ಕೇರಳದಲ್ಲಿ ನೆರೆಮನೆಯವರ ನಡುವೆ ಕಸ ಗುಡಿಸುವ ವಿಚಾರಕ್ಕೆ ಜಗಳ ನಡೆದಿದ್ದು, ಮಹಿಳೆ ಮತ್ತು ಪುರುಷ ಇಬ್ಬರೂ ಪೊರಕೆಯಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ದೇಶ ಗ್ರಾಮೀಣ ಹಿನ್ನೆಲೆಯ ದೇಶವಾಗಿದೆ. ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸ ಮಾಡುವ ನಾವು ಮನೆಯ ಕಸ ಬೀಸಾಡುವುದು ಅಥವಾ ಮನೆಯಂಗಳದ ಕಸವನ್ನು ಗುಡಿಸುವ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರೊಂದಿಗೆ ಜಗಳ ಮಾಡುವುದನ್ನು ನೋಡಿರುತ್ತೇವೆ. ಕೆಲವು ವೇಳೆ ನಾವೂ ನೆರೆಮನೆಯವರೊಂದಿಗೆ ಜಗಳ ಮಾಡಿರುತ್ತೇವೆ. ಆದರೆ, ಬಹುತೇಕವಾಗಿ ಜಗಳದಲ್ಲಿ ಮಹಿಳೆಯರಿಬ್ಬರು ಜಗಳ ಮಾಡುವುದನ್ನು ನೋಡಿರುತ್ತೀರಿ. ಇಲ್ಲಿ ಮನೆಯ ಅಂಗಳದ ಕಸ ಗುಡಿಸುವ ವಿಚಾರಕ್ಕೆ ಅಂಕಲ್ ಮತ್ತು ಆಂಟಿಯ ನಡುವೆ ಜಗಳ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೆಲವು ಕಡೆ ಅಕ್ಕಪಕ್ಕದ ಮನೆಯವರ ನಡುವೆ ಉತ್ತಮ ಸಂಬಂಧ ಇರುವುದಿಲ್ಲ. ಸಣ್ಣಪುಟ್ಟ ವಿಷಯಗಳಿಂದ ಶುರುವಾಗಿ ದೊಡ್ಡ ಜಗಳಗಳಿಗೆ ಕಾರಣವಾಗುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಇಂತಹದ್ದೇ ಜಗಳವೊಂದು ಕಂಡುಬಂದಿದೆ. ಈ ವಿಡಿಯೋ ಕೇರಳದ್ದಾಗಿದ್ದರೂ, ಉತ್ತರ ಭಾರತದ ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುವ ಜನಪ್ರಿಯ ಎಕ್ಸ್ ಖಾತೆ 'ಘರ್ ಕೆ ಕಲೇಶ್' ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಪ್ರೀತಿಗಾಗಿ ಲಿಂಗ ಬದಲಿಸಿದ ಪ್ರೇಮಿಗಳು; ಇದು ಸವಿತಾ ಎಂಬ ಹುಡುಗಿ ಲಿಲಿತ್ ಆಗಿ ಪೂಜಾ ಮದುವೆಯಾದ ಕಥೆ!
ವಿಡಿಯೋದ ಆರಂಭದಲ್ಲಿ ಒಬ್ಬ ಮಹಿಳೆ ತನ್ನ ಮನೆಯ ಮೆಟ್ಟಿಲುಗಳ ಮೇಲೆ ನಿಂತಿರುವುದು ಕಾಣುತ್ತದೆ. ಇದು ಮನೆಯ ಸಿಸಿಟಿವಿ ದೃಶ್ಯ ಎಂದು ಸ್ಪಷ್ಟವಾಗಿದೆ. ಮಹಿಳೆ ಪಕ್ಕದ ಮನೆಯ ಕಡೆ ನೋಡಿ ಏನೋ ಕೂಗುತ್ತಿರುವುದು ಕೇಳಿಸುತ್ತದೆ. ನಂತರ ಕೈಯಲ್ಲಿದ್ದ ಪೊರಕೆಯಿಂದ ಮನೆಯ ಮುಂದಿನ ಪ್ರಾಂಗಣದಲ್ಲಿದ್ದ ರಸ್ತೆಯನ್ನು ಗುಡಿಸಲು ಶುರುಮಾಡುತ್ತಾರೆ. ಅದೇ ಸಮಯದಲ್ಲಿ ಪಕ್ಕದ ಮನೆಯವರೂ ತಮ್ಮ ಮನೆಯ ಮುಂದೆ ಹಾದು ಹೋಗಿದ್ದ ರಸ್ತೆಯನ್ನು ಗುಡಿಸುತ್ತಿರುವುದು ಕಾಣುತ್ತದೆ. ಇಬ್ಬರೂ ಹತ್ತಿರ ಬಂದಾಗ ಪರಸ್ಪರ ತಳ್ಳಾಟ, ಪೊರಕೆಯಿಂದ ಹೊಡೆದಾಟ ಶುರುವಾಗುತ್ತದೆ. ಪಕ್ಕದ ಮನೆಯವರು ಮಹಿಳೆಯನ್ನು ತಳ್ಳಿದಾಗ ರಸ್ತೆಯಲ್ಲಿ ಬಿದ್ದುಬಿಡುತ್ತಾರೆ. ಮಹಿಳೆ ಬೀಳುವಾಗ ಮನೆಯಿಂದ 'ಅಮ್ಮ ಅಮ್ಮ' ಎಂದು ಕೂಗುತ್ತಾ ಒಬ್ಬ ಹುಡುಗಿ ಓಡಿ ಬರುವುದೂ ವಿಡಿಯೋದಲ್ಲಿದೆ.
ಬಿದ್ದ ಜಾಗದಿಂದ ಎದ್ದ ಮಹಿಳೆ ಪಕ್ಕದ ಮನೆಯವರ ಮೇಲೆ ಮತ್ತೆ ಆ ವ್ಯಕ್ತಿಯ ಮೇಲೆ ಜೋರು ಮಾಡುತ್ತಾ ಹೊಡೆಯಲು ಮುಂದಾಗುತ್ತಾಳೆ. ಆದರೆ, ಆ ವ್ಯಕ್ತಿ ಮತ್ತೆ ತಳ್ಳಿದಾಗ ಪುನಃ ಮಹಿಳೆ ರಸ್ತೆಯಲ್ಲಿ ಬಿದ್ದುಬಿಡುತ್ತಾರೆ. ಮತ್ತೆ ಪ್ರಶ್ನಿಸಲು ಮಹಿಳೆ ಎದ್ದರೂ, ತಕ್ಷಣವೇ ಆ ವ್ಯಕ್ತಿ ಮನೆಯೊಳಗೆ ಹೋಗುತ್ತಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ, ನೂರಾರು ಜನ ಹಂಚಿಕೊಂಡಿದ್ದಾರೆ. ಆದರೆ, ಈ ವಿಡಿಯೋ ಕೇರಳದಲ್ಲಿ ಎಲ್ಲಿಂದ ಬಂದಿದ್ದು ಎಂಬುದು ಸ್ಪಷ್ಟವಿಲ್ಲ. ವಿಡಿಯೋ ಕೆಳಗೆ ಹಲವರು ಈ ಮಹಿಳೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಮಾಷೆಯಾಗಿ ಬರೆದಿದ್ದಾರೆ. ಕೆಲವರು ಕತ್ತಿವರಸೆಯ ಮೀಮ್ಸ್ ಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿ
