Asianet Suvarna News Asianet Suvarna News

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಕೇರಳ ವೈದ್ಯನ ಔಷಧಿ ಚೀಟಿ...

ಕೇರಳದ ವೈದ್ಯರೊಬ್ಬರು ನೀಡಿದ ಔಷಧಿ ಚೀಟಿಯ ಬರವಣಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

Kerala doctors medicine priscription goes viral in social Media akb
Author
First Published Sep 23, 2022, 12:11 PM IST

ತಿರುವನಂತಪುರ: ವೈದ್ಯರು ಬರೆದ ಔಷಧಿ ಚೀಟಿಯನ್ನು ವೈದ್ಯರನ್ನು ಹೊರತುಪಡಿಸಿದರೆ ಮೆಡಿಕಲ್ ಶಾಪ್ ಸಿಬ್ಬಂದಿ ಮಾತ್ರ ಓದಲು ಸಾಧ್ಯ ಎಂಬುದು ಬಹಳ ಜನಜನಿತವಾಗಿರುವ ಮಾತು. ಇದು ನಿಜವೂ ಹೌದು, ಮೆಡಿಕಲ್ ಶಾಪ್ ಸಿಬ್ಬಂದಿಯ ಹೊರತಾಗಿ ಇದನ್ನು ಬೇರಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಕಾರಣ ವೈದ್ಯರ ಅಸ್ಪಷ್ಟವಾದ ಚಿತ್ತು ಚಿತ್ತಾದ ಹ್ಯಾಂಡ್ ರೈಟಿಂಗ್(ಬರವಣಿಗೆ). ಬಹುತೇಕ ವೈದ್ಯರು ಹೀಗೆಯೇ ಬರೆಯುತ್ತಾರೆ. ಆದರೆ ಇದಕ್ಕೆ ವಿರೋಧ ಎಂಬಂತೆ ಈಗ ಕೇರಳದ ವೈದ್ಯರೊಬ್ಬರು ನೀಡಿದ ಔಷಧಿ ಚೀಟಿಯ ಬರವಣಿಗೆ ಬಹಳ ಸ್ಪಷ್ಟವಾಗಿದೆ. ಇದನ್ನು ಇಂಗ್ಲೀಷ್ ಓದಬಲ್ಲ ಯಾರು ಬೇಕಾದರೂ ಓದಲು ಸಾಧ್ಯವಾಗುವಂತಿದೆ. ಹೀಗಾಗಿ ಈ ವೈದ್ಯರ ಚೀಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಒಂದು ತಲೆಮಾರಿನಿಂದ(Generation) ಮತ್ತೊಂದು ತಲೆಮಾರಿಗೆ ಜೀವನ ಶೈಲಿಯಿಂದ (Lifestyle) ಹಿಡಿದು ಪ್ರತಿಯೊಂದರಲ್ಲೂ ಭಾರಿ ವ್ಯತ್ಯಾಸವಿರುತ್ತದೆ. ತಂತ್ರಜ್ಞಾನ (Technology), ಶಿಕ್ಷಣ (education), ಉದ್ಯೋಗ (Job) ಸೇರಿದಂತೆ ಪ್ರತಿ ವಿಚಾರದಲ್ಲೂ ವರ್ಷಗಳು ಉರುಳಿದಂತೆ ಬದಲಾವಣೆಯಾಗುತ್ತದೆ. ಅದೇ ರೀತಿ ಇದು ಈಗ ವೈದ್ಯರ ಕೈಬರಹ ಅನ್ನು ಕೂಡ ಬದಲಿಸುತ್ತಿದೆಯೇ ಎಂಬ ಶಂಕೆ ಮೂಡಿದೆ. ಕೆಲ ದಿನಗಳ ಹಿಂದಷ್ಟೇ ಉದ್ಯಮಿ ಆನಂದ್ ಮಹೀಂದ್ರ (Anand Mahindra) ಅವರು ವಿಡಿಯೋವೊಂದನ್ನು ಶೇರ್ ಮಾಡಿ ವೈದ್ಯರ ಬರವಣಿಗೆ ಕಾಲದಿಂದ ಕಾಲಕ್ಕೆ ಹೇಗೆ ಬದಲಾಯಿತು ಎಂದು ಟ್ವಿಟ್ಟರ್‌ನಲ್ಲಿ(Twitter)  ಪೋಸ್ಟ್ ಶೇರ್ ಮಾಡಿದ್ದರು. 

ಅವರ ಮಾತು ಅಥವಾ ಪೋಸ್ಟ್ ಈ ವೈದ್ಯರನ್ನು ತಲುಪಿತೋ ಏನು ತಿಳಿಯದು. ಆದರೆ ವೈದ್ಯರು ನೀಟಾಗಿ ಬರೆದ ಔಷಧಿ ಚೀಟಿ ಈಗ ವೈರಲ್ ಆಗಿದೆ. ಇಷ್ಟೊಂದು ನೀಟಾಗಿ ವೈದ್ಯಕೀಯ ಚೀಟಿ ಬರೆದ ವೈದ್ಯರು ಯಾರಿರಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿರಬಹುದು ಅಲ್ವಾ?  ಈ ವೈದ್ಯರ ಹೆಸರು ಡಾ. ನಿತೀನ್ ನಾರಾಯಣ್ (Nithin narayan), ಮಕ್ಕಳ ತಜ್ಞರಾಗಿರುವ (Pediatrician) ಈ ನಿತೀನ್ ನಾರಾಯಣ್, ಪಾಲಕಾಡ್‌ನ (Palakad) ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಾವು ರೋಗಿಗಳಿಗೆ ನೀಡಿರುವ ಔಷಧಿ ಚೀಟಿಯಲ್ಲಿ ಸಂಪೂರ್ಣವಾಗಿ ಇಂಗ್ಲೀಷ್ ಕ್ಯಾಪಿಟಲ್ ಲೆಟರ್‌ ಬಳಸಿ ಔಷಧಿಯ ವಿವರ ನೀಡಿದ್ದಾರೆ. 

Hubballi KIMS: ಸತತ 6 ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು!

ಮೂಲತಃ ತ್ರಿಶೂರ್‌ನ (Thrissur) ಇರಿಂಜಲಕುಡ ಸಮೀಪದ ಪಡಿಯೂರ್‌ನವರಾಗಿರುವ ಇವರು ಕಳೆದ ಮೂರು ವರ್ಷಗಳಿಂದ ಪಾಲಕಾಡ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರ ಕೈ ಬರಹ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗೆ ಬಹುತೇಕ ಏಜೆನ್ಸಿಗಳು, ವೈದ್ಯರು, ಔಷಧಿ ಚೀಟಿ ಬರೆಯುವಾಗ ಕ್ಯಾಪಿಟಲ್ ಲೆಟರ್( Bloc letter) ಅಥವಾ ಇಂಗ್ಲೀಷ್‌ನ ದೊಡ್ಡ ಅಕ್ಷರಗಳನ್ನು ಬಳಸಿ ಬರೆಯಬೇಕು ಎಂದು ಆಗ್ರಹಿಸುತ್ತಿವ. ಹೀಗಿದ್ದರು ಬಹುತೇಕ ವೈದ್ಯರು ಅಭ್ಯಾಸಬಲದಂತೆ ತಮ್ಮ ಎಂದಿನ ಕೈಬರಹ ಬಳಸುತ್ತಾರೆ. 

ಮಹಿಳೆಯ ಹೊಟ್ಟೆಯೊಳಗಿತ್ತು ಬೃಹತ್‌ ಫುಟ್‌ಬಾಲ್ ಗಾತ್ರದ ಗೆಡ್ಡೆ!

ಈ ನಡುವೆ ವೈದ್ಯ ನಿತೀನ್ ಅವರ ಕೈ ಬರಹದ ಚೀಟಿ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಮಾಧ್ಯಮಗಳು ಸಂಪರ್ಕಿಸಿದ್ದಾಗ ಅವರು ಹೇಳಿದ್ದು ಇಷ್ಟು, "ಬಾಲ್ಯದಿಂದಲೂ, ನಾನು ನೀಟಾಗಿ ಅಕ್ಷರಗಳನ್ನು ಬರೆಯುತ್ತಿದೆ. ಕಾಫಿ ಪುಸ್ತಕ ಬರವಣಿಗೆ ಅಭ್ಯಾಸ ನನ್ನ ಕೈ ಬರಹವನ್ನು ಮತ್ತಷ್ಟು ಸುಧಾರಿಸಿತು. ಅಲ್ಲದೇ ಸುಂದರವಾಗಿ ಬರೆಯುವುದನ್ನೇ ಮುಂದುವರೆಸಿದೆ" ಎಂದು ವೈದ್ಯ ನಿತೀನ್ ಹೇಳಿಕೊಂಡಿದ್ದಾರೆ. ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ (MBBS) ಮುಗಿಸಿರುವ ಡಾಕ್ಟರ್ ನಿತೀನ್, ಜವಹರ್‌ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಎಜುಕೇಷನ್ & ರಿಸರ್ಚ್ ನಿಂದ ಎಂಡಿ ಪದವಿ ಪಡೆದಿದ್ದಾರೆ.

Follow Us:
Download App:
  • android
  • ios