ಕುವೈತ್: ಗಲ್ಫ್‌ನ ಬ್ಯಾಂಕ್‌ಗಳಿಗೆ ಕೇರಳ ನರ್ಸ್‌ಗಳ ಮಹಾ ಮೋಸ: ವಂಚಿಸಿದ್ದೆಷ್ಟು ಕೋಟಿ?
ಕೇರಳ ಮೂಲದ ನರ್ಸ್‌ಗಳು ಗಲ್ಫ್ ರಾಷ್ಟ್ರಗಳ ಬ್ಯಾಂಕ್‌ಗಳಿಗೆ ಸುಮಾರು 700 ಕೋಟಿ ರೂಪಾಯಿ ವಂಚಿಸಿ ಐರೋಪ್ಯ ರಾಷ್ಟ್ರಗಳಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಕೊಚ್ಚಿ: ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಜನ ಭಾರತೀಯರು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ವಾಹನ ನಿರ್ಮಾಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕಿಂಗ್ , ಹೊಟೇಲ್, ಆಸ್ಪತ್ರೆ ಸೇರಿದಂತೆ ಅರಬ್ ರಾಷ್ಟ್ರ ಹಲವು ಕ್ಷೇತ್ರಗಳಲ್ಲಿಗಳಲ್ಲಿ ಲಕ್ಷಾಂತರ ಜನ ಭಾರತೀಯರು ದುಡಿಮೆ ಮಾಡುತ್ತಿದ್ದು, ದುಬೈ, ಅಬುಧಾಬಿ, ಗಲ್ಫ್, ಸೌದಿ ಅರೇಬಿಯಾ ಮುಂತಾದ ಯುಎಇ ದೇಶಗಳಲ್ಲಿ ಕೆಲಸ ಮಾಡುವುದು ಹಲವು ಯುವಕರ ಕನಸಾಗಿದೆ. ಕೇರಳ ಹಾಗೂ ರಾಜ್ಯದ ಕರಾವಳಿಯ ಅನೇಕ ಯುವಕ ಯುವತಿಯರು ಗಲ್ಪ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕುಟುಂಬದಕ್ಕೆ ಶ್ರೀಮಂತಿಕೆಯ ಬದುಕು ನೀಡುತ್ತಿದ್ದಾರೆ. ಹೀಗಿರುವಾಗ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.
ಗಲ್ಫ್‌ನ ಬ್ಯಾಂಕ್‌ಗೆ ಕೇರಳ ಮೂಲದ 100ಕ್ಕೂ ನರ್ಸ್‌ಗಳು ಸುಮಾರು 700 ಕೋಟಿಯಷ್ಟು ವಂಚನೆ ಮಾಡಿ ಐರೋಪ್ಯದ ರಾಷ್ಟ್ರಗಳಿಗೆ ಪರಾರಿಯಾಗಿದ್ದಾರೆ ಎಂಬ ವರದಿಯೊಂದು ಬಂದಿದ್ದು, ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಬಯಸುತ್ತಿರುವವರನ್ನು ದಂಗು ಬಡಿಯುವಂತೆ ಮಾಡಿದೆ. ಅಂದಹಾಗೆ ಇವರೆಲ್ಲರೂ ಕೇರಳ ಮೂಲದ ನರ್ಸ್‌ಗಳೇ ಆಗಿದ್ದಾರೆ ಎಂಬುದು ಅಚ್ಚರಿಯ ವಿಚಾರವಾಗಿದೆ. ಕುವೈತ್‌ನ ಆರೋಗ್ಯ ಸಚಿವಾಲಯದಲ್ಲಿ ಈ ನರ್ಸ್‌ಗಳು ಉದ್ಯೋಗದಲ್ಲಿದ್ದರು. ಇವರು ಕುವೈತ್ ಗರ್ಲ್‌ನ ಬ್ಯಾಂಕ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾಲ ಮಾಡಿ ಬಳಿ ಅದನ್ನು ಸಂಪೂರ್ಣಾಗಿ ಕಟ್ಟದೇ ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ಐರೋಪ್ಯ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ವರದಿ ಆಗಿದೆ. ಈ ಲೋನ್ ಅಥವಾ ಸಾಲವನ್ನು ವಾಪಸ್ ಕಟ್ಟುವುದರಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ವಿಚಾರಿಸಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಈ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿದ್ದು, ಗಲ್ಫ್ ಬ್ಯಾಂಕ್‌ಗಳಿಗೆ ಈ ಮೋಸ ಮಾಡಿದ ಕೇರಳ ನರ್ಸ್‌ಗಳ ವಿರುದ್ಧ ಕೇರಳದಲ್ಲಿ ಹಲವು ಪ್ರಕರಣ ದಾಖಲಾಗಿದೆ.
ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಪ್ರಾರಂಭದಲ್ಲಿ ಬ್ಯಾಂಕ್‌ಗಳ ವಿಶ್ವಾಸ ಗಳಿಸಿದ್ದ ಈ ನರ್ಸ್‌ಗಳು 35 ಸಾವಿರ ಕುವೈತ್ ದಿನಾರ್ ನಿಂದ 45 ಸಾವಿರ ಕುವೈತ್ ದಿನಾರ್ ರೇಂಜ್‌ನಲ್ಲಿ ಸಾಲ ಮಾಡಿದ್ದಾರೆ. ಭಾರತೀಯ ರೂಪಾಯಿಗಳಲ್ಲಿ ಇವುಗಳ ಮೊತ್ತ 96 ಲಕ್ಷದಿಂದ 1 ಕೋಟಿ ರೂ. ಅಧಿಕವಾಗಿದೆ. ಆರಂಭದಲ್ಲಿ ಈ ನರ್ಸ್‌ಗಳೆಲ್ಲರೂ ಸಮರ್ಪಕವಾಗಿ ಸಾಲದ ಕಂತನ್ನು ಪಾವತಿ ಮಾಡಿದ್ದಾರೆ. ಈ ಮೂಲಕ ಅಲ್ಲಿನ ಬ್ಯಾಂಕ್‌ಗಳ ವಿಶ್ವಾಸ ಗಳಿಸಿದ್ದಾರೆ. ಆದರೆ ಪಶ್ಚಿಮಾತ್ಯ ದೇಶಗಳಲ್ಲಿ ಉತ್ತಮ ಅವಕಾಶ ಸಿಕ್ಕಿದಾಗ ಈ ನರ್ಸ್‌ಗಳು ಅಲ್ಲಿಗೆ ವಲಸೆ ಹೋಗಲು ಮುಂದಾಗಿದ್ದು, ಈ ಲೋನ್ ಹಣವನ್ನು ಪಾವತಿ ಮಾಡದೇ ಹೊರಟು ಹೋಗಿದ್ದಾರೆ. ಇವರ ಸಾಲದ ಮೊತ್ತ ವಿಳಂಬವಾಗುತ್ತಾ ಹೋದಂತೆ ತನಿಖೆಗಿಳಿದ ಬ್ಯಾಂಕ್ ಸಿಬ್ಬಂದಿಗೆ ಇವರು ದೇಶ ಬಿಟ್ಟು ಹೋಗಿ ಮಹಾವಂಚನೆ ಮಾಡಿರುವುದು ತಿಳಿದು ಬಂದಿದೆ.
ಆಂಗ್ಲ ಮಾಧ್ಯಮ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕೇರಳದ 1425 ನರ್ಸ್‌ಗಳು ಈ ಮಹಾವಂಚನೆಯಲ್ಲಿ ಭಾಗಿಯಾಗಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಕೇರಳ ಹಾಗೂ ಭಾರತದ ನರ್ಸ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಲಾಭ ಪಡೆದು ನರ್ಸ್‌ಗಳು ಈ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ. ಯುಕೆ, ಆಸ್ಟೇಲಿಯಾ, ಕೆನಡಾ ಸೇರಿದಂತೆ ಇತರ ದೇಶಗಳಿಗೆ ಇವರು ಹೊರಟು ಹೋಗುತ್ತಿದ್ದಂತೆ ತಾವು ಸಾಲ ಪಡೆದ ಬ್ಯಾಂಕ್‌ನೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಿಕೊಂಡಿದ್ದಾರೆ. ಅಲ್ಲದೇ ಕೆಲವರು ಈ ಹಣದಲ್ಲಿ ಕೇರಳದಲ್ಲಿ ಐಷಾರಾಮಿ ಆಸ್ತಿಗಳನ್ನು ಖರೀದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳ ಮನವಿಯ ಮೇರೆಗೆ ಕೇರಳದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಈಗಾಗಲೇ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಅದರಲ್ಲೂ ಎರ್ನಾಕುಲಂ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಹೆಚ್ಚಿನ ಎಫ್‌ಐಆರ್‌ಗಳು ದಾಖಲಾಗಿವೆ. ಕೆಲವರು ಆರೋಪಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ತನಿಖೆ ಆರಂಭಿಸಿದ ಪೊಲೀಸರಿಗೆ ಗಲ್ಫ್‌ನ ಬ್ಯಾಂಕುಗಳ ಆರೋಪಿಗಳ ಬಗ್ಗೆ ತನಿಖೆಗೆ ಸಹಾಯ ಆಗಲು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ.