರಿ. ಕಣ್ಣೂರು ನಗರ ಪೊಲೀಸ್ ಕಮಿಷನರ್ ಮಂಗಳವಾರ ಅಮಾನತಿನ ಆದೇಶ ಹೊರಡಿಸಿದ್ದಾರೆ. 

ಭಾನುವಾರ ಮಧ್ಯಾಹ್ನ 3.30ಕ್ಕೆ ಬಂದ ಕಾರ್‌ನಲ್ಲಿ ಬಂದ ಸಂತೋಷ್ ಕುಮಾರ್, ಇಂಧನ ತುಂಬಿಸಿಕೊಂಡಿದ್ದಾನೆ. ಸಿಬ್ಬಂದಿ ಹಣ ಕೇಳಿದಾಗ ಪಾವತಿಸಲು ನಿರಾಕರಿಸಿ ಕಾರ್ ಸ್ಟಾರ್ಟ್ ಮಾಡಿದ್ದಾನೆ. ಈ ವೇಳೆ ಅಲ್ಲಿದ್ದ ಪೆಟ್ರೋಲ್ ಪಂಪ್ ಸಿಬ್ಬಂದಿ ಅನಿಲ್ ಕಾರ್ ತಡೆಯಲು ಮುಂದಾಗಿದ್ದಾರೆ. ಕಾರ್ ಚಲಿಸುತ್ತಿದ್ದಂತೆ ಅನಿಲ್ ಮುಂದೆ ಬಂದು ನಿಲ್ಲಿಸಿದ್ದಾರೆ. ಇಷ್ಟಾದ್ರೂ ಸಂತೋಷ್ ಕುಮಾರ್ ಕಾರ್ ವೇಗ ಹೆಚ್ಚಳ ಮಾಡಿದ್ದರಿಂದ ಭಯಗೊಂಡ ಅನಿಲ್ ಬಾನೆಟ್ ಮೇಲೆ ಹತ್ತಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬಾಯಾರಿದಾಗ ಮೂತ್ರ ಕುಡಿದೆ, ಕೈ ಕಾಲು ನೆಕ್ಕಿದೆ: ಲಿಫ್ಟಲ್ಲಿ 42 ಗಂಟೆ ನರಕ ಯಾತನೆ ಬಿಚ್ಚಿಟ್ಟ ವ್ಯಕ್ತಿ!

ಕೊಲೆ ಯತ್ನ ಪ್ರಕರಣ ದಾಖಲು

ಅನಿಲ್ ಬಾನೆಟ್ ಮೇಲೆ ಬಿದ್ದರೂ ಕಾರ್ ನಿಲ್ಲಿಸದೇ ಸಂತೋಷ್ ಕುಮಾರ್ ವೇಗವಾಗಿ ಹೋಗಿದ್ದಾನೆ. ಸುಮಾರು 1 ಕಿ.ಮೀ. ದೂರ ಹೋದ ಬಳಿಕ ಕಾರ್ ನಿಲ್ಲಿಸಲಾಗಿದೆ. ಜನನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.ಗಾಯಾಳು ಅನಿಲ್ ಸಹ ಪೊಲೀಸ್ ಠಾಣೆಗೆ ತೆರಳಿ ಸಂತೋಷ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಸಂತೋಷ್ ಕುಮಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. 

ಗಾಯಾಳು ಅನಿಲ್ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿ ನಮ್ಮ ಗಮನಕ್ಕೂ ಬಂದಿದೆ. ಆರೋಪಿ ಸಂತೋಷ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಮೆರವಣಿಗೆಯೊಂದಿಗೆ ಮಂಟಪಕ್ಕೆ ತೆರಳುತ್ತಿದ್ದ ವರನ ಬಂಧಿಸಿದ ಪೊಲೀಸ್, ಬಳಿಕ ನಡೆದಿದ್ದೇ ದುರಂತ!

Latest Videos
Follow Us:
Download App:
  • android
  • ios