ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ ‘ಕೋಟಕ್ಕಲ್‌ ಆರ್ಯ ವೈದ್ಯ ಶಾಲೆಯಲ್ಲಿ ತಂಗಿದ್ದು ನನಗೆ ಹೊಸ ಚೈತನ್ಯದ ಅನುಭವವಾಗಿದೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಹಂಚಿಕೊಂಡ ಪ್ರೀತಿ ಮತ್ತು ಕಾಳಜಿಗಾಗಿ ಡಾ. ಪಿ.ಎಂ.ವಾರಿಯರ್‌ ಮತ್ತು ಇತರ ವೈದ್ಯ ಹಾಗೂ ಸಿಬ್ಬಂದಿಗಳಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.

ಮಲಪ್ಪುರಂ (ಜುಲೈ 30, 2023): ಮಂಡಿನೋವಿಗೆ ಕೇರಳದ ಕೋಟಕ್ಕಲ್‌ ಆರ್ಯುವೇದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಚಿಕಿತ್ಸೆ ಶನಿವಾರ ಮುಕ್ತಾಯವಾಗಿದ್ದು, ಅವರು ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ ‘ಕೋಟಕ್ಕಲ್‌ ಆರ್ಯ ವೈದ್ಯ ಶಾಲೆಯಲ್ಲಿ ತಂಗಿದ್ದು ನನಗೆ ಹೊಸ ಚೈತನ್ಯದ ಅನುಭವವಾಗಿದೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಹಂಚಿಕೊಂಡ ಪ್ರೀತಿ ಮತ್ತು ಕಾಳಜಿಗಾಗಿ ಡಾ. ಪಿ.ಎಂ.ವಾರಿಯರ್‌ ಮತ್ತು ಇತರ ವೈದ್ಯ ಹಾಗೂ ಸಿಬ್ಬಂದಿಗಳಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಡಿನೋವಿನ ಸಮಸ್ಯೆಗೆ ಒಳಗಾಗಿದ್ದು, ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರು ಜುಲೈ 30ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದರು. ಆದರೆ, ಒಂದು ದಿನ ಮೊದಲೇ ಅವರು ಡಿಸ್ಚಾರ್ಜ್‌ ಆಗಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಮಂಡಿನೋವಿನ ಸಮಸ್ಯೆಯಿಂದಾಗಿ ಜುಲೈ 21ರಂದು ರಾಹುಲ್‌ ಕೊಟ್ಟೈಕಲ್‌ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದರು. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ಶಾಸಕ ಎ.ಪಿ.ಅನಿಲ್‌ ಕುಮಾರ್‌ ರಾಹುಲ್‌ ಅವರನ್ನು ಸ್ವಾಗತಿಸಿದ್ದರು. ರಾಹುಲ್‌ ಅವರಿಗಾಗಿ ಆಸ್ಪತ್ರೆಯಲ್ಲಿ ಪಿಎಸ್‌ವಿ ನಾಟ್ಯ ಸಂಘದಿಂದ ಕಥಕ್ಕಳಿ ಆಧಾರದ ದಕ್ಷಯಜ್ಞ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲದೇ ಈ ವೇಳೆ ಅವರು ಮಲಯಾಳಂ ಕವಿ ವಾಸುದೇವನ್‌ ನಾಯರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತ್‌ ಜೋಡೋ ಯಾತ್ರೆಯ ಬಳಿಕ ರಾಹುಲ್‌ ಮಂಡಿನೋವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಅಧಿಕಾರಕ್ಕಾಗಿ ಸ್ತ್ರೀ ಸ್ವಾಭಿಮಾನದ ಜತೆ ಬಿಜೆಪಿ ಆಟ: ರಾಹುಲ್‌ ಟೀಕೆ; ಬ್ರಿಜ್‌ಭೂಷಣ್‌, ನಗ್ನ ಪರೇಡ್‌ ಘಟನೆ ಉಲ್ಲೇಖ
ನವದೆಹಲಿ: ಅಧಿಕಾರದ ದುರಾಸೆಯಿಂದ ‘ಮಹಿಳೆಯರ ಗೌರವ’ ಹಾಗೂ ದೇಶದ ಸ್ವಾಭಿಮಾನದ ಜತೆ ಬಿಜೆಪಿ ಆಟವಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಆರೋಪಿಸಿದ್ದರು. ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಮಾಡಿರುವ ಅವರು, ಇತ್ತೀಚೆಗೆ ವರದಿಯಾದ ಒಲಿಂಪಿಕ್‌ ಸಮಿತಿ ಮುಖ್ಯಸ್ಥ ಬ್ರಿಜ್‌ಭೂಷಣ್‌ ಪ್ರಕರಣ, ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಸೇರಿದಂತೆ ಹಲವು ಲೈಂಗಿಕ ದೌರ್ಜನ್ಯಗಳ ಘಟನೆಗಳ ವಿಡಿಯೋ ಮಾಂಟೇಜ್‌ ಅನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಗಾಂಧಿಗೆ ಮಂಡಿನೋವು: ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ

‘ಮಹಿಳೆಯರನ್ನು ಗೌರವಿಸದ ದೇಶವು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅಧಿಕಾರದ ದುರಾಸೆಯಿಂದ ಬಿಜೆಪಿಯು ಮಹಿಳೆಯರ ಗೌರವ ಮತ್ತು ದೇಶದ ಸ್ವಾಭಿಮಾನ - ಎರಡರಲ್ಲೂ ಆಟವಾಡುತ್ತಿದೆ’ ಎಂದು ರಾಹುಲ್‌ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರ ದೋಷಿಗಳ ಬಿಡುಗಡೆ ಬಗ್ಗೆ ಕೂಡ ವಿಡಿಯೋದಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ರೈತರನ್ನು ನಾವು ಅರ್ಥ ಮಾಡಿಕೊಂಡ್ರೆ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್‌ ಗಾಂಧಿ