Asianet Suvarna News Asianet Suvarna News

ಮನೆಯ ಟ್ರಂಕ್‌ನಲ್ಲಿ 3 ಸಹೋದರಿಯರ ಶವ ಪತ್ತೆ: ಸಾಕಲಾಗದೇ ಪೋಷಕರಿಂದಲೇ ಹತ್ಯೆ

ತಮ್ಮದೇ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಮೂವರು ಅಕ್ಕ ತಂಗಿಯರ ಶವ ಪತ್ತೆಯಾಗಿರುವ ನಿಗೂಢ ಘಟನೆ ಚಂಡೀಗಢದ ಜಲಂಧರ್‌ ಜಿಲ್ಲೆಯಲ್ಲಿ ನಡೆದಿದೆ. 

Dead bodies of 3 sisters aged 4 to 9 years were found in the trunk at Jalandhars house akb
Author
First Published Oct 3, 2023, 7:40 AM IST

ಜಲಂಧರ್‌: ತಮ್ಮದೇ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಮೂವರು ಅಕ್ಕ ತಂಗಿಯರ ಶವ ಪತ್ತೆಯಾಗಿರುವ ನಿಗೂಢ ಘಟನೆ ಚಂಡೀಗಢದ ಜಲಂಧರ್‌ ಜಿಲ್ಲೆಯಲ್ಲಿ ನಡೆದಿದೆ. 

ಇಲ್ಲಿನ ಕಾನ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ವಲಸೆ ಕುಟುಂಬವೊಂದರಲ್ಲಿರುವ ಐದು ಮಕ್ಕಳ ಪೈಕಿ ಅಮೃತ (9), ಶಕ್ತಿ (7) ಮತ್ತು ಕಾಂಚನ (4) ಎಂಬ ಮೂವರು ಚಿಕ್ಕ ಮಕ್ಕಳ ಮೃತದೇಹವು ಭಾನುವಾರ ಅವರದೇ ಮನೆಯ ಟ್ರಂಕ್‌ನಲ್ಲಿ ಸಿಕ್ಕಿವೆ. ಭಾನುವಾರ ಕೆಲಸದಿಂದ ಹಿಂದಿರುಗಿದ ಮಕ್ಕಳು ಕಾಣದಿದ್ದಾಗ ಅವರ ಪೋಷಕರು ಮಕ್ಸೂದನ್‌ ಪೊಲೀಸ್ ಠಾಣೆಯಲ್ಲಿ ಮಕ್ಕಳು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಮೃತ ಮ

ರಸ್ತೆ ಪಕ್ಕ ಮಲಗಿದ್ದ 10 ಕಾರ್ಮಿಕರ ಮೇಲೆ ಹರಿದ ಟ್ರಕ್‌: 5 ಸಾವು, ಐವರು ಗಂಭೀರ

ಬಾಲಕಿಯ ತಂದೆಗೆ ವಿಪರೀತ ಕುಡಿತದ ಚಟ ಇದ್ದ ಕಾರಣ ಮನೆ ಖಾಲಿ ಮಾಡುವಂತೆ ಅವರ ಬಾಡಿಗೆ ಮನೆಯ ಮಾಲೀಕರು ಆದೇಶಿಸಿದ್ದರು. ಇದಕ್ಕಾಗಿಯೇ ವಸ್ತುಗಳನ್ನು ಸ್ಥಳಾಂತರ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬ್ರಿಟಿಷ್‌ ಆಳ್ವಿಕೆಯ 40 ವರ್ಷದಲ್ಲಿ 16.5 ಕೋಟಿಗೂ ಹೆಚ್ಚು ಭಾರತೀಯರ ಸಾವು, 3600 ಲಕ್ಷ ಕೋಟಿ ರು. ಲೂಟಿ!

ಖರ್ಚು ಭರಿಸಲಾಗದೇ ಪೋಷಕರಿಂದಲೇ ಕೊಲೆ

ಭಾನುವಾರ ಈ ಘಟನೆ ನಡೆದಿದ್ದು, ಬಳಿಕ ವಿಚಾರಣೆ ನಡೆಸಿದ ಪೊಲೀಸರು ಮಕ್ಕಳ ಪೋಷಕರನ್ನೇ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಸುಶೀಲ್ ಮಂಡಲ್ ಹಾಗೂ ಮೀನು ಬಂಧಿತ ದಂಪತಿ, ಇವರಿಗೆ ಒಟ್ಟು ಐವರು ಮಕ್ಕಳಿದ್ದರು. ಇವರಲ್ಲಿ ಕೊನೆಯ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವನ್ನು ಜೊತೆಯಲ್ಲೇ ಇವರು ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಉಳಿದ ಮೂವರು ಮಕ್ಕಳಿಗೆ ವಿಷ ಉಣಿಸಿ ಕೊಂದ ದಂಪತಿ ಮಕ್ಕಳನ್ನು ಟ್ರಂಕ್‌ಗೆ ತುಂಬಿಸಿ ಮನೆ ಹಿಂದೆ ಎಸೆದಿದ್ದರು. ಪೊಲೀಸ್ ತನಿಖೆ ವೇಳೆ ಮಕ್ಕಳನ್ನು ತಾವೇ ಕೊಲೆ ಮಾಡಿದ್ದಾಗಿ ದಂಪತಿ ಒಪ್ಪಿಕೊಂಡಿದ್ದಾರೆ.  ಬಡತನ ಹಾಗೂ ಮಕ್ಕಳ ವೆಚ್ಚ ಬರಿಸಲಾಗದ್ದಕ್ಕೆ ಮಕ್ಕಳನ್ನು ಹತ್ಯೆ ಮಾಡಿದ್ದಾಗಿ ಈ ದಂಪತಿ ಹೇಳಿದ್ದಾರೆ. ಕೊಲೆಯಾದ ಮಕ್ಕಳು ಭಾನುವಾರದಿಂದ ನಾಪತ್ತೆಯಾಗಿದ್ದಾರೆ ಎಂದು ವರದಿ ಆಗಿತ್ತು. ಹೀಗಾಗಿ ಶೋಧ ನಡೆಸಿದಾಗ ಟ್ರಂಕ್‌ನಲ್ಲಿ ಮಕ್ಕಳ ಶವ ಪತ್ತೆಯಾಗಿತ್ತು.

24 ಗಂಟೆಯ ಒಳಗೆ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಸೇರಿದಂತೆ 24 ಮಂದಿ ಸಾವು!

ಹಾಲಿನಲ್ಲಿ ಕ್ರಿಮಿನಾಶಕ ನೀಡಿ ಮಕ್ಕಳನ್ನು ಕೊಲೆ ಮಾಡಿದ್ದಾಗಿ ದಂಪತಿ ಹೇಳಿದ್ದಾರೆ. 

Follow Us:
Download App:
  • android
  • ios