ಈ ವರ್ಷ ಶಬರಿಮಲೆಯಲ್ಲಿ ಭಕ್ತರು, ಆದಾಯ ಕುಸಿತ; ಆದರೂ ಭಕ್ತಾದಿಗಳ ಪರದಾಟ: ಕೇರಳ ಸರ್ಕಾರದ ಬಣ್ಣ ಬಯಲು?

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಭಕ್ತರ ಪ್ರಮಾಣ 1.5 ಲಕ್ಷದಷ್ಟು ಕಡಿಮೆಯಾಗಿದೆ. ಈ ಬಾರಿ ಒಂದು ದಿನಕ್ಕೆ ಕೇವಲ 90 ಸಾವಿರ ಜನಕ್ಕೆ ಟೋಕನ್‌ ಸೀಮಿತಗೊಳಿಸಿದ್ದರೆ ಕಳೆದ ಬಾರಿ ಪ್ರತಿದಿನ 1.20 ಲಕ್ಷ ಭಕ್ತಾದಿಗಳು ದರ್ಶನ ಪಡೆದಿದ್ದರು. 

income at sabarimala sees fall due to less than anticipated turnouts ash

ಶಬರಿಮಲೆ (ಡಿಸೆಂಬರ್ 17, 2023): ಈ ವರ್ಷ ಶಬರಿಮಲೆಗೆ ಭಾರೀ ಪ್ರಮಾಣದಲ್ಲಿ ಭಕ್ತರು ಬಂದಿದ್ದೇ ಕೆಲ ಗೊಂದಲಗಳಿಗೆ ಕಾರಣ ಎಂಬ ಕೇರಳ ಸರ್ಕಾರದ ವಾದವನ್ನು ಅಲ್ಲಗಳೆಯುವ ಅಂಕಿ ಅಂಶವೊಂದು ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಬರಿಮಲೆಗೆ ಬಂದ ಭಕ್ತರ ಸಂಖ್ಯೆಯೂ ಕಡಿಮೆ, ಆದಾಯವೂ ಇಳಿದಿದೆ ಎಂದು ವರದಿಯೊಂದು ತಿಳಿಸಿದೆ.

ಮಕರವಿಳಕ್ಕು ಆಚರಣೆ ಅಂಗವಾಗಿ ಬಾಗಿಲು ತೆರೆದಾಗಿನಿಂದ ಶುಕ್ರವಾರದವರೆಗೆ ಒಟ್ಟು 17.56 ಲಕ್ಷ ಮಂದಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಭಕ್ತರ ಪ್ರಮಾಣ 1.5 ಲಕ್ಷದಷ್ಟು ಕಡಿಮೆಯಾಗಿದೆ. ಈ ಬಾರಿ ಒಂದು ದಿನಕ್ಕೆ ಕೇವಲ 90 ಸಾವಿರ ಜನಕ್ಕೆ ಟೋಕನ್‌ ಸೀಮಿತಗೊಳಿಸಿದ್ದರೆ ಕಳೆದ ಬಾರಿ ಪ್ರತಿದಿನ 1.20 ಲಕ್ಷ ಭಕ್ತಾದಿಗಳು ದರ್ಶನ ಪಡೆದಿದ್ದರು. 

ಇದನ್ನು ಓದಿ: 18 ತಾಸು ಕ್ಯೂ ನಿಂತ್ರೂ ಅಯ್ಯಪ್ಪ ದರ್ಶನವಿಲ್ಲ: ಅವ್ಯವಸ್ಥೆಯಿಂದ ಭಕ್ತರ ಪರದಾಟ, ಕಾಡಿನಲ್ಲೇ ವಾಸ!

ಆದಾಯದಲ್ಲೂ ಕುಸಿತವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 20.33 ಕೋಟಿ ರೂ. ಆದಾಯ ಕಡಿಮೆಯಾಗಿ ಕೇವಲ 134.77 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಅರವಣ, ಅಪ್ಪಂ ಮತ್ತು ಕನಿಕಾ ಮಾರಾಟದಲ್ಲಿ ಕ್ರಮವಾಗಿ 11.89 ಕೋಟಿ ರೂ. 44.89 ಲಕ್ಷ ರೂ. ಮತ್ತು 4.65 ಲಕ್ಷ ರೂ. ಆದಾಯ ಕುಸಿತವಾಗಿದೆ ಎಂದು ದೇಗುಲದ ಮಂಡಳಿ ಬಿಡುಗಡೆ ಮಾಡಿರುವ ದತ್ತಾಂಶ ತಿಳಿಸಿದೆ. ಆದರೂ, ಭಕ್ತಾದಿಗಳು ಅಯ್ಯಪ್ಪನ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಲ್ಲುವಂತಾಗಲು ಕಾರಣ ನಿಗೂಢವಾಗಿದೆ.

310 ಕೋಟಿ ಆದಾಯ ಬಂದರೂ ಅಯ್ಯಪ್ಪನ ಸನ್ನಿಧಿ ಅವ್ಯವಸ್ಥೆ ಆಗರ: ಶಬರಿಮಲೆಯಲ್ಲಿ ನೂಕುನುಗ್ಗಲು, ಪ್ರತಿಭಟನೆ

Latest Videos
Follow Us:
Download App:
  • android
  • ios