ನಿಮ್ಮ ವ್ಯಾಪ್ತಿ ಅಲ್ಲ ಎಂದರೆ ರಾಜೀನಾಮೆ ಕೊಡಿ, ಬದಲಿ ವ್ಯಕ್ತಿಯನ್ನು ನಾವು ಹುಡುಕುತ್ತೇವೆ. ಇದು ಕಾಂಗ್ರೆಸ್ ಅಧಿಕೃತ ಎಕ್ಸ್ ಪೋಸ್ಟ್‌ನಲ್ಲಿ ಹಾಕಿದ ಪೋಸ್ಟ್. ಗಂಭೀರತೆ ಅರಿವಾಗುತ್ತಿದ್ದಂತೆ ಈ ಪೋಸ್ಟ್‌ನ್ನು ಕಾಂಗ್ರೆಸ್ ಡಿಲೀಟ್ ಮಾಡಿದೆ.
ನವದೆಹಲಿ (ಅ.13) ಚುನಾವಣಾ ಅಕ್ರಮ, ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ವಿಚಾರ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಭಾರಿ ಹೋರಾಟ ನಡೆಸುತ್ತಿದೆ. ಪ್ರಜಾಪ್ರಭುತ್ವ ಅಳಿಸಿ ಹೋಗಿದೆ ಎಂದು ಪ್ರತಿಭಟನೆಗಳು ಸಾಗಿದೆ. ಇದರ ನಡುವೆ ನ್ಯಾಯಾಂಗವನ್ನು ರಾಜೀಕಯಕ್ಕೆ ಬಳಸಿಕೊಳ್ಳುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯ ಕಾಂತ್ ಅವಕಾಶ ನೀಡಲಿಲ್ಲ. ಇತ್ತ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಕ್ರಮ ವಿರುದ್ದ ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ವೇಳೆ ಕಾನೂನು ಸುವ್ಯವಸ್ಥೆ ತಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂದು ಸೂರ್ಯ ಕಾಂತ್ ಹೇಳಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಎಕ್ಸ್ ಮೂಲಕ ಪೋಸ್ಟ್ ಮಾಡಿ ಕೈಸುಟ್ಟುಕೊಂಡಿದೆ. ಸೂರ್ಯ ಕಾಂತ್ ರಾಜೀನಾಮೆ ಕೊಡಿ, ಬದಲಿ ವ್ಯಕ್ತಿಯನ್ನು ನಾವು ಹುಡುಕುತ್ತೇವೆ ಎಂದು ಪೋಸ್ಟ್ ಮಾಡಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಗಂಭೀರತೆ ಅರಿವಾಗುತ್ತಿದ್ದಂತೆ ಈ ಪೋಸ್ಟ್‌ನ್ನು ಕಾಂಗ್ರೆಸ್ ಡಿಲೀಟ್ ಮಾಡಿದೆ.
ಕಾನೂನು ಸುವ್ಯವಸ್ಥೆ, ಕಾಂಗ್ರೆಸ್ ಕಂಗಾಲು
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೋರಾಟಗಾರರ ಮೇಲೆ ದಿಲ್ಲಿ ಪೊಲೀಸರ ಕ್ರಮ ಕುರಿತು ಅರ್ಜಿ ವಿಚಾರಣೆಯಲ್ಲಿ ಸೂರ್ಯಕಾಂತ್ ಕೆಲ ವಿಚಾರ ಸ್ಪಷ್ಟಪಡಿಸಿದ್ದರು. ಕಾನೂನು ಸುವ್ಯವಸ್ಥೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದರು. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಕೇರಳ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ , ಡಿಯರ್ ಸೂರ್ಯ ಕಾಂತ್, ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರೆ ನೀವು ರಾಜೀನಾಮೆ ನೀಡಿ. ಸರಿಯಾಗಿ ನಿರ್ವಹಿಸಬಲ್ಲ ವ್ಯಕ್ತಿಯನ್ನು ನಾವು ಹುಡುಕುತ್ತೇವೆ ಎಂದು ಪೋಸ್ಟ್ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಮ್ಮ ಕಾಪ್ಯವ್ಯಾಪ್ತಿ ಕುರಿತು ನೀಡಿದ ಹೇಳಿಕೆಯನ್ನು ಕೇರಳ ಕಾಂಗ್ರೆಸ್ ತನ್ನ ತಾಳಕ್ಕೆ ತಕ್ಕಂತೆ ಹಾಗೂ ರಾಜಕೀಯವಾಗಿ ಬಳಸಿಕೊಂಡಿತ್ತು. ರಾಜಕೀಯ ನಾಯಕ, ಚುನಾಯಿತಿ ನಾಯಕನ ವಿರುದ್ದ ಪೋಸ್ಟ್ ಹಾಕುವ ರೀತಿ ಕೇರಳ ಕಾಂಗ್ರೆಸ್ ಪೋಸ್ಟಾ ಹಾಕಿ ಕೈಸುಟ್ಟುಕೊಂಡಿತು. ಕೇರಳ ಕಾಂಗ್ರೆಸ್ ಮಾಡಿದ ತಪ್ಪು ಅರಿವಾಗುತ್ತಿದ್ದಂತೆ ವಿವಾದ ಜೋರಾಗಿತ್ತು. ತಕ್ಷಣವೇ ಕೇರಳ ಕಾಂಗ್ರೆಸ್ ಈ ಪೋಸ್ಟ್ ಡಿಲೀಟ್ ಮಾಡಿ ಸಮಸ್ಯೆಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿತು.
ಕಾಂಗ್ರೆಸ್ ನಾಟಕ ಬಯಲು, ನ್ಯಾಯಂಗವೇ ಮುಂದಿನ ಟಾರ್ಗೆಟ್
ಕಾಂಗ್ರೆಸ್ ಈ ಪೋಸ್ಟ್ ಸ್ಕ್ರೀನ್‌ಶಾಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ನಾಯಕರು ಇದೇ ಪೋಸ್ಟ್ ಹಿಡಿದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಚುನಾವಣೆ ಮೂಲಕ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಗೌರವ, ನಂಬಿಕೆಗೆ ಧಕ್ಕೆ ಬರುವಂತ ಕೆಲಸ ಮಾಡುತ್ತಿದೆ. ಈ ಹಿಂದೆಯೇ ನಾವು ಹೇಳಿದ್ದೆವು. ಕಾಂಗ್ರೆಸ್ ಮುಂದಿನ ಟಾರ್ಗೆಟ್ ನ್ಯಾಯಾಂಗ ವ್ಯವಸ್ಥೆ ಎಂದು. ಇದೀಗ ಸಾಬೀತಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಕೇರಳ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಈ ಪೋಸ್ಟ್ ಮೂಲಕ ತೀವ್ರ ವಿವಾದ ಎದುರಿಸಬೇಕಾಗಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಒಂದೊಂದೆ ಸಾಂವಿಧಾನಿಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿಕೊಂಡು ಬಂದು ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳದ ರೀತಿ ಸರ್ಕಾರ ಉರುಳಿಸಲು ಪ್ಲಾನ್ ಮಾಡುತ್ತಿದೆ ಅನ್ನೋದು ಸ್ಪಷ್ಟವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿಬರುತ್ತಿದೆ.
ರಾಹುಲ್ ಗಾಂಧಿಗೆ ಮುಖಭಂಗ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೇಟಿಯಾಗಿ ಮನವಿ ಸಲ್ಲಿಸಲು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ಲಾನ್ ಮಾಡಿತ್ತು. ಇದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವಕಾಶ ನೀಡಲಿಲ್ಲ. ಈ ಪ್ರಕರಣ ಈಗಾಗಲೇ ಕೋರ್ಟ್‌ನಲ್ಲಿದೆ. ಇಷ್ಟೇ ಅಲ್ಲ ನ್ಯಾಯಾಂಗವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಕೋರ್ಟ್ ಎಲ್ಲರಿಗೂ ತೆರೆದಿದೆ. ಅರ್ಜಿ ಸಲ್ಲಿಸಿ ವಿಚಾರಣೆ ಮಾಡುತ್ತೇವೆ.


