Asianet Suvarna News Asianet Suvarna News

ಕೇರಳ ಪ್ರೊಫೆಸರ್‌ ಬಲಕೈ ಕತ್ತರಿಸಿದ್ದ 6 ಪಿಎಫ್‌ಐ ಕಾರ‍್ಯಕರ್ತರು ದೋಷಿ: ಇಂದು ಶಿಕ್ಷೆ ಪ್ರಕಟ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, 13 ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಆರು ಕಾರ್ಯಕರ್ತರನ್ನು ದೋಷಿಗಳು ಎಂದು ಸ್ಥಳೀಯ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇಂದು ಪ್ರಕಟಿಸಲಿದೆ.  

Kerala 6 PFI activists convicted of cutting off professors hand Verdict after 13 years of the incident The court will announce the quantum of punishment today akb
Author
First Published Jul 13, 2023, 9:44 AM IST

ಕೊಚ್ಚಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, 13 ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಆರು ಕಾರ್ಯಕರ್ತರನ್ನು ದೋಷಿಗಳು ಎಂದು ಸ್ಥಳೀಯ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇಂದು ಪ್ರಕಟಿಸಲಿದೆ.  ಪ್ರಕರಣದ ಕುರಿತು ಮೊದಲು ವಿಚಾರಣೆ ನಡೆಸಿದ ನ್ಯಾಯಾಲಯ 10 ಜನರನ್ನು ದೋಷಿ ಎಂದು ಪ್ರಕಟಿಸಿತ್ತು. ಆದರೆ ವಿಶೇಷ ಎನ್‌ಐಎ ನ್ಯಾಯಾಲಯ ಸಾಜಿಲ್‌, ನಾಸರ್‌ ಮತ್ತು ನಜೀಬ್‌ರನ್ನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ದೋಷಿಗಳು ಎಂದು ಘೋಷಿಸಿದ್ದಾರೆ. ಇವರೊಂದಿಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ನೌಷದ್‌, ಪಿ.ಪಿ.ಮೋಯಿದೀನ್‌ ಮತ್ತು ಆಯುಬ್‌ನ್ನು ದೋಷಿಗಳು ಎಂದು ಘೋಷಿಸಿದ್ದಾರೆ. ಉಳಿದ ನಾಲ್ವರನ್ನು ಖುಲಾಸೆಗೊಳಿಸಲಾಗಿದೆ.

ಏನಿದು ಘಟನೆ?

2010ರಲ್ಲಿ ಜೋಸೆಫ್‌ ತಾವು ಪಾಠ ಮಾಡುತ್ತಿದ್ದ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಿಗೆ ಆಂತರಿಕ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದರು. ಅದರಲ್ಲಿ ಲೇಖಕ ಪಿ.ಟಿ.ಕುಂಜು ಮೊಹಮ್ಮದ್‌ ಅವರನ್ನು ಬರೀ ಮೊಹಮ್ಮದ್‌ ಎಂದು ಬಣ್ಣಿಸಿದ್ದರು. ಇದು ಉದ್ದೇಶಪೂರ್ವಕ ಕೃತ್ಯ. ಇದು ಇಸ್ಲಾಂ ಧರ್ಮ ನಿಂದನೆ ಎಂದು ಮತೀಯವಾದಿಗಳು ಕಿಡಿಕಾರಿದ್ದರು. ಇದೇ ಕಾರಣಕ್ಕಾಗಿ 2010ರ ಜು.4ರಂದು ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಕುಟುಂಬದೊಂದಿಗೆ ಹಿಂದಿರುಗುತ್ತಿದ್ದ ನ್ಯೂಮನ್‌ ಕಾಲೇಜಿನ ಪ್ರೊ.ಟಿಜೆ. ಜೋಸೆಫ್‌ ಅವರನ್ನು ಕಾರಿನಿಂದ ಹೊರಗೆಳೆದ ದುಷ್ಕರ್ಮಿಗಳು ಅವರ ಬಲಗೈಯನ್ನು ಕತ್ತರಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸಾವದ್‌ ಇನ್ನೂ ಸಹ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 54 ಮಂದಿಯನ್ನು ಆರೋಪಿಗಳೆಂದು ಘೋಷಿಸಲಾಗಿದ್ದು, ಚಾರ್ಜ್‌ಶೀಟ್‌ನಲ್ಲಿ 37 ಮಂದಿಯನ್ನು ಹೆಸರಿಸಲಾಗಿತ್ತು.

ಬರೋಬ್ಬರಿ 17 ವರ್ಷಗಳ ಬಳಿಕ ಮಹಿಳೆಯ ಕೊಲೆ ಪ್ರಕರಣದ ಹಂತಕನ ಪತ್ತೆ ಹಚ್ಚಿದ ಪೊಲೀಸರು!

ಘಟನೆ ಬಗ್ಗೆ ನಂತರ ಪ್ರತಿಕ್ರಿಯಿಸಿದ ಟಿ.ಜೆ.ಜೋಸೆಫ್‌ (TJ Joseph),  ನನ್ನ ಕೈ ಕತ್ತರಿಸಿದವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ಈ ಘಟನೆಯಿಂದ ನಾನು ನನ್ನ ಹೆಂಡತಿ ಸೇರಿದಂತೆ ಬಹಳಷ್ಟನ್ನು ಕಳೆದುಕೊಂಡೆ. ಆದರೆ ಅದು ನನ್ನ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಲಿಲ್ಲ. ನನ್ನ ಮೇಲೆ ದಾಳಿ ಮಾಡಿದವರು ಕೇವಲ ಆಯುಧಗಳಾಗಿದ್ದರು ಮತ್ತು ಅವರ ನಂಬಿಕೆಗಳ ಬಲಿಪಶುಗಳಾಗಿದ್ದರು. ಯಾವುದೇ ಯುದ್ಧದಲ್ಲಿ ಗೆದ್ದವರಿಗೂ ನನ್ನ ಹಾಗೆ ನಷ್ಟವಾಗುತ್ತದೆ. ಆದರೂ ಹೋರಾಡುವುದನ್ನು ಬಿಡಬಾರದು  ಎಂದಿದ್ದಾರೆ. 

ಏಷ್ಯಾನೆಟ್ ಪತ್ರಕರ್ತರ ಮೇಲೆ ಕೇರಳ ಸರ್ಕಾರ ಕೇಸ್‌: ತುರ್ತು ಪರಿಸ್ಥಿತಿಗೆ ಹೋಲಿಸಿದ ಬಿಜೆಪಿ; ಮಾಧ್ಯಮಕ್ಕೆ ಬೆಂಬಲ

Follow Us:
Download App:
  • android
  • ios