ಜೈಲಿನಿಂದ ಕೇಜ್ರಿವಾಲ್ ಸಂದೇಶದ ಜೊತೆಗೆ ಮುಂದಿನ ಸಿಎಂ ಸೂಚನೆ ನೀಡಿದ್ರಾ ಪತ್ನಿ ಸುನೀತಾ?

ದೆಹಲಿ ಅಬಕಾರಿ ಹಗರಣದಲ್ಲಿ ಜೈಲು ಸೇರಿರುವ ಅರವಿಂದ್ ಕೇಜ್ರಿವಾಲ್ ಇದೀಗ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ. ಬಿಜೆಪಿಯವರನ್ನು ದ್ವೇಷಿಸಬೇಡಿ, ಅವರೆಲ್ಲಾ ನಮ್ಮ ಸಹೋದರ ಸಹೋದರಿಯರು ಎಂದಿದ್ದಾರೆ. ಈ ಸಂದೇಶವನ್ನು ಕೇಜ್ರಿವಾಲ್ ಪತ್ನಿ ವಿಡಿಯೋ ಮೂಲಕ ನೀಡಿದ್ದಾರೆ. ಇದೇ ವೇಳೆ ಮುಂದಿನ ಸಿಎಂ ಸೂಚನೆ ನೀಡಿದ್ರಾ?
 

Kejriwal Wife Sunita Reads out Delhi CM Arvind first Message from Jail ask dont hate BJP ckm

ನವದೆಹಲಿ(ಮಾ.23) ದೆಹಲಿ ಅಬಕಾರಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಆಪ್ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. 6 ದಿನಗಳ ಕಾಲ ಕೋರ್ಟ್ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿ ನೀಡಿದೆ. ಇದರ ಬೆನ್ನಲ್ಲೇ ಕೇಜ್ರಿವಾಲ್ ಜೈಲಿನಿಂದ ಮಹತ್ವದ ಸಂದೇಶ ನೀಡಿದ್ದಾರೆ. ಬಿಜೆಪಿಯವರನ್ನು ದ್ವೇಷಿಸಬೇಡಿ, ಅವರು ನಮ್ಮ ಸಹೋದರ ಸಹೋದರಿಯರು ಎಂದು ಆಪ್ ಕಾರ್ಯಕರ್ತರಿಗೆ ಸಂದೇಶ ನೀಡಿದ್ದರೆ. ಈ ಸಂದೇಶವನ್ನು ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಈ ಸಂದೇಶದ ಜೊತೆಗೆ ಸುನಿತಾ ದಿಲ್ಲಿ ಜನತೆಗೆ ಮುಂದಿನ ಸಿಎಂ ಸಂದೇಶ ನೀಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.

ನನ್ನ ಪ್ರೀತಿಯ ನಾಗರೀಕರೇ, ನಿನ್ನೆ ನನ್ನನ್ನು ಬಂಧಿಸಲಾಗಿದೆ. ನಾನು ಜೈಲಿನಲ್ಲಿದ್ದರೂ, ಹೊರಗಡೆ ಇದ್ದರೂ ದೇಶ ಸೇವೆಗೆ ನನ್ನ ಜೀವಮ ಮುಡಿಪಾಗಿಟ್ಟಿದ್ದೇನೆ. ದೆಹಲಿಯಲ್ಲಿರುವ ನನ್ನ ತಾಯಿಂದರಿಗೆ, ಸಹೋದರ ಸಹೋದರಿಯರೇ ನಿಮ್ಮ ಮಗ ಜೈಲು ಸೇರಿದ ನೋವು ನಿಮಗಾಗಿದೆ. ನಿಮ್ಮ ಮಗ, ಸಹೋದರ ಮಾಡಿದ ಎಲ್ಲಾ ಭರವಸೆಗಳು ಏನಾಗಲಿದೆ ಅನ್ನೋ ಆತಂಕ ಬೇಡ. ಎಲ್ಲಾ ಭರವಸೆಗಳನ್ನೂ ಈಡೇರಿಸುತ್ತೇನೆ. ಆಪ್ ಕಾರ್ಯಕರ್ತರಿಗೆ ದೇಶ ಸೇವೆ  ಮುಂದುವರಿಸಿದೆ. ಬಿಜೆಪಿಯವರನ್ನು ದ್ವೇಷಿಸಲು ಹೋಗಬೇಡಿ. ಅವರೆಲ್ಲಾ ನಿಮ್ಮ ಸಹೋಹದರ ಸಹೋದರಿಯರು. ಇಂತಿ ನಿಮ್ಮ ಪ್ರೀತಿಯ ಅರವಿಂದ್ ಕೇಜ್ರಿವಾಲ್ ಅನ್ನೋ ಸಂದೇಶವನ್ನು ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಕಳುಹಿಸಿದ್ದಾರೆ.

 

ಸ್ವಯಂ ಕೃತ್ಯವೇ ಕೇಜ್ರಿವಾಲ್‌ಗೆ ಮುಳುವು, ದೆಹಲಿ ಸಿಎಂ ಬಂಧನ ಕುರಿತು ಅಣ್ಣ ಹಜಾರೆ ಪ್ರತಿಕ್ರಿಯೆ!

ಈ ಸಂದೇಶವನ್ನು ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆದರೆ ಈ ಸಂದೇಶವನ್ನು ಸನೀತಾ ದೆಹಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತು ವಿಡಿಯೋ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಮೂಲಕ ಅರವಿಂದ್ ಕೇಜ್ರಿವಾಲ್ ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಪತ್ನಿ ಸುನೀತಾಗೆ ಜವಾಬ್ದಾರಿ ನೀಡಿ ಅಧಿಕಾರ ಕುಟುಂಬದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಪತ್ನಿ ರಾಜಕೀಯವಾಗಿ ಸಕ್ರಿಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

 

 

ಮತ್ತೊಂದೆಡೆ ಇದು ಆಪ್ ಪಾರ್ಟಿ ಆಫೀಸ್ ಅನ್ನೋ ಸಮರ್ಥನೆ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಅರವಿಂದ್ ಕೇಜ್ರಿವಾಲ್ ಸಂದೇಶವನ್ನು ಜನರಿಗೆ ತಲುಪಿಸುವ ಜೊತೆಗೆ ಕೇಜ್ರಿವಾಲ್ ತಮ್ಮ ಪತ್ನಿ ಮುಂದಿನ ಸಿಎಂ ಅನ್ನೋ ಪರೋಕ್ಷ ಸಂದೇಶ ರವಾನಿಸಿದ್ರಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಕೇಜ್ರಿವಾಲ್ ಬಂಧನ ಬಳಿಕ ಸಚಿವ ಆಪ್ ಸಚಿವ ಸೌರಬ್ ಭಾರದ್ವಾಜ್, ಅತೀಶ್ ಪೊಲೀಸ್ ವಶಕ್ಕೆ!
 

Latest Videos
Follow Us:
Download App:
  • android
  • ios