ಮಹಾರಾಜ ಕಾಲೇಜಿನಲ್ಲಿ ಮಾರ್ಕ್ಸ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಡಪಕ್ಷ ಬೆಂಬಲಿತ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕೆಲವು ಸದಸ್ಯರು ನಡೆಸಿದ ಅವ್ಯವಹಾರದ ಬಗ್ಗೆ ವರದಿ ಮಾಡಿದ್ದಕ್ಕೆ ಕೇರಳ ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಿರುವನಂತಪುರಂ: ಮಹಾರಾಜ ಕಾಲೇಜಿನಲ್ಲಿ ಮಾರ್ಕ್ಸ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಡಪಕ್ಷ ಬೆಂಬಲಿತ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕೆಲವು ಸದಸ್ಯರು ನಡೆಸಿದ ಅವ್ಯವಹಾರದ ಬಗ್ಗೆ ವರದಿ ಮಾಡಿದ್ದಕ್ಕೆ ಕೇರಳ ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾರಾಜ ಕಾಲೇಜು ಅಂಕಪಟ್ಟಿ ವಿವಾದದ ಕುರಿತು ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ಅವರು ನಿರಂತರ ವರದಿ ಮಾಡಿದ್ದರು. ಈಗ ಅವರನ್ನು ಕೊಚ್ಚಿ ಪೊಲೀಸರು ಪಿತೂರಿ ಪ್ರಕರಣದಲ್ಲಿ ಸಿಲುಕಿಸಿ ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಮಾಡಿದ್ದಾರೆ. ಎಡರಂಗ ಬೆಂಬಲಿತ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವರದಿಗಾರ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯನ್ನೂ ನಡೆಸದೆ ಅಖಿಲಾ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗುಲ್ಬರ್ಗ ವಿವಿಯಲ್ಲಿ 30 ಸಾವಿರ ಕೊಟ್ಟರೆ ನಕಲಿ ಅಂಕಪಟ್ಟಿ..!
ಈ ಮಹಾರಾಜ ಮಾರ್ಕ್ ಶೀಟ್ ಪ್ರಕರಣದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲ ವಿ ಎಸ್ ಜಾಯ್ ( V S Joy) ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ ವಿನೋದ್ ಕುಮಾರ್ (Vinod Kumar) ಅವರು ಈ ಪ್ರಕರಣದಲ್ಲಿ ಮೊದಲ ಆರೋಪಿಗಳಾಗಿದ್ದು,. ಕೆಎಸ್‌ಯು ರಾಜ್ಯಾಧ್ಯಕ್ಷ ಅಲೋಶಿಯಸ್ ಕ್ಸೇವಿಯರ್ ಮತ್ತು ಕೆಎಸ್‌ಒಯು ಮಹಾರಾಜ ಘಟಕದ ಅಧ್ಯಕ್ಷ ಸಿಎ ಫೈಸಲ್ (CA Faisal) ಮೂರು ಮತ್ತು ನಾಲ್ಕನೇ ಆರೋಪಿಗಳಾಗಿದ್ದಾರೆ.
ಎಸ್‌ಎಫ್‌ಐನ ಮಾಜಿ ನಾಯಕಿ ವಿದ್ಯಾ ಅವರ ಫೋರ್ಜರಿ ಪ್ರಕರಣದ ವಿವರ ಪಡೆಯಲು ಜೂನ್ 6 ರಂದು ಅಖಿಲಾ ಮತ್ತು ಅವರ ಕ್ಯಾಮರಾಮನ್, ಮಹಾರಾಜ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದರು. ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಹುದ್ದೆ ಗಿಟ್ಟಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದ ನಂತರ ಎಸ್‌ಎಫ್‌ಐನ ಮಾಜಿ ನಾಯಕಿ ಆರೋಪಿ ವಿದ್ಯಾ ಪರಾರಿಯಾಗಿದ್ದಾಳೆ. ವರದಿಗಾರ್ತಿ ಅಖಿಲಾ ಪ್ರಾಂಶುಪಾಲರು ಮತ್ತು ಮಲಯಾಳಂ ವಿಭಾಗದ ಶಿಕ್ಷಕರೊಂದಿಗೆ ನೇರ ಪ್ರಸಾರದ ನ್ಯೂಸ್‌ನಲ್ಲಿ ಮಾತನಾಡಿ ವಿವರ ಕೇಳಿದ್ದರು. ಅಲ್ಲದೇ ಪ್ರಾಂಶುಪಾಲರ ಕೊಠಡಿಯಲ್ಲಿ ಹಾಜರಿದ್ದ ವಿದ್ಯಾರ್ಥಿ ಪ್ರತಿನಿಧಿಗಳನ್ನು ವಿದ್ಯಾ ಅವರ ಪೋರ್ಜರಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಕೇಳಿದ್ದರು.
ಸರ್ಕಾರಿ ವಕೀಲರ ನೇಮಕ ಹಗರಣ: ಇಲಾಖಾ ತನಿಖೆಗೆ ಸಿಎಂ ಸಿದ್ದು ನಿರ್ದೇಶನ
ಆಗ ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ಆರ್ಷೋ ( Arsho) ಅವರ ಅಂಕಪಟ್ಟಿ ವಿವಾದವನ್ನು ಎತ್ತಿದ್ದು, ಇದಕ್ಕಿಂತ ಮುಖ್ಯವಾದ ಇನ್ನೊಂದು ವಿಷಯವಿದೆ ಎಂದು ಹೇಳಿದರು. ಹೀಗಾಗಿ ವಿದ್ಯಾ ಅವರ ಪೋರ್ಜರಿ ಪ್ರಕರಣದೊಂದಿಗೆ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಅಂಕಪಟ್ಟಿ ವಿವಾದವೂ ಮುನ್ನೆಲೆಗೆ ಬಂದಿದೆ. ಈ ಘಟನೆಯನ್ನು ತನ್ನ ವಿರುದ್ಧದ ಪಿತೂರಿ ಎಂದು ಅರ್ಶೋ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೊಚ್ಚಿ ಸೆಂಟ್ರಲ್ ಪೊಲೀಸರು ಏಷ್ಯಾನೆಟ್ ನ್ಯೂಸ್ ಮುಖ್ಯ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಫೋರ್ಜರಿ ಪ್ರಕರಣದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಕ್ಯಾಂಪಸ್‌ಗೆ ತೆರಳಿದ್ದ ಪತ್ರಕರ್ತೆ ವಿರುದ್ಧ ಪೊಲೀಸರು ಪಿತೂರಿ ಆರೋಪ ಹೊರಿಸಿದ್ದಾರೆ. ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿಯ ದೂರಿನ ಮೇರೆಗೆ ಫೋರ್ಜರಿ ಪ್ರಕರಣದ ಆರೋಪಿ ವಿದ್ಯಾಳನ್ನೂ ಪತ್ತೆ ಹಚ್ಚದ ರಾಜ್ಯ ಗೃಹ ಇಲಾಖೆ ಆ ಬಗ್ಗೆ ವರದಿ ಮಾಡಿದ್ದ ವರದಿಗಾರ್ತಿಯನ್ನು ಮಿಂಚಿನ ವೇಗದಲ್ಲಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖಾ ತಂಡದೊಂದಿಗೆ (investigation team) ತನಿಖೆ ನಡೆಸಿರುವುದು ಮಾತ್ರ ವಿಚಿತ್ರ ಎನಿಸಿದೆ.
