Asianet Suvarna News Asianet Suvarna News

ಹೆಸರಿಡುವ ವಿಚಾರಕ್ಕೆ ಅಪ್ಪ ಅಮ್ಮನ ನಡುವೆ ಜಗಳ: ಮಗುವಿಗೆ ಕೋರ್ಟ್‌ನಿಂದಲೇ ನಾಮಕರಣ...!

 ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ನಡುವೆ ಮಗುವಿನ ಹೆಸರಿನ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿ ನಾಮಕರಣ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ

Kerala High court did nomenclature to newly born baby after  father and mother starts fights over naming the child akb
Author
First Published Oct 3, 2023, 9:57 AM IST

ಕೊಚ್ಚಿ: ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ನಡುವೆ ಮಗುವಿನ ಹೆಸರಿನ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿ ನಾಮಕರಣ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಫೆ.12, 2020ರಂದು ಮಗು ಜನಿಸಿದ ನಂತರ ದಂಪತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರಿಂದ ಮಗುವಿನ ಜನನ ಪ್ರಮಾಣಪತ್ರದಲ್ಲಿ ಹೆಸರು ನಮೂದಿಸಲು ಒಮ್ಮತ ಮೂಡದಿದ್ದ ಕಾರಣ ತಾಯಿ ಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾ. ಬೇಚು ಕುರಿಯನ್‌ ಥಾಮಸ್‌ (Bechu Kurian Thomas) ಸೆ.5ರಂದು ನೀಡಿದ ಆದೇಶದಲ್ಲಿ ‘ತಾಯಿಯ ಬಳಿ ಮಗು ವಾಸಿಸುತ್ತಿರುವ ಕಾರಣ ಆಕೆ ಸೂಚಿಸಿದ ಹೆಸರಿಗೆ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಆದರೆ ಪಿತೃತ್ವದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲದಿರುವುದರಿಂದ ತಂದೆಯ ಹೆಸರನ್ನೂ ಮಗುವಿನೊಂದಿಗೆ ಸೇರಿಸಬೇಕು. ಒಂದು ಮಗುವಿಗೆ ಹೆಸರನ್ನು ಇಡುವಾಗ ಮಗುವಿನ ಬೆಳವಣಿಗೆಯನ್ನು ಪರಿಗಣಿಸಬೇಕೇ ಹೊರತು ತಂದೆ ತಾಯಿಗಳ ಬಯಕೆ ಅಥವಾ ಸಾಮಾಜಿಕ ಪ್ರಭಾವಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಪೇರೆನ್ಸ್‌ ಪೇಟ್ರೀ ತತ್ವದ ಪ್ರಕಾರ ನ್ಯಾಯಾಲಯವೇ  ಮಗುವಿಗೆ ಪ್ರತ್ಯೇಕ ಹೆಸರನ್ನು ಸೂಚಿಸುತ್ತದೆ ಎಂದು ತಿಳಿಸಿದೆ.

ಮನೆಯ ಟ್ರಂಕ್‌ನಲ್ಲಿ 3 ಸಹೋದರಿಯರ ಶವ ಪತ್ತೆ: ಸಾಕಲಾಗದೇ ಪೋಷಕರಿಂದಲೇ ಹತ್ಯೆ

ಅದರನ್ವಯ ತಾಯಿ ಸೂಚಿಸಿದ ಪುಣ್ಯ (Punya) ಎಂಬ ಹೆಸರನ್ನು ಮಗುವಿಗೆ ಹೈಕೋರ್ಟ್‌ ಇಟ್ಟಿದ್ದು, ಮಗುವಿನ ಹೆಸರಿನ ಮುಂದೆ ತಂದೆ ಉಪನಾಮವನ್ನು ಸೇರಿಸಲು ಸೂಚಿಸಿದೆ.

ರಸ್ತೆ ಪಕ್ಕ ಮಲಗಿದ್ದ 10 ಕಾರ್ಮಿಕರ ಮೇಲೆ ಹರಿದ ಟ್ರಕ್‌: 5 ಸಾವು, ಐವರು ಗಂಭೀರ 

ಬ್ರಿಟಿಷ್‌ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!

Follow Us:
Download App:
  • android
  • ios