ಎರಡೂ ವರೆ ವರ್ಷದ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಜಿಗಿದ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ತೀವ್ರ ಹುಟುಕಾಟ ನಡೆಸಿದ್ದ ರಕ್ಷಣಾ ತಂಡ ಕೊನೆಗೂ ಮಗುವಿನ ಮೃತದೇಹ ಪತ್ತೆ ಹಚ್ಚಿ ಹೊರತೆಗಿದಿದ್ದಾರೆ.

ಕಣ್ಣೂರು (ಜು.22) ಪತಿ ಹಾಗೂ ಆತನ ಕುಟುಂಬಸ್ಥರಿಂದ ನರಕ ಯಾತನೆ ಅನುಭವಿಸಿದ 30 ವರ್ಷದ ತಾಯಿ ಹಾಗೂ ಎರಡೂವರೆ ವರ್ಷದ ಮಗುವಿನ ದುರಂತ ಅಂತ್ಯವಾಗಿದೆ. ಎರಡೂವರೆ ವರ್ಷಗ ಮಗನ ಕರೆದುಕೊಂಡು ಸ್ಕೂಟರ್ ಮೂಲಕ ತೆರಳಿದ ತಾಯಿ ಬಳಿಕ ಸೇತುವೆಯಿಂದ ತುಂಬಿ ಹರಿಯುತ್ತಿದ್ದ ನದಿಗೆ ಜಿಗಿದಿದ್ದಾರೆ. ಶನಿವಾರ (ಜು.19) ತಾಯಿ ಹಾಗೂ ಮಗು ನದಿಗೆ ಹಾರಿದ್ದರು. ಬಳಿಕ ತೀವ್ರ ಶೋಧ ಕಾರ್ಯದಲ್ಲಿ ತಾಯಿ ಮೃತದೇಹ ಪತ್ತೆಯಾಗಿತ್ತು. ಆದರೆ ಮಗುವಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇದೀಗ ನಾಲ್ಕು ದಿನಗಳ ಬಳಿಕ ರಕ್ಷಣಾ ತಂಡ ಮಗುವಿನ ಮೃತದೇಹ ನದಿಯಿಂದ ಹೊರತೆಗೆದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಕಣ್ಣೀರಿಡುತ್ತಿರುವ ರೀಮಾ ಕುಟುಂಬ

30 ವರ್ಷದ ರೀಮಾ ತನ್ನ ಎರಡೂವರೆಗೆ ವರ್ಷ ಮಗು ಕೃಷಿವ್ ಜೊತೆ ಕಣ್ಣೂರಿನ ಚೆಂಬಲ್ಲಿಕುಂಡು ನದಿಗೆ ಹಾರಿದ್ದರು. ಪತಿಯಿಂದ ತೀವ್ರ ನರಕಯಾತನೆ ಅನುಭವಿಸಿದ್ದ ರೀಮಾ ಕಳೆದ ಮೂರು ದಿನಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಹೀಗಾಗಿ ಮಗುವನ್ನು ಕರೆದುಕೊಂಡು ನದಿಗೆ ಹಾರಿದ್ದಾಳೆ ಎಂದು ಆರೋಪ ಕೇಳಿಬಂದಿದೆ.

ಮಧ್ಯರಾತ್ರಿ ನದಿಗೆ ಹಾರಿದ್ದ ರೀಮಾ

ಕಳೆದ ಶನಿವಾರ ಮಧ್ಯರಾತ್ರಿ ರೀಮಾ ತನ್ನ ಮಗುವಿನೊಂದಿಗೆ ನದಿಗೆ ಹಾರಿದ್ದಳು. ದೀರ್ಘಕಾಲದ ಶೋಧ ಕಾರ್ಯದ ನಂತರ ಭಾನುವಾರ ಬೆಳಿಗ್ಗೆ ರೀಮಾಳ ಮೃತದೇಹ ಪತ್ತೆಯಾಗಿತ್ತು. ಆದರೆ ಮಗುವಿನ ಮೃತದೇಹ ಪತ್ತೆಯಾಗಿರಲಿಲ್ಲ. ಸ್ಕೂಟರ್ ನಲ್ಲಿ ರೀಮಾ ತನ್ನ ಮಗನೊಂದಿಗೆ ಚೆಂಬಲ್ಲಿಕುಂಡು ಸೇತುವೆಗೆ ಬಂದಿದ್ದಳು. ನಂತರ ಸೇತುವೆಯಿಂದ ನದಿಗೆ ಹಾರಿದ್ದಳು. ಇದೀಗ ಮಂಗಳವಾರ ಸಂಜೆ ವೇಳೆಗೆ ಮಗುವಿನ ಮಮೃತದೇಹ ಪತ್ತೆಯಾಗಿತ್ತು.

ರೀಮಾ ಪತಿ ಹಾಗೂ ಆತನ ಕುಟುಂಬಸ್ಥರ ಬಂಧಿಸುವಂತೆ ಆಗ್ರಹ

ರೀಮಾ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ತಾಯಿ ತನ್ನ ಮಗುವನೊಂದಿಗೆ ನದಿಗೆ ಹಾರಿದ್ದಾಳೆ ಎಂದರೆ ಪರಿಸ್ಥಿತಿ ಅದೆಷ್ಟು ಗಂಭೀರವಾಗಿದೆ ಅನ್ನೋದು ಅರಿಯಬೇಕು. ಇದು ಆಕೆಯ ಕೊನೆಯ ಆಯ್ಕೆ ಎಂದೇ ಭಾವಿಸಿರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ರೀಮಾ ಪತಿ ಹಾಗೂ ಆತನ ಕುಟುಂಬಸ್ಥರ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.