ತಿರುವನಂತಪುರಂ(ಜ.17): ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಚರ್ಚೆ ನಡುವೆಯೇ ಪ್ರಧಾನಿ ಮೋದಿ ಅವರ ಪೌರತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಲಾಗಿದೆ.

ಕೇರಳದ ಚಲಕ್ಕುಡಿಯ ನಿವಾಸಿ ಜೋಶ್ ಕಲ್ಲುವೀಟ್ಟಿಲ್ ಎಂಬ ವ್ಯಕ್ತಿ, ಪ್ರಧಾನಿ ಮೋದಿ ಪೌರತ್ವ ಪ್ರಮಾಣ ಪತ್ರ ಬಯಿಸಿ ಕೇರಳ ಸರ್ಕಾರಕ್ಕೆ RTI ಸಲ್ಲಿಸಿದ್ದಾನೆ.

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!

ಪ್ರಧಾನಿ ಮೋದಿ ಭಾರತೀಯ ಹೌದೋ, ಅಲ್ಲವೋ ಎಂದು ಕೇಳಿರುವ ಜೋಶ್ ಕಲ್ಲುವೀಟ್ಟಿಲ್, ಪ್ರಧಾನಿ ಭಾರತೀಯರಾಗಿದ್ದರೆ ಅವರ ಪೌರತ್ವ ಪ್ರಮಾಣ ಪತ್ರದ ಕುರಿತು ಮಾಹಿತಿ ನೀಡುವಂತೆ RTI ಅರ್ಜಿಯಲ್ಲಿ ಆಗ್ರಹಿಸಿದ್ದಾನೆ.

ಮೋದಿ ಪೌರತ್ವ ಪ್ರಮಾಣ ಪತ್ರ ಬಯಿಸಿ ಕಳೆದ ಜ.13ರಂದೇ ಜೋಶ್ ಕಲ್ಲುವೀಟ್ಟಿಲ್ RTI ಅರ್ಜಿ ಸಲ್ಲಿಸಿದ್ದು, ಈ ಕುರಿತು ವಿವಾದ ಭುಗಿಲೆದ್ದಿದೆ.

ವೇದಿಕೆ ಹತ್ತದೇ ಜನರ ಮಧ್ಯೆ ನಿಂತು ಮೋದಿ, ಶಾ ತಂದೆಯ ಸರ್ಟಿಫಿಕೆಟ್ ಕೇಳಿದ ಜಮೀರ್