ಶ್ವಾನವೊಂದು ತನ್ನ ಮಾಲೀಕನೊಂದಿಗೆ ಕೆಲಸಕ್ಕೆ ಸಹಕರಿಸುತ್ತಾ ಮನೆಯ ಹಸುವಿಗಾಗಿ ತೋಟದಿಂದ ಹುಲ್ಲು ತರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳ: ಶ್ವಾನ ಮನುಷ್ಯನ ಬೆಸ್ಟ್ ಫ್ರೆಂಡ್ ಈ ಮಾತನ್ನು ಎಷ್ಟು ಸಲ ಹೇಳಿದರೂ ಕಡಿಮೆಯೇ. ಶ್ವಾನದ ಸ್ವಾಮಿನಿಷ್ಠೆ ಮಾಲೀಕನ ಮೇಲೆ ಅದರ ನಿಷ್ಕಲ್ಮಶ ಪ್ರೀತಿಯೇ ಸಾಕು ಶ್ವಾನ ಹಾಗೂ ಮನುಷ್ಯನ ನಡುವಿನ ಒಡನಾಟ ಎಂತಹದ್ದು ಎಂದು ತಿಳಿಸಲು. ಶ್ವಾನ ಹಾಗೂ ಮಾಲೀಕನ ನಡುವಿನ ಅಮೋಘ ಪ್ರೀತಿಯನ್ನು ತೋರಿಸುವ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅದೇ ರೀತಿ ಈಗ ಶ್ವಾನವೊಂದು ತನ್ನ ಮಾಲೀಕನೊಂದಿಗೆ ಕೆಲಸಕ್ಕೆ ಸಹಕರಿಸುತ್ತಾ ಮನೆಯ ಹಸುವಿಗಾಗಿ ತೋಟದಿಂದ ಹುಲ್ಲು ತರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಮಗೂ ಇಂತಹ ಶ್ವಾನವೊಂದಿದ್ದರೆ ಕೊಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ದೇವರನಾಡು ಕೇರಳದ (Kerala) ವೀಡಿಯೋ ಇದಾಗಿದ್ದು, ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ಕಪ್ಪು ಬಣ್ಣದಿಂದ ಮಿರಿ ಮಿರಿ ಮಿಂಚುವ ಈ ಶ್ವಾನ ಮಾಲೀಕನ ಜೊತೆ ತನ್ನದು ಒಂದು ಇರಲಿ ಎಂದು ಪುಟಾಣಿ ಹುಲ್ಲಿನ ಹೊರೆಯೊಂದನ್ನು ಬಾಯಿಯಲ್ಲಿ ಕಚ್ಚಿ ಹೊತ್ತುಕೊಂಡು ಬರುತ್ತಿದೆ. ರಾಕಿ (Rockey) ಎಂಬ ಈ ಹೆಸರಿನ ಶ್ವಾನ ಅವರಿಗೆ ಮನೆ ಮಗನಂತೆ ಇದ್ದು ಮಾಲೀಕ (Owner) ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಈ ಶ್ವಾನ ಇರುತ್ತದೆ. ಅಷ್ಟು ದೂರದಿಂದ ಹುಲ್ಲನ್ನು ಹೊತ್ತು ಸಾಗಿ ಬರುವ ಕರಿ ಬಣ್ಣದ ಮುದ್ದು ಶ್ವಾನ ನಂತರ ಸುಸ್ತಾಗಿ ಮೇಲುಸಿರು ತೆಗೆಯುತ್ತ ಕುಳಿತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ತನ್ನೊಂದಿಗೆ ಹುಲ್ಲನ್ನು ಹೊತ್ತು ತರುವುದಲ್ಲದೇ ತಾನು ಹೋದಲೆಲ್ಲಾ ಬರುವ ಮಾಲೀಕನ ಈ ಪ್ರೀತಿಯ ಸಂಗಾತಿಗೆ ಮಾಲೀಕ ಮುತ್ತಿಟ್ಟು ಮುದ್ದಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಹುಲ್ಲಿನ ಭಾರವಾದ ಹೊರೆಯ ಜೊತೆ ಬಾಲವನ್ನು ಆಡಿಸುತ್ತಲೇ ಖುಷಿಯಿಂದ ಬರುವ ಈ ಶ್ವಾನವನ್ನು ನೋಡುವುದೇ ಕಣ್ಣಿಗೊಂದು ಸೊಗಸು. ಒಟ್ಟಿನಲ್ಲಿ ಈ ವೀಡಿಯೋ ನೋಡುಗರ ಮೊಗದಲ್ಲಿ ನಗು ತರಿಸುವ ಜೊತೆ ಅನೇಕರಿಗೆ ಖುಷಿ ನೀಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ : https://www.instagram.com/p/Ctawreeg9cz/
ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!
ಕೋಳಿಯಂತೆ ಕೂಗುತ್ತೆ ನಾಯಿ
ಕೆಲ ದಿನಗಳ ಹಿಂದೆ ಕೋಳಿಯಂತೆ ಕೂಗುವ ನಾಯಿಯೊಂದರ ವೀಡಿಯೋ ಸಖತ್ ವೈರಲ್ ಆಗಿತ್ತು. ನಾಯಿ ಬೌ ಬೌ, ಬೆಕ್ಕು ಮಿಯಾಂ, ಕೋಳಿ ಕೊಕ್ಕೋಕೋ ಎಂದು ಕೂಗುವುದು ಸಾಮಾನ್ಯ ರೂಡಿ. ಕಾಲ ಅದೆಷ್ಟೇ ಬದಲಾದರೂ ಈ ಪ್ರಾಣಿಗಳ ಧ್ವನಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಇಲ್ಲೊಂದೆಡೆ, ನಾಯಿ, ಕೋಳಿಯಂತೆ ಕೂಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ವೀಡಿಯೊದಲ್ಲಿ, ಕೆಲವು ಕೋಳಿಗಳೊಂದಿಗೆ ಹೂಂಜ ಕಾಣಿಸಿಕೊಂಡಿದೆ. ಕೋಳಿಯ ಹತ್ತಿರ ನಾಯಿಯೂ ಕಾಣುತ್ತದೆ. ಹುಂಜವು ಜೋರಾಗಿ ಕೂಗಲು ಪ್ರಾರಂಭಿಸುತ್ತದೆ. ಕೋಳಿ ಕೂಗಿ ನಿಂತ ತಕ್ಷಣ ನಾಯಿ ಅದನ್ನು ಅನುಕರಿಸಿ ಕೂಗಲು ಆರಂಭಿಸುತ್ತದೆ. ಅದು ಹುಂಜಕ್ಕೆ ಸರಿಸಾಟಿಯಾಗದಿದ್ದರೂ, ಕೋಳಿಯಂತೆ ಕೂಗಲು ನಾಯಿ ಸಂಪೂರ್ಣ ಪ್ರಯತ್ನ ಮಾಡಿದೆ.
'ನಾಯಿ' ಪಾಡಲ್ಲ..ಲಕ್ಸುರಿ ಲೈಫ್, ಗೋಲ್ಡನ್ ರೆಟ್ರೀವರ್‌ನಿಂದ ಕೋಟಿ ಕೋಟಿ ಗಳಿಸ್ತಿದ್ದಾರೆ ದಂಪತಿ!
ದಿ ಬೆಸ್ಟ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ರಂಜಿಸುತ್ತಿದೆ. ಇದೀಗ, ವೀಡಿಯೊ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಕಾಮೆಂಟ್ ಬಾಕ್ಸ್ ನಗುವ ಎಮೋಜಿಗಳಿಂದ ತುಂಬಿದೆ. ನೆಟ್ಟಿಗರು ಈ ವೀಡಿಯೋ ನೋಡಿ ನಾನಾ ರೀತಿಯಲ್ಲಿ ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಕಲಿಯುಗದಲ್ಲಿ ಇನ್ನು ಏನೆಲ್ಲಾ ನೋಡ್ಬೇಕಿದೆಯೋ' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬರು 'ಕೋಳಿ ಪಕ್ಕದಲ್ಲಿರುವ ಕಾರಣ ನಾಯಿ ಸಹ ಕೂಗುವುದು ಹೇಗೆಂದು ಗೊಂದಲಕ್ಕೊಳಗಾಗಿದೆ' ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, 'ವಿವಿಧ ಪ್ರಾಣಿಗಳ ನಡುವಿನ ಸಂವಹನ' ಇದಾಗಿರಬಹುದು ಎಂದಿದ್ದಾರೆ.
