ಕೊರೋನಾ ರೂಲ್ಸ್ ಫಾಲೋ ಮಾಡಿದ ನವಜೋಡಿಗಾಗಿ ಪೊಲೀಸರ ಹುಡುಕಾಟ
ಹೆಚ್ಚಾದ ಕೊರೋನಾ ಮಧ್ಯೆಯೇ ಮದುವೆ | ರೂಲ್ಸ್ ಫಾಲೋ ಮಾಡಿದ ಜೋಡಿಗೆ ಸಿಕ್ತು ಬಂಪರ್
ತಿರುವನಂತಪುರ(ಮೇ.05): COVID-19 ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಪರದಾಡುತ್ತಿರುವ ಸಂದರ್ಭ ಕೇರಳ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾ ಅದರ ಜೊತೆ ಜೊತೆಗೇ ವಿಶೇಷ ಕೆಲಸವೊಂದನ್ನು ಮಾಡುತ್ತಿದ್ದಾರೆ.
ತಾಜಾ ಹೂಗಳಿಂದ ಮಾಡಿದ ಬಣ್ಣದ ಹೂಗುಚ್ಛ ಮತ್ತು ಮೆಚ್ಚುಗೆ ಪತ್ರದೊಂದಿಗೆ ಮನೆಗಳ ಬಾಗಿಲು ಬಡಿಯುತ್ತಿದ್ದಾರೆ. ಹಲವು ಮನೆಗಳಲ್ಲಲಿ ಪೊಲೀಸರ ಇಂತಹ ಸರ್ಪೈಸ್ ಸಿಕ್ಕಿದೆ.
ಇಲ್ಲಿನ ಪೊಲೀಸ್ ಅಧಿಕಾರಿಗಳು ತಮ್ಮ ವಿವಾಹದ ಸಮಯದಲ್ಲಿ ಧಾರ್ಮಿಕವಾಗಿ ಸುರಕ್ಷತಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿವಾಹಿತರಾದ ದಂಪತಿಗಳನ್ನು ಅಭಿನಂದಿಸಿದ್ದಾರೆ. ಹಾಗೆಯೇ ಅವರ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವುದರ ಜೊತೆ ಎಲ್ಲಾ ಆಹ್ವಾನಿತರಿಗೆ ಸುರಕ್ಷಿತರನ್ನಾಗಿಸಿದ್ದಾರೆ.
ಕೊರೋನಾ ಡ್ಯೂಟಿ ಮಾಡೋ ಮೆಡಿಕಲ್ ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹ ಧನ
ನಾವು ಈವರೆಗೆ ಸುಮಾರು 40 ಮೆಚ್ಚುಗೆ ಪ್ರಮಾಣಪತ್ರಗಳನ್ನು ಕೋಝಿಕೋಡ್ ಗ್ರಾಮೀಣ ಪೊಲೀಸ್ ಜಿಲ್ಲೆಯೊಳಗೆ ಹೊಸದಾಗಿ ಮದುವೆಯಾದವರಿಗೆ ವಿತರಿಸಿದ್ದೇವೆ. ಈ ಸಾಂಕ್ರಾಮಿಕ ಸಮಯದ ಮಧ್ಯೆ ಅವರ ಸಹಕಾರವನ್ನು ಅಂಗೀಕರಿಸುವುದಕ್ಕಾಗಿ ನಾವು ಸರ್ಪೈಸ್ ಉಡುಗೊರೆಗಳಾಗಿ ನೀಡುವುದರಿಂದ ದಂಪತಿಗಳು ಎಲ್ಲರೂ ಬಹಳ ಉತ್ಸುಕರಾಗಿದ್ದರು ಎಂದು ಕೋಝಿಕೋಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ. ಶ್ರೀನಿವಾಸ್ ತಿಳಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಅಂತಹ ದಂಪತಿಗಳನ್ನು ವೈಯಕ್ತಿಕವಾಗಿ ಕರೆಯುತ್ತೇನೆ ಅಥವಾ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲು ತನ್ನ ಸಹೋದ್ಯೋಗಿಗಳನ್ನು ನಿಯೋಜಿಸುತ್ತೇನೆ ಎಂದು ಅವರು ಹೇಳಿದ್ದಾರೆ.