ಏಷ್ಯಾನೆಟ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ಕೇರಳದ ಮಾಜಿ ಜಡ್ಜ್ ಸುದೀಪ್ ವಿರುದ್ಧ ಕೇರಳ ಪೊಲೀಸರು ಕೊನೆಗೂ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಕೊಚ್ಚಿ: ಏಷ್ಯಾನೆಟ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ಕೇರಳದ ಮಾಜಿ ಜಡ್ಜ್ ಸುದೀಪ್ ವಿರುದ್ಧ ಕೇರಳ ಪೊಲೀಸರು ಕೊನೆಗೂ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ಪರ ವಹಿಸಿ ಮಾಜಿ ಜಡ್ಜ್ ಸುದೀಪ್ ಏಷ್ಯಾನೆಟ್ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈಗ ತಿರುವನಂತಪುರಂ ಸಿಟಿ ಪೊಲೀಸ್ ಠಾಣೆಯಲ್ಲಿ ಸುದೀಪ್ ವಿರುದ್ಧ ಐಟಿ ಆ್ಯಕ್ಟ್‌ನ ಸೆಕ್ಷನ್ 67ರ ಅಡಿ ಹಾಗೂ ಐಪಿಸಿ ಸೆಕ್ಷನ್ 354ಒ(i)(Iv)
ಅಡಿಯಲ್ಲಿ ಕೇಸು ದಾಖಲಾಗಿದೆ.
ಸರ್ಕಾರದ ಹಲವು ತಪ್ಪು ನಿರ್ಧಾರಗಳನ್ನು ವರದಿ ಮಾಡಿ ಕೇರಳ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಎಕ್ಸಿಕ್ಯೂಟಿವ್ ಎಡಿಟರ್ ಸಿಂಧು ಸೂರ್ಯಕುಮಾರ್ ಅವರ ವಿರುದ್ಧ ಎಡರಂಗ ಬೆಂಬಲಿತ ಮಾಜಿ ಜಡ್ಜ್ ಫೇಸ್‌ಬುಕ್‌ನಲ್ಲಿ ತಮ್ಮ ಘನತೆಯ ಬಗ್ಗೆಯೂ ಯೋಚಿಸದೇ ಕೆಟ್ಟದಾದ ಬರಹ ಬರೆದಿದ್ದರು. ಕೇರಳದ ಎಡರಂಗಪರ ಸಹಾನುಭೂತಿ ಹೊಂದಿರುವ ಮಾಜಿ ಜಡ್ಜ್ ಸುದೀಪ್ ಬರಹಕ್ಕೆ ನೆಟ್ಟಿಗರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರವು ದೇಶದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಖ್ಯವಾಹಿನಿ ಮತ್ತು ಆನ್‌ಲೈನ್ ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ ನ್ಯಾಯದ ಸ್ಥಾನದಲ್ಲಿರಬೇಕಾದ ನ್ಯಾಯಾಧೀಶರು ಸರ್ಕಾರದ ಪರ ವಹಿಸಿಕೊಂಡು ಅಶ್ಲೀಲ ಪೋಸ್ಟ್ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿಂದೆ ಹಿಂದೂ ತೀರ್ಥಕ್ಷೇತ್ರ ಶಬರಿಮಲೆಯ ಕುರಿತು ತಮ್ಮ ಪೋಸ್ಟ್‌ಗಳಿಗೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಂತರ ಈ ಜಡ್ಜ್ 2021ರಲ್ಲಿ ತಮ್ಮ ಜಡ್ಜ್ ಹುದ್ದೆ ಸುದೀಪ್ ರಾಜೀನಾಮೆ ನೀಡಿದ್ದರು. ಏಷ್ಯಾನೆಟ್ ಸಬ್ ಎಡಿಟರ್ ಸಿಂಧೂ ಸೂರ್ಯಕುಮಾರ್ ಅವರು, ತಮ್ಮ ಕವರ್ ಸ್ಟೋರಿಗಳ ಮೂಲಕ ಕೇರಳದಲ್ಲಿ ಅಧಿಕಾರದಲ್ಲಿರುವ ಪಿಣರಾಯಿ ಸರ್ಕಾರದ ತಪ್ಪುಗಳನ್ನು ಜನರ ಮುಂದಿಡಲು ಶುರು ಮಾಡಿದ್ದರು. ಈ ಕವರ್ ಸ್ಟೋರಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಪ್ಪು ನಡೆಗಳ ವಿರುದ್ಧ ತೀಕ್ಷ್ಣವಾದ ಟೀಕೆ ಮತ್ತು ನೇರ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ. ಈ ಕವರ್ ಸ್ಟೋರಿ ವಿರುದ್ಧ ಈಗ ಸುದೀಪ್ ಅಶ್ಲೀಲವಾಗಿ ಬರೆದಿದ್ದಲ್ಲೇ ಈ ಕಾರ್ಯಕ್ರಮ ಮಾಡುವ ಸಬ್ ಎಡಿಟರ್ ಸಿಂಧು ಸೂರ್ಯಕುಮಾರ್ ವಿರುದ್ಧ ಫೇಸ್‌ಬುಕ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!
'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್ ಜಾಥಾದಲ್ಲಿ ಘೋಷಣೆ!
