ಬರೋಬ್ಬರಿ 17 ವರ್ಷಗಳ ಬಳಿಕ ಮಹಿಳೆಯ ಕೊಲೆ ಪ್ರಕರಣದ ಹಂತಕನ ಪತ್ತೆ ಹಚ್ಚಿದ ಪೊಲೀಸರು!
ಆರೋಪಿ ಪತ್ತೆಹಚ್ಚಲಾಗದೆ ಕೇಸನ್ನೇ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ, ಸ್ಥಳೀಯ ಪೊಲೀಸರು ಕೇಸ್ ಸರಿಯಾಗಿ ನಡೆಸುತ್ತಿಲ್ಲವೆಂದು ಸ್ವತ: ಆರೋಪಿಯೇ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಆತನೇ ಹಂತಕ ಎಂದು ತಿಳಿದುಬಂದಿರುವುದು ಅಚ್ಚರಿ.
ತಿರುವನಂತಪುರಂ (ಜುಲೈ 12, 2023): ಕೇರಳದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಬರೋಬ್ಬರಿ 17 ವರ್ಷ ತೆಗೆದುಕೊಂಡಿದ್ದಾರೆ. ಅಲ್ಲದೆ, ನಿಜವಾದ ಹಂತಕ ಯಾರೆಂಬುದನ್ನು ತಿಳಿದು ಬಹುತೇಕರು ಅಚ್ಚರಿ ಪಟ್ಟಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾ ಬಳಿಯ ಪುಲ್ಲಾಡ್‌ನಲ್ಲಿ 50 ವರ್ಷದ ಮಹಿಳೆಯ ಹತ್ಯೆಯ ಆರೋಪಿಯನ್ನು ಅಪರಾಧ ವಿಭಾಗವು ಹಾಜರುಪಡಿಸಿದೆ. ಮತ್ತು, ಆ ಆರೋಪಿ ಬೇರೆ ಯಾರೂ ಅಲ್ಲ, ಮೃತ ಮಹಿಳೆಯ ಪತಿ! ಇವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರೂ, ಆರೋಪ ಕೋರ್ಟ್‌ನಲ್ಲಿ ಸಾಬೀತಾಗುವವರೆಗೆ ಇವರು ಆರೋಪಿಯೇ.
ಆರೋಪಿ ಪತ್ತೆಹಚ್ಚಲಾಗದೆ ಕೇಸನ್ನೇ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ, ಪ್ರಕರಣವನ್ನು ಕ್ರೈಂ ಬ್ರ್ಯಾಂಚ್ ರೀ ಓಪನ್ ಮಾಡಿದ್ದು, ರಮಾದೇವಿ (50) ಅವರನ್ನು ಆಕೆಯ ಪತಿ ಜನಾರ್ದನನ್ ನಾಯರ್ ಕೊಲೆ ಮಾಡಿದ್ದಾರೆ ಎಂದು ಕ್ರೈಂ ಬ್ರ್ಯಾಂಚ್ ಪೊಲೀಸರು ಹೇಳಿದ್ದಾರೆ. ಸುಮಾರು 13 ವರ್ಷಗಳ ಕಾಲ ನಿಗೂಢವಾಗಿ ನೀರಿನಲ್ಲಿ ಮುಳುಗಿದ್ದ ವಿಧಿವಿಜ್ಞಾನದ ಸಂಶೋಧನೆಗಳು ಜನಾರ್ದನನ್ ನಾಯರ್ ಅವರ ಕಡೆಗೇ ಸೂಚಿಸುತ್ತವೆ ಎಂದು ತನಿಖಾಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಇದನ್ನು ಓದಿ: ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್ ಪೀಸ್ ಮಾಡಿ ಫ್ಲೈಓವರ್ ಬಳಿ ಎಸೆದ ಪಾಪಿ!
ಈ ಹಿನ್ನೆಲೆ ಕ್ರೈಂ ಬ್ರ್ಯಾಂಚ್ ಡಿಟೆಕ್ಟೀವ್ ಇನ್ಸ್‌ಪೆಕ್ಟರ್ ಸುನೀಲ್ ರಾಜ್ ನೇತೃತ್ವದ ತಂಡ ಆತನನ್ನು ಬಂಧಿಸಿದೆ. ವರದಿಗಳ ಪ್ರಕಾರ, ನಾಯರ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. 2006ರ ಮೇ 26ರಂದು ರಮಾದೇವಿ ಅವರು ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಕುತ್ತಿಗೆಯ ಮೇಲೆ ಗಾಯವಾಗಿತ್ತು. ಹಾಗೂ, ಮಹಿಳೆಯ ಮೃತದೇಹದಲ್ಲಿ ಒಂದು ಕೈಯಲ್ಲಿ 36 ಮತ್ತು ಇನ್ನೊಂದು ಕೈಯಲ್ಲಿ 4 ಕೂದಲುಗಳು ಸೇರಿ 40 ಕೂದಲುಗಳನ್ನು ಪೋಲೀಸರು ಪತ್ತೆ ಮಾಡಿದ್ದರು.
ಕತ್ತಿಯನ್ನು ಹೋಲುವ ಹರಿತವಾದ ವಸ್ತುವನ್ನು ಕೊಲೆಗೆ ಬಳಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ಈ ಮಾದರಿಗಳ ವರದಿ ಹೊರಬರಲು ನಾಲ್ಕು ವರ್ಷಗಳು ಬೇಕಾಯಿತು. ಆದರೆ ಅಷ್ಟರಲ್ಲಿ ಪ್ರಕರಣ ತಣ್ಣಗಾಗಿತ್ತು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್
ಆರಂಭದಲ್ಲಿ, ಸಮೀಪದಲ್ಲೇ ನೆಲೆಸಿರುವ ತಮಿಳುನಾಡಿನ ಅತಿಥಿ ಕೆಲಸಗಾರನನ್ನು ಶಂಕಿತನೆಂದು ತಿಳಿಯಲಾಗಿತ್ತು. ಪೊಲೀಸರು ಸ್ಥಳೀಯ ಕಟ್ಟಡ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದಾಗ, ರಮಾದೇವಿ ಹತ್ಯೆಯಾದ ಒಂದು ದಿನದ ನಂತರ ಆತ ನಾಪತ್ತೆಯಾಗಿದ್ದ ಎಂದು ತಿಳಿದುಬಂದಿತ್ತು.
ಈ ಹಿನ್ನೆಲೆ ತನಿಖೆ ಆ ದಾರಿಯಲ್ಲಿ ಸಾಗಿದೆ, ಆದರೆ ಶಂಕಿತ ವ್ಯಕ್ತಿ ಮತ್ತು ಅವನೊಂದಿಗೆ ಉಳಿದುಕೊಂಡಿದ್ದ ಮಹಿಳೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹಾಗೆ, ಜನಾರ್ದನನ್ ನಾಯರ್ ಅವರ ಸಹೋದರ ಮತ್ತೊಂದು ಕೊಲೆ ಪ್ರಕರಣದಲ್ಲಿ ಶಂಕಿತನಾಗಿದ್ದು, ಪೊಲೀಸರು ಆ ದಿಕ್ಕಿನಲ್ಲಿ ಕೂಡ ನೋಡಿದ್ದರು ಎಂದೂ ವರದಿಯಾಗಿದೆ.
ಇದನ್ನೂ ಓದಿ: ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್ ಮಾಡಿದ ಕಾಲಿವುಡ್ ನಟ ಅರೆಸ್ಟ್; ನೆಟ್ಟಿಗರ ವಿರೋಧ
ಕುತೂಹಲಕಾರಿಯಾಗಿ, ಸ್ಥಳೀಯ ಪೊಲೀಸರು ನಡೆಸಿದ ತನಿಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಪತಿ ಜನಾರ್ದನನ್ ನಾಯರ್ ಅವರೇ ಕ್ರೈಂ ಬ್ರಾಂಚ್ ತನಿಖೆಗೆ ಒತ್ತಾಯಿಸಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಹಿನ್ನೆಲೆ ಕೊಲೆ ಪ್ರಕರಣದ ಅಚ್ಚರಿಯ ತಿರುವುಗಳ ಬಗ್ಗೆ ತನಿಖೆಯಾಗಬೇಕೆಂದು ಪ್ರದೇಶದ ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮುದ್ದು ಕಂದಮ್ಮನ ಮೇಲೆ ಕಾರು ಹತ್ತಿಸಿ ಮಗಳ ಸಾವಿಗೆ ಕಾರಣವಾದ ತಾಯಿ: ಜರ್ಝರಿತವಾದ ಕುಟುಂಬ