ಸಿಎಎ ವಿರುದ್ಧದ ಕೇರಳ ವಿಧಾನಸಭೆ ನಿರ್ಣಯ ಸಂವಿಧಾನ ಬಾಹಿರ ಎಂದ ರಾಜ್ಯಪಾಲ!
ಕೇರಳ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಕಂದಕ| ಸಿಎಎ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ| ಕೇರಳ ಸರ್ಕಾರದ ನಿರ್ಧಾರ ಸಂವಿಧಾನ ಬಾಹಿರ ಎಂದ ರಾಜ್ಯಪಾಲ| ಕೇರಳ ಸರ್ಕಾರದ ವಿರುದ್ಧ ಆರಿಫ್ ಮೊಹಮ್ಮದ್ ಗರಂ| ಪೌರತ್ವ ವಿಷಯ ಕೇಂದ್ರ ಪಟ್ಟಿಯಲ್ಲಿ ಬರುತ್ತದೆ ಎಂದ ಆರಿಫ್ ಮೊಹಮ್ಮದ್| ರಾಜ್ಯ ಸರ್ಕಾರ ಅನಗತ್ಯವಾಗಿ ಸಮಯ ಹಾಳು ಮಾಡುತ್ತಿದೆ ಎಂದ ರಾಜ್ಯಪಾಲ|
ತಿರುವನಂತಪುರಂ(ಜ.02): ಪೌರತ್ವ ತಿದ್ದುಪಡಿ ಕಾಯ್ದೆ ಕೇರಳ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಕಂದಕ ಸೃಷ್ಟಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯ ವಿಧಾನಸಭೆ ನಿರ್ಣಯ ಅಂಗೀಕರಿಸಿರುವುದು ಸಂವಿಧಾನ ಬಾಹಿರ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಹೇಳಿದ್ದಾರೆ.
ಪೌರತ್ವ ವಿಷಯ ಕೇಂದ್ರ ಪಟ್ಟಿಯಲ್ಲಿ ಬರುತ್ತದೆ ಮತ್ತು ಕಾಯ್ದೆ ಜಾರಿ ಮಾಡುವುದು ಕೇಂದ್ರ ಸರ್ಕಾರದ ನಿರ್ಧಾರ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.
ಪೌರತ್ವ ವಿಚಾರ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಮಾಡಲು ಬರುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅನಗತ್ಯವಾಗಿ ಸಮಯ ಹಾಳು ಮಾಡುತ್ತಿದೆ. ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿರುವುದು ಕಾನೂನು ಬಾಹಿರ ಎಂದು ಆರಿಫ್ ಮೊಹಮ್ಮೊದ್ ಹೇಳಿದರು.
ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್ ಪೌರತ್ವ?
ಪೌರತ್ವ ಕಾಯ್ದೆ ಕೇರಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇಲ್ಲಿ ಯಾವುದೇ ಅಕ್ರಮ ವಲಸಿಗರು ಇಲ್ಲ ಎಂದು ಆರಿಫ್ ಮೊಹಮ್ಮೊದ್ ಸ್ಪಷ್ಟಪಡಿಸಿದರು.