ಕೊಚ್ಚಿ(ಏ.26): ಕರ್ನಾಟಕ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಬಸವಣ್ಣ ಜಯಂತಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಕಾರಣ ಕಾರ್ಯಕ್ರಮಗಳೆಲ್ಲಾ ರದ್ದಾಗಿದೆ. ಹೀಗಾಗಿ ಮನೆಯಲ್ಲೇ ಬಸವಣ್ಣನ ಜಯಂತಿ ಆಚರಿಸಿದ್ದಾರೆ. ಕೊರೋನಾ ವೈರಸ್ ಕಾರಣ ರಾಜ್ಯ ಸರ್ಕಾರ ಕೂಡ ಸರಳವಾಗಿ ಬಸವ ಜಯಂತಿ ಆಚರಿಸಿದೆ. ಅತ್ತ ಕೇರಳ ಮುಖ್ಯಮಂತ್ರಿ ಬಸವ ಜಯಂತಿಗೆ, ಬಸವಣ್ಣನ ವಚನವನ್ನು ಟ್ವಿಟರ್ ಮೂಲಕ ಕನ್ನಡದಲ್ಲೇ ಪ್ರಕಟಿಸಿ ಎಲ್ಲರ ಮನ ಗೆದ್ದಿದ್ದಾರೆ.

ದೇಶದಲ್ಲೇ ಮೊದಲ ಕೊರೋನಾ ಕೇಸ್‌ ಕೇರಳದಲ್ಲಿ ಪತ್ತೆ; ಈಗ ಅಲ್ಲೇ ಸೋಂಕು ಕಡಿಮೆ

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಇತರ ರಾಜ್ಯಗಳು ಕೇರಳ ಮಾದರಿ ಅನುಸರಿಸುತ್ತಿದೆ. ಈ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತರ ರಾಜ್ಯಗಳಲ್ಲೂ ಸುದ್ದಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಇದೀಗ ಬಸವ ಜಯಂತಿಗೆ ಪಿಣರಾಯಿ ವಿಜಯನ್ ಕನ್ನಡದಲ್ಲಿ ಬಸವಣ್ಣನ ಇವನಾರವ, ಇವನಾರವ ವಚನದ ಮೂಲಕ ಎಲ್ಲೂ ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ಸಾರಿದ್ದಾರೆ.

 

ಬಸವಣ್ಣನವರ ವಚನದ "ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ. ಎಂಬ ಎರಡು ಸಾಲುಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಪಿಣರಾಜಿ ವಿಜಯನ್, ಬಸವಣ್ಣ ನಮ್ಮಲ್ಲರ ಮಾರ್ಗದರ್ಶಕ, ಅವರ ತತ್ವ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯೋಣ. ನಮ್ಮೊಳಗಿನ ಭೇದ ಭಾವ ಬಿಟ್ಟು ಎಲ್ಲೂ ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ ಎಂದು ಪಿಣರಾಯಿ ವಿಜಯ್ ಟ್ವಿಟರ್ ಮೂಲಕ ಪೊಸ್ಟ್ ಮಾಡಿದ್ದಾರೆ.