Asianet Suvarna News Asianet Suvarna News

ಏಷ್ಯಾನೆಟ್ ಪತ್ರಕರ್ತರ ಮೇಲೆ ಕೇರಳ ಸರ್ಕಾರ ಕೇಸ್‌: ತುರ್ತು ಪರಿಸ್ಥಿತಿಗೆ ಹೋಲಿಸಿದ ಬಿಜೆಪಿ; ಮಾಧ್ಯಮಕ್ಕೆ ಬೆಂಬಲ

ಏಷ್ಯಾನೆಟ್ ನ್ಯೂಸ್‌ನೊಂದಿಗಿನ 2 ವರ್ಷಗಳ ಬಹಿಷ್ಕಾರವನ್ನು ಕೊನೆಗೊಳಿಸಲು ಬಿಜೆಪಿ ಕೆರಳ ಘಟಕ ನಿರ್ಧರಿಸಿದೆ. ಸಿಪಿಎಂನ ಈ ಫ್ಯಾಸಿಸ್ಟ್ ಧೋರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಮದಿರುವ ಬಿಜೆಪಿ ಏಷ್ಯಾನೆಟ್‌ ನ್ಯೂಸ್‌ ಪತ್ರಕರ್ತರ ಪರ ನಿಂತಿದೆ. 

kerala bjp ends 2 years non cooperation with asianet news ash
Author
First Published Jul 10, 2023, 12:39 PM IST

ತಿರುವನಂತಪುರಂ (ಜುಲೈ 10, 2023): ಬಿಜೆಪಿಯ ಕೇರಳ ಘಟಕವು ಏಷ್ಯಾನೆಟ್ ನ್ಯೂಸ್‌ನೊಂದಿಗಿನ 2 ವರ್ಷಗಳ ಬಹಿಷ್ಕಾರವನ್ನು ಕೊನೆಗೊಳಿಸಲು ನಿರ್ಧರಿಸಿದೆ. ಎಲ್‌ಡಿಎಫ್ ಸರ್ಕಾರ ಮಾಧ್ಯಮಗಳನ್ನು ಹತ್ತಿಕ್ಕುತ್ತಿರುವ ರೀತಿಯನ್ನು, ಅದರಲ್ಲೂ ಏಷ್ಯಾನೆಟ್‌ ನ್ಯೂಸ್‌ ಮೇಲೆ ನಡೆದ ಪೊಲೀಸ್‌ ದಾಳಿ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಹೊತ್ತಿನಲ್ಲಿ ಬಿಜೆಪಿಯು ಮಾಧ್ಯಮಗಳ ಜೊತೆಗೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಿಲ್ಲುವ ಹೊಣೆಗಾರಿಕೆಯನ್ನು ಹೊಂದಿದೆ. ಇವೆರಡೂ ಕೇರಳ ರಾಜ್ಯ ಸರ್ಕಾರದ ಆಡಳಿತದ ಕೆಂಗಣ್ಣಿಗೆ ಗುರಿಯಾಗುತ್ತಿವೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ‘’ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹೆಸರಾದ ಕೇರಳದಲ್ಲಿ ಏಷ್ಯಾನೆಟ್ ನ್ಯೂಸ್ ಮತ್ತು ಅದರ ಪತ್ರಕರ್ತರ ವಿರುದ್ಧ ಸಿಪಿಎಂನ ಈ ಫ್ಯಾಸಿಸ್ಟ್ ಧೋರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಸನ್ನಿವೇಶವು ತುರ್ತು ದಿನಗಳನ್ನು ನೆನಪಿಸುತ್ತದೆ’’ ಎಂದು ಕಿಡಿ ಕಾರಿದ್ದಾರೆ.

ಸರ್ಕಾರದ ರಕ್ಷಣೆಯಲ್ಲಿಯೇ ನ್ಯೂಸ್‌ ಚಾನೆಲ್ ಮೇಲೆ ದಾಳಿ: ಪ್ರತಿಪಕ್ಷ

ಅಲ್ಲದೆ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ನಾಶಪಡಿಸಲು ಮತ್ತು ಮಾಧ್ಯಮದವರನ್ನು ಅಪಖ್ಯಾತಿ ಮಾಡಲು ಪ್ರಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ಹತ್ತಿಕ್ಕುವ ಕಮ್ಯುನಿಸ್ಟ್ ಸರ್ಕಾರದ ನಡೆಗಳ ವಿರುದ್ಧ ಬಿಜೆಪಿ ಪ್ರಬಲವಾದ ಸಾರ್ವಜನಿಕ ಪ್ರತಿಭಟನೆ ನಡೆಸಲಿದೆ’’ ಎಂದೂ ಕೇರಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.  

ಅಲ್ಲದೆ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ನಾಶಪಡಿಸಲು ಮತ್ತು ಮಾಧ್ಯಮದವರನ್ನು ಅಪಖ್ಯಾತಿ ಮಾಡಲು ಪ್ರಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ಹತ್ತಿಕ್ಕುವ ಕಮ್ಯುನಿಸ್ಟ್ ಸರ್ಕಾರದ ನಡೆಗಳ ವಿರುದ್ಧ ಬಿಜೆಪಿ ಪ್ರಬಲವಾದ ಸಾರ್ವಜನಿಕ ಪ್ರತಿಭಟನೆ ನಡೆಸಲಿದೆ’’ ಎಂದೂ ಕೇರಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.  

ಏಷ್ಯಾನೆಟ್‌ನ್ಯೂಸ್‌ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ

ಪ್ರತಿಪಕ್ಷಗಳು ಮತ್ತು ಮಾಧ್ಯಮ ಸಮುದಾಯವು ಪಿಣರಾಯಿ ವಿಜಯನ್ ಸರ್ಕಾರವನ್ನು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಟೀಕಿಸುತ್ತಿದೆ. ಮಾಜಿ ಮಾಹಿತಿ ಮತ್ತು ಪ್ರಸಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇತ್ತೀಚೆಗೆ ಕೇರಳದ ಕೆಲವು ಮಾಧ್ಯಮಗಳ ವಿರುದ್ಧ ಪೊಲೀಸ್ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೂ, ರಾಜ್ಯ ಸರ್ಕಾರವು ತನ್ನ ತಪ್ಪನ್ನು ಬಹಿರಂಗಪಡಿಸಲು ಮಾಧ್ಯಮಗಳನ್ನು ಹೆದರಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಮಾಧ್ಯಮ ಸಿಬ್ಬಂದಿ ವಿರುದ್ಧ ಇತ್ತೀಚಿನ ಪೊಲೀಸ್ ಕ್ರಮಗಳಂತಹ ನಿದರ್ಶನಗಳನ್ನು ಉಲ್ಲೇಖಿಸಿದ ಬಿಜೆಪಿಯ ಹಿರಿಯ ನಾಯಕ, ಈ ಘಟನೆಗಳು ದಕ್ಷಿಣದ ರಾಜ್ಯದಲ್ಲಿ "ಮಾಧ್ಯಮಗಳ ವಿರುದ್ಧದ ಮೊದಲ ರೀತಿಯ ಭಯೋತ್ಪಾದನೆ" ಎಂದು ಹೇಳಿದ್ದಾರೆ. ಮಾಧ್ಯಮಗಳು ಮತ್ತು ಪತ್ರಕರ್ತರ ವಿರುದ್ಧ ಎಡ ಸರ್ಕಾರದ ಕ್ರಮಗಳು ಪಿಣರಾಯಿ ವಿಜಯನ್ ನೇತೃತ್ವದ ಆಡಳಿತದ ದುಷ್ಕೃತ್ಯವನ್ನು ಬಹಿರಂಗಪಡಿಸುವವರ ವಿರುದ್ಧ "ರಾಜಕೀಯ ಸೇಡಿನ" ಸ್ಪಷ್ಟ ಪ್ರಕರಣವನ್ನು ಪ್ರದರ್ಶಿಸುತ್ತವೆ ಎಂದೂ ಅವರು ಪ್ರತಿಪಾದಿಸಿದರು.

ಇದನ್ನು ಓದಿ: ಎಡರಂಗ ಬೆಂಬಲಿತ ಮಾಜಿ ಜಡ್ಜ್‌ನಿಂದ ಏಷ್ಯಾನೆಟ್ ಎಡಿಟರ್ ವಿರುದ್ಧ ಅಶ್ಲೀಲ ಬರಹ: ನೆಟ್ಟಿಗರಿಂದ ತೀವ್ರ ಖಂಡನೆ

ಈ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ತಿರುವನಂತಪುರಂ ಪ್ರೆಸ್ ಕ್ಲಬ್, ಪತ್ರಿಕಾ ಮಾಧ್ಯಮವನ್ನು ದುರ್ಬಲಗೊಳಿಸುವ ತನ್ನ ಪ್ರಯತ್ನಗಳನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರೆ ನೀಡಿದ್ದು, ಫೋರ್ತ್ ಎಸ್ಟೇಟ್ ಅನ್ನು ನಾಶಪಡಿಸುವುದನ್ನು ತಡೆಯಬೇಕು ಎಂದು ಒತ್ತಿ ಹೇಳಿದರು. 

Follow Us:
Download App:
  • android
  • ios