Asianet Suvarna News Asianet Suvarna News

ದೇಶದ ಹೊಸ ಕೋವಿಡ್‌ ಕೇಸ್‌ಗಳಲ್ಲಿ ಕೇರಳದಲ್ಲೇ ಶೇ. 90ರಷ್ಟು ಪತ್ತೆ: ಇಲ್ಲಿ ಮಾಸ್ಕ್‌ ಕಡ್ಡಾಯ!

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಜ್ವರ ಹಾಗೂ ಕೋವಿಡ್‌ ಲಕ್ಷಣಗಳನ್ನು ಹೊಂದಿದವರನ್ನು ಪತ್ತೆ ಹಚ್ಚಲು ಆರೋಗ್ಯ ಕಾರ್ಯಕರ್ತರು ವಿಶೇಷ ಅಭಿಯಾನ ಆರಂಭಿಸುತ್ತಿದ್ದಾರೆ.

kerala has 90 percent of fresh covid cases being reported in india ash
Author
First Published Dec 17, 2023, 9:37 AM IST

ತಿರುವನಂತಪುರ/ನವದೆಹಲಿ (ಡಿಸೆಂಬರ್ 17, 2023): ಮೂರು ವರ್ಷಗಳ ಹಿಂದೆ ದೇಶದಲ್ಲೇ ಮೊದಲ ಕೊರೋನಾ ಸೋಂಕು ಪ್ರಕರಣ ಪತ್ತೆಯಾದ ಕೇರಳದಲ್ಲಿ ಈಗ ಕೋವಿಡ್‌ ಮತ್ತೆ ಏರುಗತಿಯಲ್ಲಿದೆ. ಡಿಸೆಂಬರ್‌ ಆರಂಭದಿಂದ ದೇಶದಲ್ಲಿ ದೃಢಪಡುತ್ತಿರುವ ಹೊಸ ಕೊರೋನಾ ಸೋಂಕು ಪ್ರಕರಣಗಳಲ್ಲಿ ಕೇರಳದ ಪಾಲೇ ಶೇ. 90ರಷ್ಟಿರುವ ಸಂಗತಿ ಕಳವಳ ಹುಟ್ಟಿಸುತ್ತಿದೆ.

ಡಿಸೆಂಬರ್‌ ಆರಂಭವಾದ ಬಳಿಕ ಕೇರಳದಲ್ಲಿ ಮೂವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರಿಂದ ಎಚ್ಚೆತ್ತಿರುವ ಕಣ್ಣೂರು ಜಿಲ್ಲೆಯ ಪನೂರು ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಈ ನಡುವೆ ದೇಶದಲ್ಲಿ ಶನಿವಾರ 339 ಹೊಸ ಕೋವಿಡ್‌ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 1492 ಕ್ಕೆ ಏರಿಕೆಯಾಗಿದೆ.

ಇದನ್ನು ಓದಿ: ಚೀನಾ, ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಕೋವಿಡ್‌ ರೂಪಾಂತರಿ ಕೇರಳದಲ್ಲಿ ಪತ್ತೆ; ದೇಶದಲ್ಲಿ ಮತ್ತೆ ಆತಂಕ ಶುರು!

ಕೇರಳದಲ್ಲಿ ನವೆಂಬರ್‌ ತಿಂಗಳಿನಲ್ಲಿ 470 ಕೋವಿಡ್‌ ಕೇಸ್‌ ಪತ್ತೆಯಾಗಿದ್ದವು. ಆದರೆ ಡಿಸೆಂಬರ್‌ನ ಮೊದಲ 10 ದಿನಗಳಲ್ಲಿ 825 ಹೊಸ ಪ್ರಕರಣ ದೃಢಪಟ್ಟಿವೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ. ಈ ಅವಧಿಯಲ್ಲಿ ದೇಶಾದ್ಯಂತ ಪತ್ತೆಯಾದ ಪ್ರಕರಣಗಳಿಗೆ ಹೋಲಿಸಿದರೆ ಶೇ.90ರಷ್ಟು.

ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳಲ್ಲಿ ಕೋವಿಡ್‌ ಪತ್ತೆಯಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಆ ರೋಗಿಗಳಲ್ಲಿ ಎಚ್‌1ಎನ್‌1 ಸೋಂಕು ಇರುವುದಿಲ್ಲ. ಆದರೆ ಕೋವಿಡ್‌ ಕಂಡುಬರುತ್ತಿದೆ. ಕೆಲವು ರೋಗಿಗಳಲ್ಲಿ ಸೋಂಕಿನ ಲಕ್ಷಣ ದೀರ್ಘಾವಧಿಯಾಗಿದ್ದು, ಒಂದೆರಡು ತಿಂಗಳವರೆಗೂ ಇರುತ್ತದೆ. ಕೋವಿಡ್‌ಗಿಂತ ಹೆಚ್ಚಾಗಿ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಯಿಂದಾಗಿಯೂ ರೋಗ ಲಕ್ಷಣ ಉಲ್ಬಣವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: ಕೋವಿಡ್-19 ಓಮಿಕ್ರಾನ್ ಉಪತಳಿ ಆರ್ಭಟ ಪುನಾರಂಭ: 356 ಮಂದಿಗೆ ಕೊರೊನಾ ಪಾಸಿಟಿವ್!

ಮತ್ತೊಂದೆಡೆ, ಕೋವಿಡ್‌ ಹೆಚ್ಚುತ್ತಿದ್ದರೂ, ಗಂಭೀರ ಪ್ರಮಾಣದಲ್ಲಿ ಇಲ್ಲ. ಸಾವಿನ ಪ್ರಮಾಣವೂ ಅತ್ಯಲ್ಪವಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.

ಮಾಸ್ಕ್‌ ಕಡ್ಡಾಯ:
ಈ ನಡುವೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಜ್ವರ ಹಾಗೂ ಕೋವಿಡ್‌ ಲಕ್ಷಣಗಳನ್ನು ಹೊಂದಿದವರನ್ನು ಪತ್ತೆ ಹಚ್ಚಲು ಆರೋಗ್ಯ ಕಾರ್ಯಕರ್ತರು ವಿಶೇಷ ಅಭಿಯಾನ ಆರಂಭಿಸುತ್ತಿದ್ದಾರೆ.

ಇದನ್ನು ಓದಿ: ದಿಢೀರ್ ಕೋವಿಡ್ ಏರಿಕೆ; ಕೇರಳದಲ್ಲಿ ದೇಶದ ಶೇ.90 ರಷ್ಟು ಪ್ರಕರಣ ದಾಖಲು, 2 ಸಾವು!

Follow Us:
Download App:
  • android
  • ios