Asianet Suvarna News Asianet Suvarna News

2 ಸೂತ್ರ, ಒಂದೇ ನಿಯಮ; 100 ದಿನದದಲ್ಲಿ ಕೇರಳದಿಂದ ಕೊರೋನಾ ಮಾಯ!

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಮೀತಿ ಮೀರಿದೆ. ಇತ್ತ ಕರ್ನಾಟಕದಲ್ಲೂ ಕೊರೋನಾ ಸಾವಿರದ ಸನಿಹ ತಲುಪುತ್ತಿದೆ. ಸತತ ಹೋರಾಟ ಮಾಡುತ್ತಿದ್ದರೂ ಹಿಡಿತಕ್ಕೆ ಸಿಕ್ಕಿಲ್ಲ. ದೇಶದಲ್ಲಿ ಮೊದಲ ಕೊರೋನಾ ವೈರಸ್ ಕೇಸ್ ಪತ್ತೆಯಾಗಿರುವುದು ಕೇರಳದಲ್ಲಿ, ಇಷ್ಟೇ ಅಲ್ಲ ಕೇರಳ ತುಂಬಾ ಹರಿಡಿತು. ಆದರೆ ಅಷ್ಟೇ ವೇಗದಲ್ಲಿ ಕೇರಳ ಸರ್ಕಾರ ಕೊರೋನಾ ನಿಯಂತ್ರಿಸಿದೆ.  ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ತಂದ ಮೊದಲ ರಾಜ್ಯ ಕೇರಳ. 100 ದಿನದಲ್ಲಿ ಕೇರಳ ಸಾಧನೆ ವಿವರ ಇಲ್ಲಿದೆ.

Kerala model to tackle coronavirus in minimum days
Author
Bengaluru, First Published May 11, 2020, 6:45 PM IST

ಕೇರಳ(ಮೇ.11): ಕೊರೋನಾ ವೈರಸ್ ನಿಯಂತ್ರಣದಲ್ಲಿ ಕೇರಳಗೆ ಮೊದಲ ಸ್ಥಾನ. ಮೊದಲ ಕೇಸ್ ಪತ್ತೆಯಾಗಿದ್ದು ಕೇರಳದಲ್ಲಿ, ಮೊದಲು ಕೊರೋನಾ ನಿಯಂತ್ರಣ ಮಾಡಿದ್ದು ಕೂಡ ಕೇರಳ. ಕೇರಳ ಸರ್ಕಾರ ಕೈಗೊಂಡ ಹಲವು ಕ್ರಮಗಳು ಇದಕ್ಕೆ ಕಾರಣ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ 0.1%.  

ಐತಿಹಾಸಿಕ ಏರ್‌ಲಿಫ್ಟ್‌ ಆರಂಭ; ಕೇರಳಕ್ಕೆ ಬಂದಿಳಿದ 2 ವಿಮಾನಗಳು

ಕೇರಳದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡು 100 ದಿನಗಳಾಗಿವೆ. ಆರಂಭಿಕ ದಿನದಲ್ಲಿ ತೀವ್ರವಾಗಿ ಹರಡಿದ ಕೊರೋನಾ ಅಷ್ಟೇ ವೇಗದಲ್ಲಿ ನಿಯಂತ್ರಣಕ್ಕೆ ಬಂದಿದೆ. ಕೇರಳಲ್ಲಿ ಇದುವರೆಗೆ 503 ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಆದರೆ ಮೇ.9ಕ್ಕೆ ಕೇರಳದ ಕೊರೋನಾ ಕೇಸ್ ಕೇವಲ  0.1%.  . 

ಕನ್ನಡದಲ್ಲಿ ಬಸವಣ್ಣನ ವಚನದ ಮೂಲಕ ಐಕ್ಯತೆ ಸಂದೇಶ ಸಾರಿದ ಕೇರಳ ಸಿಎಂ!.

ಸ್ಮಾರ್ಟ್ ಟೆಸ್ಟಿಂಗ್:
ಇದೀಗ ಎಲ್ಲಾ ರಾಜ್ಯಗಳು ಕೊರೋನಾ ವೈರಸ್ ಪರೀಕ್ಷೆ ತ್ವರಿತಗತಿಯಲ್ಲಿ ಮಾಡುತ್ತಿದೆ. ಆದರೆ ಕೇರಳ ಮಾರ್ಚ್ ತಿಂಗಳಿನಿಂದಲೇ ಪರೀಕ್ಷೆ ಆರಂಭಿಸಿದೆ. ಎಪ್ರಿಲ್ ಅಂತ್ಯ ಹಾಗೂ ಮೇ ಆರಂಭದಲ್ಲಿ ಪ್ರತಿ ದಿನ ಕೇರಳ ಸರಾಸರಿ 1000 ಮಂದಿಯ ಪರೀಕ್ಷೆ ನಡೆಸುತ್ತಿತ್ತು. ರಾಜ್ಯದಲ್ಲಿ 100 ಕೇಸ್ ಪತ್ತೆಯಾದಾಗ  ಕೊರೋನಾ ಕೇಸ್ ಪರೀಕ್ಷೆ ಸಂಖ್ಯೆ 687. ಕಳೆದ 100 ದಿನಗಳಲ್ಲಿ ಕೇವಲ 4 ದಿನ 1000ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ.

ಪರಿಣಾಮಕಾರಿಯಾದ ಐಸೋಲೇಶನ್:
ಕೇರಳದಲ್ಲಿ ಆಕ್ಟೀವ್ ಕೇಸ್ ಹೆಚ್ಚಾಗುತ್ತಿದ್ದಂತೆ ಐಸೋಲೇಶನ್ ಕೂಡ ಗಣನೀಯವಾಗಿ ಏರಿಕೆ ಮಾಡಲಾಯಿತು. ಸೋಂಕಿತರ ಸಂಪರ್ಕದಲ್ಲಿದ್ದವರು, ಪ್ರದೇಶ, ಏರಿಯಾ ಹೇಗೆ ಹಲವು ವಲಯದ ಐಸೋಲೇಶನ್ ಪ್ರಕ್ರಿಯೆ ಪರಿಣಾಮಕಾರಿಯಾಗಿ ಮಾಡಲಾಯಿತು. ಕೇರಳದಲ್ಲಿ 500 ಕೊರೋನಾ ವೈರಸ್ ಪ್ರಕರಣಗಳು ವರದಿಯಾದಾಗ ಬರೋಬ್ಬರಿ 1.7 ಲಕ್ಷ ಮಂದಿಯನ್ನು ಐಸೋಲೇಶನ್‌ನಲ್ಲಿಡಲಾಗಿತ್ತು. ಇದೀಗ 16 ಆಕ್ಟೀವ್ ಪ್ರಕರಣಗಳು ಕೇರಳದಲ್ಲಿದೆ. ಈಗ 20,000 ಮಂದಿ ಐಸೋಲೇಶನ್‌ನಲ್ಲಿದ್ದಾರೆ.

1 ಆಕ್ಟೀವ್ ಕೇಸ್‌ನಿಂದ ಕೇರಳದಲ್ಲಿ ಸರಾಸರಿ 100 ಮಂದಿಯನ್ನು ಐಸೋಲೇಶನ್‌ನಲ್ಲಿ ಇಡಲಾಗಿತ್ತು. 14 ದಿನದ ಕ್ವಾರಂಟೈನ್ ಅವದಿ ಹೆಚ್ಚಿಸಲಾಗಿತ್ತು. ಈ ಮೂಲಕ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಬಿಡುಗಡೆಯಾದ ಮೇಲೆ ಕೊರೋನಾ ಬರದಂತೆ ಎಚ್ಚರ ವಹಿಸಲಾಯಿತು. ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾದ ಬಳಿಕ ಮನೆಯಲ್ಲಿ ಕಡ್ಡಾಯಾವಾಗಿ ಕ್ವಾರಂಟೈನ್‌ಗೆ ಒಳಪಡಬೇಕಿತ್ತು.

ಎಪ್ರಿಲ್ 11ರ ವೇಳೆ ಕೇರಳದಲ್ಲಿ 816 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಣಾಮಕಾರಿ ಪರೀಕ್ಷೆ ಹಾಗೂ ಐಸೋಲೇಶನ್‌ನಿಂದ ಕೇರಳ ಆಸ್ಪತ್ರೆಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಇದೀಗ ಕೇರಳ ಮಾದರಿಯನ್ನು ಅನುಸರಿಸಲು ಇತರ ರಾಜ್ಯಗಳು ಹರಸಾಹಸ ಪಡಬೇಕಿದೆ. ಕಾರಣ ಸೋಂಕಿತರ ಸಂಖ್ಯೆ ಸಾವಿರ ದಾಟುತ್ತಿದೆ. ಇತ್ತ ಸೋಂಕಿತರ ಸಂಪರ್ಕ ಹೊಂದಿದವರ ಸಂಖ್ಯೆ ಲಕ್ಷ ದಾಟಲಿದೆ. ಹೀಗಾಗಿ ಇತರ ರಾಜ್ಯಗಳು ಈ ರೀತಿ ಕಟ್ಟು ನಿಟ್ಟಿನ ನಿಯಮ ಅನುಸರಿಸುವ ಇಚ್ಚಾ ಶಕ್ತಿ ಹಾಗೂ ದಿಟ್ಟತನ ತೋರಿಲ್ಲ. 

Follow Us:
Download App:
  • android
  • ios