ಕೇಜ್ರಿವಾಲ್ ಬಂಧನ ಬಳಿಕ ಸಚಿವ ಆಪ್ ಸಚಿವ ಸೌರಬ್ ಭಾರದ್ವಾಜ್, ಅತೀಶ್ ಪೊಲೀಸ್ ವಶಕ್ಕೆ!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಆಮ್ ಆದ್ಮಿ ಪಾರ್ಟಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಇಡಿ ಹಾಗೂ ಕೇಂದ್ರ ಸರ್ಕಾರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಆಪ್ ಸಚಿವ ಸೌರಬ್ ಭಾರದ್ವಾಜ್ ಹಾಗೂ ಅತಿಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 

Protest against Arvind Kejriwal Arrest Police Detained AAP Minister Saurabh Bharadwaj Atishi ckm

ದೆಹಲಿ(ಮಾ.22) ರಾಜಧಾನಿ ದಹೆಲಯಲ್ಲಿ ನಡೆದಿರುವ ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧಿಸಿದೆ. ಈ ಬಂಧನ ಬಳಿಕ ರಾಜಕೀಯ ವಲಯದಲ್ಲಿ ಕೋಲಾಹಲ ಎದ್ದಿದೆ. ಅರವಿಂದ್ ಕೇಜ್ರಿವಾಲ್ ಬೆಂಬಲಕ್ಕೆ ವಿಪಕ್ಷಗಳು ನಿಂತಿವೆ. ಇತ್ತ ಆಪ್ ಸಚಿವರು, ನಾಯಕರು, ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಹೀಗೆ ಕೇಜ್ರಿವಾಲ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ಸಚಿವ ಸೌರಬ್ ಭಾರದ್ವಾಜ್ ಹಾಗೂ ಅತಿಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ಇತರ ಕೆಲ ನಾಯಕರನ್ನೂ ವಶಕ್ಕೆ ಪಡೆದಿದ್ದಾರೆ.

ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯಲ್ಲಿ ಆಪ್ ಪಕ್ಷ ಭಾರಿ ಪ್ರತಿಬಟನೆ ನಡೆಸುತ್ತಿದೆ. ಆಪ್ ಸಚಿವರು, ನಾಯಕರು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಪೊಲೀಸರು ಪ್ರತಿಭಟನಾ ನಿರತ ಸಚಿವ ಸೌರಬ್ ಭಾರದ್ವಾಜ್ ಹಾಗೂ ಸಚಿವೆ ಅತಿಶಿಯನ್ನು ವಶಕ್ಕೆ ಪಡೆದಿದ್ದಾರೆ.ಇತ್ತ ಆಪ್ ಪ್ರತಿಭಟನೆ ಮುಂದುವರಿದಿದೆ.

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌

ಕೇಜ್ರಿವಾಲ್ ಬಂಧನ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ತ್ವರಿತ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್ ನ್ಯಾಮೂರ್ಚಿ ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ ಮಾಡುತ್ತಿದೆ. ಇತ್ತ ಸುಪ್ರೀಂ ಕೋರ್ಟ್‌ಗೆ ಇಡಿ ಅಧಿಕಾರಿಗಳು ಕೆವಿಯೆಟ್ ಸಲ್ಲಿಸಿದ್ದಾರೆ. ಕೇಜ್ರಿವಾಲ್ ವಿಚಾರಣೆ ನಡೆಸುವಾಗ ನಮ್ಮ ವಾದ ಆಲಿಸಬೇಕು ಎಂದು ಇಡಿ ಕೋರ್ಟ್‌ಗೆ ಕೆವಿಯೇಟ್ ಸಲ್ಲಿಸಿದೆ.


 
ಲೋಕಸಭಾ ಚುನಾವಣೆ ಹೊತ್ತಲ್ಲಿ ಆಪ್ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ರಾಜಕೀಯ ಷಡ್ಯಂತ್ರ ಎಂದು ಸಚಿವೆ ಅತಿಶಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನು ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿದೆ. ಇದು ಬಿಜೆಪಿಯ ರಾಜಕೀಯ. ಲೋಕಸಭಾ ಚುನಾವಣೆಯಲ್ಲಿ ಆಪ್ ಪ್ರಾಬಲ್ಯವನ್ನು ಕುಗ್ಗಿಸಲು ಬಿಜೆಪಿ ಮಾಡಿದ ರಾಜಕೀಯ ಷಡ್ಯಂತ್ರ ಎಂದು ಅತಿಶಿ ಹೇಳಿದ್ದಾರೆ.

Kejriwal story: ಭ್ರಷ್ಟಾಚಾರ ವಿರೋಧಿ ಹೋರಾಟದ ಪ್ರಮುಖ ನಾಯಕ ಈಗ ಭ್ರಷ್ಟಾಚಾರದ ಕೇಸ್‌ನಲ್ಲೇ ಜೈಲು ಹಕ್ಕಿ

ದೆಹಲಿ ಅಬಕಾರಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್‌ಗೆ ಸತತ ಸಮನ್ಸ್ ನೀಡಿದ್ದರೂ ಗೈರಾಗಿದ್ದರು. ಬರೋಬ್ಬರಿ 9 ಸಮನ್ಸ್ ಪಡೆದಿರೂ ವಿಚಾರಣೆಗೆ ಹಾಜರಾಗದ ಅರವಿಂದ್ ಕೇಜ್ರಿವಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಕೇಜ್ರಿವಾಲ್ ಬಂಧಿಸಿತ್ತು.
 

Latest Videos
Follow Us:
Download App:
  • android
  • ios