ಕೇರಳ(ಮಾ.14): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇರಳ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. ಹಿರಿಯ ನಾಯಕ ಪಿಸಿ ಚಾಕೋ, ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ವಿಜಯನ್ ಥಾಮಸ್ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದ ಬೆನ್ನಲ್ಲೇ ಇದೀಗ ಕೇರಳ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಿಕಾ ಸುಭಾಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಕಾಂಗ್ರೆಸ್ ಖಾಲಿ ಖಾಲಿ, ಪಿಸಿ ಚಾಕೋ ಬೆನ್ನಲ್ಲೇ ಪಕ್ಷ ತೊರೆದು ಬಿಜೆಪಿ ಸೇರಿದ ಪ್ರಮುಖ ನಾಯಕ!.

ವಿಧಾಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಲತಿಕಾ ಸುಭಾಶ್ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ತಲೆ ಬೋಳಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ(ಮಾ.14) ಕೇರಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಪಕ್ಷದಲ್ಲಿನ ಗುಂಪು ರಾಜಕೀಯದಿಂದ ಅರ್ಹರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ. ಎರಡು ಗುಂಪುಗಳ ಗುರುತಿಸಿಕೊಂಡರೆ ಮಾತ್ರ ಟಿಕೆಟ್ ಸಿಗುತ್ತಿದೆ. ಇದರಿಂದ ಬೇಸತ್ತಿರುವ ಲತಿಕಾ ಸುಭಾಶ್ ಇದೀಗ ಕಾಂಗ್ರೆಸ್ ನಡೆ ವಿರುದ್ಧ ಆಕ್ರೋಶಗೊಂಡಿದ್ದಾರೆ. 

ಕಾಂಗ್ರೆಸ್‌ನಲ್ಲಿ ಹೆಚ್ಚಾಯಿತು ಬಿರುಕು; ಬಂಗಾಳ ಚುನಾವಣಾ ಪ್ರಚಾರದಿಂದ G23 ನಾಯಕರಿಗೆ ಕೊಕ್!.

ಕೇರಳ ವಿಧಾನಸಭಾ ಚುನಾವಣೆ ಒಂದು ಹಂತದಲ್ಲಿ ನಡೆಯಲಿದೆ. ಎಪ್ರಿಲ್ 6 ರಂದು ಮತದಾನ ನಡೆಯಲಿದೆ. ಇನ್ನು ಮೇ.02ರಂದು ಫಲಿತಾಂಶ ಹೊರಬೀಳಲಿದೆ.