ಸ್ವಯಂ ಕೃತ್ಯವೇ ಕೇಜ್ರಿವಾಲ್‌ಗೆ ಮುಳುವು, ದೆಹಲಿ ಸಿಎಂ ಬಂಧನ ಕುರಿತು ಅಣ್ಣ ಹಜಾರೆ ಪ್ರತಿಕ್ರಿಯೆ!
ನನ್ನ ಜೊತೆ ಮದ್ಯದ ವಿರುದ್ಧ ಹೋರಾಟ ಮಾಡಿದ ಅರವಿಂದ್ ಕೇಜ್ರಿವಾಲ್ ಇದೀಗ ಮದ್ಯ ನೀತಿಯಿಂದಲೇ ಬಂಧನವಾಗಿದ್ದಾರೆ. ಸ್ವಯಂಕೃತ ತಪ್ಪುಗಳ ಕಾರಣದಿಂದ ಕೇಜ್ರಿವಾಲ್ ಬಂಧನವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ನವದೆಹಲಿ(ಮಾ.22) ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿದೆ. ಆಮ್ ಆದ್ಮಿ ಪಾರ್ಟಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಸೇರಿದತೆ ವಿಪಕ್ಷಗಳು ಕೇಜ್ರಿವಾಲ್ ಬೆಂಬಲಕ್ಕೆ ನಿಂತಿದ್ದಾರೆ. ಇಡಿ ಹಾಗೂ ಬಿಜೆಪಿ ವಿರುದ್ಧ ಆಪ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಹೋರಾಟಗಾರ, ಅರವಿಂದ್ ಕೇಜ್ರಿವಾಲ್ ಆಪ್ತರಾಗಿರುವ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಂಧನ ಕೇಜ್ರಿವಾಲ್ ಸ್ವಯಂಕೃತ ಕೃತ್ಯ ಎಂದಿದ್ದಾರೆ.
ನನ್ನ ಜೊತೆ ಹಲವು ಹೋರಾಟದಲ್ಲಿ ಪಾಲ್ಗೊಂಡಿರುವ ಅರವಿಂದ್ ಕೇಜ್ರಿವಾಲ್ ಮದ್ಯದ ವಿರುದ್ದ ಧ್ವನಿ ಎತ್ತಿದ್ದರು. ಹೋರಾಟ ಮಾಡಿದ್ದರು. ಆದರೆ ಈಗ ಅದೇ ಮದ್ಯ ನೀತಿ ಮಾಡಿ ಬಂಧನವಾಗಿದ್ದಾರೆ. ಕೇಜ್ರಿವಾಲ್ ಬಂಧನದಿಂದ ಬೇಸರವಾಗಿದೆ. ಆದರೆ ಅವರ ಕೃತ್ಯದಿಂದಲೇ ಬಂಧನವಾಗಿದೆ. ಈಗ ಅವರೇನು ಮಾಡುತ್ತಾರೆ? ಅಧಿಕಾರದ ಮುಂದೆ ಏನೂ ನಡೆಯುವುದಿಲ್ಲ. ಈಗ ಬಂಧನವಾಗಿದೆ. ಇನ್ನು ಕಾನೂನು ಪ್ರಕಾರ ಏನು ಆಗಬೇಕು ಅದು ನಡೆಯಲಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಕೇಜ್ರಿವಾಲ್ ಬಂಧನ ಬಳಿಕ ಸಚಿವ ಆಪ್ ಸಚಿವ ಸೌರಬ್ ಭಾರದ್ವಾಜ್, ಅತೀಶ್ ಪೊಲೀಸ್ ವಶಕ್ಕೆ!
ಲೋಕಪಾಲ ಬಿಲ್ ಜಾರಿಗೆ 2011ರಲ್ಲಿ ಅಣ್ಣಾ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಕಾಣಿಸಿಕೊಂಡ ಅರವಿಂದ್ ಕೇಜ್ರಿವಾಲ್ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅಣ್ಣಾ ಹಜಾರೆ ಜೊತೆಗೆ ಹಲವು ಹೋರಾಟದಲ್ಲಿ ಕೇಜ್ರಿವಾಲ್ ಮುಂಚೂಣಿಯಲ್ಲಿದ್ದರು. ಬಳಿಕ ಅಣ್ಣಾ ಹಜಾರೆಯಿಂದ ದೂರ ಸರಿದು ಆಮ್ ಆದ್ಮಿ ಪಾರ್ಟಿ ಕಟ್ಟಿ ಬೆಳೆಸಿದ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿರುವುದು ಇತಿಹಾಸ.
ಸ್ವಂತ ಕೃತ್ಯವೇ ಕೇಜ್ರಿವಾಲ್‌ಗೆ ಮುಳುವು, ದೆಹಲಿ ಸಿಎಂ ಬಧನ ಕುರಿತು ಅಣ್ಣ ಹಜಾರೆ ಪ್ರತಿಕ್ರಿಯೆ!#ArvindKejriwalArrest #LiquorPolicyCase #AnnaHazare
— Asianet Suvarna News (@AsianetNewsSN) March 22, 2024
ನನ್ನ ಜೊತೆ ಹೋರಾಟದಲ್ಲಿ ಮದ್ಯ ವಿರುದ್ದ ಘೋಷಣೆ ಮೊಳಗಿಸಿದ್ದ ಕೇಜ್ರಿವಾಲ್ ಅವರ ಸಂತ ಕೃತ್ಯದಿಂದ ಬಂಧನವಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ https://t.co/8nP8Ywe7zu
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇಡಿ ಅದಿಕಾರಿಗಳು 8 ಬಾರಿ ಸಮನ್ಸ್ ನೀಡಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ 8 ಬಾರಿಯೂ ಗೈರಾಗಿದ್ದರು. ಇದೇ ವೇಳೆ ಕೋರ್ಟ್ ಮೆಟ್ಟಿಲೇರಿದ್ದ ಕೇಜ್ರಿವಾಲ್ ಇಡಿ ಸಮನ್ಸ್ ಪ್ರಶ್ನಿಸಿದ್ದರು. ಇದಾದ ಬಳಿಕ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕರೆದಿದ್ದ 8 ಸಮನ್ಸ್‌ಗಳಿಗೆ ಗೈರು ಹಾಜರಾಗಿದ್ದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಇತ್ತ ಇಡಿ ಅಧಿಕಾರಿಗಳು ನಿನ್ನೆ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ಮಾಡಿದ್ದರು. ಬಳಿಕ ಅರವಿಂದ್ ಕೇಜ್ರಿವಾಲ್ ಬಂಧಿಸಲಾಗಿತ್ತು.
Kejriwal story: ಭ್ರಷ್ಟಾಚಾರ ವಿರೋಧಿ ಹೋರಾಟದ ಪ್ರಮುಖ ನಾಯಕ ಈಗ ಭ್ರಷ್ಟಾಚಾರದ ಕೇಸ್‌ನಲ್ಲೇ ಜೈಲು ಹಕ್ಕಿ