Asianet Suvarna News Asianet Suvarna News

ಫೋನ್‌ನಲ್ಲಿ ಖಾಸಗಿಯಾಗಿ ಪೋರ್ನ್‌ ವೀಕ್ಷಣೆ ಮಾಡಿದರೆ ಅದು ಅಪರಾಧವಲ್ಲ: ಕೇರಳ ಹೈಕೋರ್ಟ್‌

ಯಾರೊಂದಿಗೂ ಹಂಚಿಕೊಳ್ಳದೆ, ಫೋನ್‌ನಲ್ಲಿ ಖಾಸಗಿಯಾಗಿ ಪೋರ್ನ್‌ ವೀಕ್ಷಣೆ ಮಾಡಿದರೆ ಅದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್‌ ಕಳೆದ ವಾರ ಪ್ರಕರಣವೊಂದರ ವಿಚಾರಣೆಯಲ್ಲಿ ಹೇಳಿದೆ.

Kerala High Court says Privately Watching obscene Video Without Exhibiting It To Others Will Not Attract Offence Of Obscenity san
Author
First Published Sep 12, 2023, 5:57 PM IST

ಕೊಚ್ಚಿ (ಸೆ.12): ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಮೊಬೈಲ್‌ನಲ್ಲಿ ಪೋರ್ನ್‌ ವೀಕ್ಷಣೆ ಮಾಡುತ್ತಿದ್ದ. ಆತನನ್ನು ಬಂಧಿಸಿ ಅವನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಿದ್ದ ಕೇರಳ ಪೊಲೀಸ್‌ಗೆ ಹಿನ್ನಡೆಯಾಗಿದೆ.  ಕಳೆದ ವಾರ ಕೇರಳ ಹೈಕೋರ್ಟ್‌ ಈತನ ಮೇಲೆ ಹಾಕಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದು ಮಾಡಿದೆ. ಪ್ರಕರಣವನ್ನು ರದ್ದು ಮಾಡುವ ವೇಳೆ ಅಭಿಪ್ರಾಯ ತಿಳಿಸಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್, ಯಾರೊಬ್ಬರ ಫೋನ್‌ಗೂ ಅಶ್ಲೀಲ ಫೋಟೋಗಳನ್ನು ಅಥವಾ ವಿಡಿಯೋಗಳನ್ನು ವಿತರಣೆ ಮಾಡದೆ, ಸಾರ್ವಜನಿಕವಾಗಿ ಪ್ರದರ್ಶನ ಮಾಡದೇ, ತನ್ನ ಮೊಬೈಲ್‌ನಲ್ಲಿಯೇ ಖಾಸಗಿಯಾಗಿ ವೀಕ್ಷಣೆ ಮಾಡುವುದು ಐಪಿಸಿಯ ಅಡಿಯಲ್ಲಿ ಅಶ್ಲೀಲತೆಯ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದೆ.  ಅಂತಹ ವಿಷಯವನ್ನು ವೀಕ್ಷಿಸುವುದು ವ್ಯಕ್ತಿಯ ಖಾಸಗಿ ಆಯ್ಕೆಯಾಗಿದೆ ಮತ್ತು ನ್ಯಾಯಾಲಯವು ಅವರ ಗೌಪ್ಯತೆಗೆ ಒಳನುಗ್ಗುವಂತಿಲ್ಲ ಎಂದು ತಿಳಿಸಿದೆ.

"ಈ ಪ್ರಕರಣದಲ್ಲಿ ನಿರ್ಧರಿಸಬೇಕಾದ ಪ್ರಶ್ನೆಯೆಂದರೆ, ಒಬ್ಬ ವ್ಯಕ್ತಿಯು ತನ್ನ ಖಾಸಗಿ ಸಮಯದಲ್ಲಿ ಪೋರ್ನ್ ವೀಡಿಯೊವನ್ನು ಇತರರಿಗೆ ಪ್ರದರ್ಶಿಸದೆ ಅದನ್ನು ವೀಕ್ಷಿಸುವುದು ಅಪರಾಧವಾಗಿದೆಯೇ? ಸರಳ ಕಾರಣಕ್ಕಾಗಿ ನ್ಯಾಯಾಲಯವು ಅದೇ ಅಪರಾಧವೆಂದು ಘೋಷಿಸಲು ಸಾಧ್ಯವಿಲ್ಲ. ಅವರ ಖಾಸಗಿ ಆಯ್ಕೆ ಮತ್ತು ಅದೇ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡುವುದು ಅವರ ಗೌಪ್ಯತೆಯ ಬಗ್ಗೆ ಹಸ್ತಕ್ಷೇಪವಾಗಿದೆ' ಎಂದು ಕೋರ್ಟ್ ತಿಳಿಸಿದೆ.
ಒಬ್ಬ ವ್ಯಕ್ತಿ ತನ್ನ ಖಾಸಗಿತನದಲ್ಲಿ ಅಶ್ಲೀಲ ಫೋಟೋ ಅಥವಾ ವಿಡಿಯೋ ನೋಡುವುದು ಸೆಕ್ಷನ್ 292 ಐಪಿಸಿ ಅಡಿಯಲ್ಲಿ ಅಪರಾಧವಲ್ಲ ಎಂದು ನಾನು ಪರಿಗಣಿಸುತ್ತೇನೆ. ಅದೇ ರೀತಿ, ವ್ಯಕ್ತಿಯೊಬ್ಬ ತನ್ನ ಖಾಸಗಿತನದಲ್ಲಿ ಮೊಬೈಲ್ ಫೋನ್‌ನಿಂದ ಅಶ್ಲೀಲ ವೀಡಿಯೊವನ್ನು ವೀಕ್ಷಿಸುವುದು ಸಹ ಸೆಕ್ಷನ್ 292 ಐಪಿಸಿ ಅಡಿಯಲ್ಲಿ ಅಪರಾಧವಲ್ಲ. ಹಾಗೇನಾದರೂ ವ್ಯಕ್ತಿಯೊಬ್ಬ ಅಶ್ಲೀಲ ವಿಡಿಯೋ ಅಥವಾ ಫೋಟೋಗಳನ್ನು ಪ್ರಸಾರ ಮಾಡಿದ, ಸಾರ್ವಜನಿಕವಾಗಿ ಹಂಚಲು ಪ್ರಯತ್ನ ಮಾಡಿದ್ದರೆ ಅದು ಸೆಕ್ಷನ್‌ 292 ಐಪಿಸಿ ಅಡಿಯಲ್ಲಿ ಅಪರಾಧ ಎನಿಸಿಕೊಳ್ಳುತ್ತದೆ ಎಂದು ಕೋರ್ಟ್‌ ತಿಳಿಸಿದೆ.

ಹಾಗಿದ್ದರೂ, ಮೇಲ್ವಿಚಾರಣೆಯಿಲ್ಲದೆ ಅಪ್ರಾಪ್ತ ಮಕ್ಕಳಿಗೆ ಮೊಬೈಲ್ ಫೋನ್ ನೀಡುವ ಅಪಾಯದ ಬಗ್ಗೆ ನ್ಯಾಯಾಧೀಶ ಕುಂಞಿಕೃಷ್ಣನ್ ಪೋಷಕರಿಗೆ ಎಚ್ಚರಿಕೆ ನೀಡಿದರು. ಇಂಟರ್ನೆಟ್‌ ಕನೆಕ್ಟ್‌ ಇರುವ ಮೊಬೈಲ್‌ ಫೋನ್‌ಗಳಲ್ಲಿ ಪೋರ್ನ್‌ ಸೈಟ್‌ಗಳಿಗೆ ಬಹಳ ಸುಲಭವಾಗಿ ಪ್ರವೇಶ ಪಡೆಯಬಹುದು. ಹಾಗೇನಾದರೂ ಮಕ್ಕಳು ಅಂಥ ವಿಡಿಯೋಗಳನ್ನು ವೀಕ್ಷಣೆ ಮಾಡಿದರೆ, ಭವಿಷ್ಯದಲ್ಲಿ ಅದರ ಪರಿಣಾಮ ಎದುರಿಸುತ್ತಾರೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಹಾಗಾಗಿ ಮಕ್ಕಳಿಗೆ ಮೊಬೈಲ್‌ಗಲ್ಲಿ ಮಾಹಿತಿಯುಕ್ತ ಸುದ್ದಿ ಮತ್ತು ವಿಡಿಯೋಗಳನ್ನು ತೋರಿಸಿ, ಮೊಬೈಲ್‌ ಫೋನ್‌ಗಳನ್ನು ಕೊಟ್ಟು ಆಟವಾಡಲು ಬಿಡುವುದಕ್ಕಿಂತ ಮೈದಾನಕ್ಕೆ ಅವರನ್ನು ಬಿಟ್ಟು ಅವರ ಆಟವನ್ನು ನೋಡುವುದು ಒಳ್ಳೆಯದು ಎಂದು ಹೇಳಿದೆ.

ಪೋರ್ನ್‌ ವಿಡಿಯೋ ನೋಡಿ ಕಲಿತಿರುವೆ, ತುಂಬಾ ನಾಟಿ ಫೋಟೋ ಕಳುಹಿಸಿದೆ; ಶಾಕಿಂಗ್ ಹೇಳಿಕೆ ಕೊಟ್ಟ ಕನ್ನಡತಿ ಲಕ್ಷಿ!

ಸ್ವಿಗ್ಗಿ ಮತ್ತು ಝೋಮಾಟೋಗಳಿಂದ ರೆಸ್ಟೋರೆಂಟ್‌ಗಳ ಆಹಾರವನ್ನು ಖರೀದಿಸುವ ಬದಲು, ಮಕ್ಕಳು ತಮ್ಮ ತಾಯಿ ಮಾಡಿರುವ ರುಚಿಕರವಾದ ಆಹಾರವನ್ನು ಸವಿಯಲಿ. ಮೈದಾನದಲ್ಲಿ ಆಟವಾಡಿ ದಣಿಯುವ ವೇಳೆಗೆ, ತಾಯಿ ಮಾಡಿರುವ ಆಹಾರದ ಸುವಾಸನೆ ಅವರ ಮೂಗಿಗೆ ಬಡಿದು ಮನೆಗೆ ಹಿಂತಿರುಗಲಿ. ಇದೆಲ್ಲವನ್ನೂ ನಾನು ಈ ಸಮಾಜದ ಅಪ್ರಾಪ್ತ ಮಕ್ಕಳ ಪೋಷಕರ ವಿವೇಚನೆಗೆ ಬಿಡುತ್ತೇನೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ತನ್ನ ವಿರುದ್ಧ ಐಪಿಸಿಯ 292 ರ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಆರೋಪಿಯು ಸಲ್ಲಿಸಿದ ಕ್ರಿಮಿನಲ್ ವಿವಿಧ ಅರ್ಜಿಯಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ.

ಅಶ್ಲೀಲ ವಿಡಿಯೋದಲ್ಲಿ ಹೆಂಡ್ತಿ ನಟಿಸಿರೋ ಅನುಮಾನ: ಮನಬಂದಂತೆ ಹಲ್ಲೆ ಮಾಡಿದ ಪೋರ್ನ್‌ ಚಟಕ್ಕೆ ಬಿದ್ದ ಪತಿ

Follow Us:
Download App:
  • android
  • ios