ಬೆಂಗಳೂರು, [ಜ.03]: ಒಂದೆಡೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಯ ಆಶಾ ಕಾರ್ಯಕರ್ತೆಯರ ಪ್ರತಿಭಟನೆ.  ಮತ್ತೊಂದೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು (ಶುಕ್ರವಾರ] ಮುಸಲ್ಮಾನರು ಬೆಂಗಳೂರಿನಲ್ಲಿ ಮತ್ತೆ ಬೀದಿಗಿಳಿದು ಹೋರಾಟ ನಡೆಸಿದರು.  

ಗೋರಿಪಾಳ್ಯದ ಈದ್ಗಾ ಮೈದಾನದಲ್ಲಿ ನಡೆದ ಮುಸ್ಲಿಮರ ಬೃಹತ್ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸೇರಿದಂತೆ 10 ಕ್ಕೂ ಹೆಚ್ಚು ಮುಸ್ಲಿಂ ಮೌಲ್ವಿಗಳು ಭಾಗವಹಿಸಿದ್ರು. 

ಸ್ಥಳೀಯ ಶಾಸಕ (ಚಾಮರಾಜಪೇಟೆ] ಜಮೀರ್ ಅಹಮದ್ ಪ್ರತಿಭಟನೆಗೆ ಹಾಜರಾದ್ರೂ ಸಹ ವೇದಿಕೆ ಹತ್ತದೆ ಸಾರ್ವಜನಿಕರ ಮಧ್ಯೆ ನಿಂತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.  

ರಾಹುಲ್‌ಗೆ ಇಟಲಿ ಭಾಷೆಯಲ್ಲಿ ಸಿಎಎ ತರ್ಜುಮೆ ಮಾಡುವೆ: ಅಮಿತ್ ಶಾ!

ಇನ್ನೂ ವೇದಿಕೆ ಹತ್ತದೇ ಜನರ ಮಧ್ಯೆ ನಿಂತೇ ಮಾತಮಾಡಿದ ಶಾಸಕ ಜಮೀರ್, ಮುಸ್ಲಿಂರ ಪ್ರಾಣ ತ್ಯಾಗದಿಂದ ಸ್ವಾತಂತ್ರ್ಯ ಸಿಕ್ಕಿದೆ. ಇಂಡಿಯಾ ಗೇಟ್ ನಲ್ಲಿ ಎಷ್ಟು ಜನ ಮುಸ್ಲಿಂರ ಬಲಿದಾನvವಾಗಿದೆ ಅನ್ನೋದನ್ನು ಬರೆದಿದ್ದಾರೆ ಹೋಗಿ ನೋಡಿ ಎಂದು ಗುಡುಗಿದ್ರು. ಅಷ್ಟೇ ಅಲ್ಲದೇ ಇದೇ ವೇಳೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಂದೆಯ ಸರ್ಟೀಫಿಕೆಟ್ ಇದೆಯಾ..? ಎಂದು ಪ್ರಶ್ನಿಸಿದರು. 

ಕೊನೆಗೆ ಸಿಎಂ ಭೇಟಿಯಾಗಿ ಪೌರತ್ವ ಕಾಯ್ದೆ ಜಾರಿಮಾಡದಂತೆ ಮೌಲ್ವಿಗಳು ಮನವಿ ಸಲ್ಲಿಸಲು ನಿರ್ಣಯ ಕೈಗೊಂಡಿರು. ಮೈದಾನದ ಸುತ್ತಲೂ ರಾಷ್ಟ್ರ ಧ್ವಜ, ನಾಡ ಧ್ವಜಗಳು ರಾರಾಜಿಸಿದ್ದು ವಿಶೇಷ. ಇನ್ನು, ಸಮಾವೇಶದಿಂದ ಮೈಸೂರು ರಸ್ತೆ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

"