Asianet Suvarna News Asianet Suvarna News

ಕೇರಳ ಸಿಎಂ ಗೂಂಡಾ: ಪಿಣರಾಯಿ ಎಷ್ಟು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ತಿಳಿದಿದ್ಯಾ? ಗವರ್ನರ್ ಕಿಡಿ

ಪಿಣರಾಯಿ ವಿಜಯನ್‌ ಅವರ ಇತಿಹಾಸ ನಿಮಗೆ ಗೊತ್ತಿದೆಯೇ? ಅವರು ಎಷ್ಟು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದಿದೆಯೇ? ನಾನು ಪಿಎಫ್‌ಐ ಕಾರ್ಯಕರ್ತರನ್ನು ಸೆನೆಟ್‌ಗೆ ನೇಮಕ ಮಾಡಿದರೆ ಮಾತ್ರ ಅದು ಸರಿಹೋಗುತ್ತಾ?’ ಎಂದು ಪ್ರಶ್ನಿಸಿದ್ದಾರೆ? ಅವರು ಎಷ್ಟು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದಿದೆಯೇ? ನಾನು ಪಿಎಫ್‌ಐ ಕಾರ್ಯಕರ್ತರನ್ನು ಸೆನೆಟ್‌ಗೆ ನೇಮಕ ಮಾಡಿದರೆ ಮಾತ್ರ ಅದು ಸರಿಹೋಗುತ್ತಾ?’ ಎಂದು ಪ್ರಶ್ನಿಸಿದ್ದಾರೆ.

kerala governor arif mohammed khan calls cm pinarayi vijayan a bully ash
Author
First Published Dec 19, 2023, 3:03 PM IST

ಮಲಪ್ಪುರಂ (ಡಿಸೆಂಬರ್ 19, 2023): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಆಡಳಿತಾರೂಢ ಸಿಪಿಎಂ ಪಕ್ಷದ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐನ ಕಾರ್ಯಕರ್ತರನ್ನು ರಾಜ್ಯಪಾಲರಾದ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಗೂಂಡಾಗಳು ಎಂದು ಕರೆದಿದ್ದಾರೆ.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಿಣರಾಯಿ ವಿಜಯನ್‌ ಅವರ ಇತಿಹಾಸ ನಿಮಗೆ ಗೊತ್ತಿದೆಯೇ? ಅವರು ಎಷ್ಟು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದಿದೆಯೇ? ನಾನು ಪಿಎಫ್‌ಐ ಕಾರ್ಯಕರ್ತರನ್ನು ಸೆನೆಟ್‌ಗೆ ನೇಮಕ ಮಾಡಿದರೆ ಮಾತ್ರ ಅದು ಸರಿಹೋಗುತ್ತಾ?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿರುವ ಅವರು ಇದು ಗೂಂಡಾಗಳ ಕೆಲಸ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: ಈ ವರ್ಷ ಶಬರಿಮಲೆಯಲ್ಲಿ ಭಕ್ತರು, ಆದಾಯ ಕುಸಿತ; ಆದರೂ ಭಕ್ತಾದಿಗಳ ಪರದಾಟ: ಕೇರಳ ಸರ್ಕಾರದ ಬಣ್ಣ ಬಯಲು?

ಇತ್ತೀಚೆಗೆ ರಾಜ್ಯದ ವಿವಿಗಳ ಮೇಲೆ ಸ್ವಾಧೀನ ಹೊಂದಲು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ತಿಕ್ಕಾಟ ನಡೆಯುತ್ತಿದೆ.

ಇದನ್ನು ಓದಿ: ದೇಶದ ಹೊಸ ಕೋವಿಡ್‌ ಕೇಸ್‌ಗಳಲ್ಲಿ ಕೇರಳದಲ್ಲೇ ಶೇ. 90ರಷ್ಟು ಪತ್ತೆ: ಇಲ್ಲಿ ಮಾಸ್ಕ್‌ ಕಡ್ಡಾಯ!

Follow Us:
Download App:
  • android
  • ios