ಬಂಟ್ವಾಳ(ಜು.04): ಗಡಿ ಸಮಸ್ಯೆಯ ಹಿನ್ನೆಲೆಯಲ್ಲಿ ದಾರಿ ತಪ್ಪಿ​ಸಿ​ಕೊಂಡು ಪರ​ದಾ​ಡು​ತ್ತಿದ್ದ ಎಸ್‌​ಎ​ಸ್‌​ಎ​ಲ್‌ಸಿ ವಿದ್ಯಾ​ರ್ಥಿ​ಯೊ​ಬ್ಬ​ನನ್ನು ಶಿಕ್ಷ​ಕರು ಸಮ​ಯಕ್ಕೆ ಸರಿ​ಯಾಗಿ ಪರೀ​ಕ್ಷೆಗೆ ಹಾಜ​ರಾ​ಗು​ವಂತೆ ಮಾಡುವಲ್ಲಿ ಯಶ​ಸ್ವಿ​ಯಾ​ಗಿ​ದ್ದಾ​ರೆ.

ಏನಾ​ಗಿ​ತ್ತು?: ಮುಡಿಪು ಪರೀಕ್ಷಾ ಕೇಂದ್ರಕ್ಕೆ ಪ್ರತಿ​ದಿನ ಸಮ​ಯಕ್ಕೆ ಸರಿ​ಯಾಗಿ ಬರು​ತ್ತಿದ್ದ ಸಾಲೆ​ತ್ತೂರು ಸರ್ಕಾರಿ ಪ್ರೌಢ​ಶಾ​ಲೆಯ ವಿದ್ಯಾರ್ಥಿ ತಂಝೀರ್‌ ಕಳೆದ ಎಲ್ಲ ಪರೀ​ಕ್ಷೆ​ಗ​ಳಿಗೂ ಹಾಜ​ರಾ​ಗಿದ್ದ. ಆದರೆ ಶುಕ್ರ​ವಾರ ನಡೆದ ಕೊನೆಯ ಕನ್ನಡ ಪರೀ​ಕ್ಷೆಗೆ ಸಮಯ 9.30 ಆದರೂ ಪರೀಕ್ಷಾ ಕೇಂದ್ರಕ್ಕೆ ಬಂದಿ​ರ​ಲಿಲ್ಲ.

ಬತ್ತದ ಉತ್ಸಾಹ: ಮೊಮ್ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಜತೆ SSLC ಪರೀಕ್ಷೆ ಬರೆದ ಪೊಲೀಸ್

ಪ್ರತಿ ದಿನ ಆತ ಸ್ವಂತ ವಾಹನದಲ್ಲಿ ಮನೆಯವರ ಜೊತೆ ಬರುತ್ತಿದ್ದ ತಂಝೀರ್‌, ಇಂದು ಇನ್ನೂ ಬಾರ​ದಿ​ರುವ ಬಗ್ಗೆ ಆತನ ಗೆಳೆ​ಯರು, ಕೇರಳದ ಬಸ್‌ ವ್ಯವಸ್ಥೆಯ ನೋಡಲ್‌ ವಿನಾಯಕ ಮತ್ತು ರಾಘವೇಂದ್ರ ಅವರಿಗೆ ತಿಳಿಸಿದ ನಂತರ ಮನೆಯವರ ಸಂಪರ್ಕ ಮಾಡಲಾಯಿತು. ಆದರೆ ಮನೆ​ಯ​ವರು ನೀಡಿದ್ದ ಎರಡೂ ನಂಬರ್‌ ಸ್ವಿಚ್‌ ಆಫ್‌ ಬರು​ತ್ತಿತ್ತು. ನಂತರ ಸಂಬಂಧಿಕರ ದೂರವಾಣಿ ಸಂಖ್ಯೆ ಸಿಕ್ಕಿದ್ದು, ಅವನು ಮನೆಯಿಂದ ಹೊರಟಿರುವುದಾಗಿ ಅವರು ತಿಳಿಸಿದರು.

ಆತ ಪ್ರತಿ ದಿನ ಬರುತ್ತಿದ್ದ ಹೂ ಹಾಕುವ ಕಲ್ಲು ದಾರಿ ಮತ್ತು ನಂದ್ರಬೈಲು ಕೈರಂಗಳ ದಾರಿ ಮತ್ತು ಪಾತೂರು ಬಾಕ್ರಬೈಲ್‌ ರಸ್ತೆಗಳಲ್ಲಿ ಎಲ್ಲ ರೀತಿಯ ಪ್ರವೇಶ ಮುಚ್ಚಿರುವ ಕಾರಣ ವಿದ್ಯಾರ್ಥಿ ದಾರಿ ತಪ್ಪಿದ್ದರಿಂದ ಶಿಕ್ಷಕರಿಗೆ ವಿದ್ಯಾರ್ಥಿಯೊಡನೆ ಸಂಪರ್ಕ ಸಾಧಿಸಲು ಅಸಾಧ್ಯವಾಯಿತು.

ದುಃಖದಲ್ಲೇ ಪರೀಕ್ಷೆ ಬರೆದು ಬಳಿಕ ತಾಯಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ SSLC ವಿದ್ಯಾರ್ಥಿನಿ

ಶಿಕ್ಷಕರಿಬ್ಬರು ಎಲ್ಲ ಗಡಿಗಳಿಗೂ ಸ್ವಂತ ವಾಹನದಲ್ಲಿ ಹೋಗಿ ಪರಿಶೀಲಿಸಿದಾಗ ಶಾಲಾ ಸಮವಸ್ತ್ರಧರಿಸಿರುವ ವಿದ್ಯಾರ್ಥಿ ಮತ್ತು ಆತನ ಅಣ್ಣಬರುತ್ತಿರುವ ಬಗ್ಗೆ ಸಾರ್ವ​ಜ​ನಿ​ಕರು ಶಿಕ್ಷ​ಕ​ರಿಗೆ ತಿಳಿ​ಸಿ​ದ್ದಾರೆ. ಕೂಡಲೇ ಶಿಕ್ಷರಿಬ್ಬರು ವಿದ್ಯಾರ್ಥಿ ಬರು​ತ್ತಿದ್ದ ನಾರ್ಯ ಗಡಿಗೆ ತಲುಪಿ ಪೊಲೀಸರಲ್ಲಿ ವಿನಂತಿಸಿ ವಿದ್ಯಾರ್ಥಿಯನ್ನು ತಡೆಗೋಡೆ ದಾಟಿಸಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಯಶಸ್ವಿಯಾದರು.