ನವದೆಹಲಿ (ಸೆ.18): ಮಾಧ್ಯಮಗಳ ಮೇಲೆ ಸುಪ್ರೀಂಕೋರ್ಟ್‌ ನಿಯಂತ್ರಣ ಹೇರುವ ಉದ್ದೇಶ ಹೊಂದಿದ್ದೇ ಆದಲ್ಲಿ ಮೊದಲು ಅದನ್ನು ಡಿಜಿಟಲ್‌ ಮಾಧ್ಯಮಗಳ ಮೇಲೆ ಹೇರಬೇಕು. ಏಕೆಂದರೆ ಡಿಜಿಟಲ್‌ ಮಾಧ್ಯಮವು ಸುದ್ದಿಯನ್ನು ಅತ್ಯಂತ ವೇಗವಾಗಿ ಪ್ರಸಾರ ಮಾಡುತ್ತವೆ ಮತ್ತು ವಾಟ್ಸಾಪ್‌, ಫೇಸ್‌ಬುಕ್‌, ಟ್ವೀಟರ್‌ನಂಥ ಡಿಜಿಟಲ್‌ ತಾಣಗಳಿಂದಾಗಿ ಅವರು ಬಹುಬೇಗ ವೈರಲ್‌ ಆಗುತ್ತಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

‘ಸುದರ್ಶನ್‌ ಟೀವಿ’ಯ ಬಿಂದಾಸ್‌ ಬೋಲ್‌ ಕಾರ್ಯಕ್ರಮಕ್ಕೆ ಇತ್ತೀಚೆಗೆ ತಡೆ ಹೇರುವ ವೇಳೆ ಸುಪ್ರೀಂಕೋರ್ಟ್‌ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಅವಶ್ಯಕತೆ ಪ್ರತಿಪಾದಿಸಿತ್ತು. ಅಲ್ಲದೆ ಈ ಬಗ್ಗೆ ಕೇಂದ್ರದ ಅಭಿಪ್ರಾಯವನ್ನೂ ಕೋರಿತ್ತು. ಇದಕ್ಕೆ ಅಫಿಡವಿಟ್‌ ಮೂಲಕ ತನ್ನ ಅಭಿಪ್ರಾಯ ಸಲ್ಲಿಸಿರುವ ಕೇಂದ್ರ ಸರ್ಕಾರ, ಎಲೆಕ್ಟ್ರಾನಿಕ್‌ ಮತ್ತು ಮುದ್ರಣ ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಈಗಾಗಲೇ ಸೂಕ್ತ ಕಾನೂನಿನ ಚೌಕಟ್ಟಿದೆ. ಹೀಗಾಗಿ ನ್ಯಾಯಾಲಯ ನಿಯಂತ್ರಣ ಹೇರುವ ಉದ್ದೇಶ ಹೊಂದಿದ್ದಲ್ಲಿ ಮೊದಲು ಅದನ್ನು ಡಿಜಿಟಲ್‌ ಮಾಧ್ಯಮದ ಮೇಲೆ ಹೇರಬೇಕು. ಏಕೆಂದರೆ ಅವುಗಳು ಬೀರುವ ಪರಿಣಾಮ ಹೆಚ್ಚು’ ಎಂದು ಹೇಳಿದೆ.

Digital Media News Ranking: 9ನೇ ಸ್ಥಾನಕ್ಕೆ ಜಿಗಿದ ಎಷ್ಯಾನೆಟ್ ನ್ಯೂಸ್

ಈಗಲೂ ಪತ್ರಿಕೆಯೇ ಹೆಚ್ಚು ವಿಶ್ವಾಸಾರ್ಹ ಮಾಧ್ಯಮ
ಮುಂಬೈ:
ಟೀವಿ, ರೇಡಿಯೋ, ಡಿಜಿಟಲ್‌ ಮೀಡಿಯಾಕ್ಕೆ ಹೋಲಿಸಿದರೆ ಪತ್ರಿಕೆಗಳು ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ಎಂಬ ಹಿರಿಮೆ ಉಳಿಸಿಕೊಂಡಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಮೂಲಕ ಹೊಸ ಹೊಸ ಪ್ರಕಾರ ಮಾಧ್ಯಮಗಳ ಪ್ರವೇಶದ ಹೊರತಾಗಿಯೂ, ದಶಕಗಳಿಂದ ಮುದ್ರಣ ಮಾಧ್ಯಮ ತಾನು ಉಳಿಸಿಕೊಂಡು ಬಂದಿದ್ದ ಹಿರಿಮೆಯನ್ನು ಮುಂದುವರೆಸಿಕೊಂಡು ಹೋಗಿರುವುದನ್ನು ಸಮೀಕ್ಷೆ ಒತ್ತಿ ಹೇಳಿದೆ.

ಮಾಧ್ಯಮ ಸಲಹಾ ಸಂಸ್ಥೆ- ಓಮ್ರ್ಯಾಕ್ಸ್‌ ಮೀಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ವಿಶ್ವಾಸಾರ್ಹತೆಯಲ್ಲಿ ಮುದ್ರಣ ಮಾಧ್ಯಮ ಶೇ.62ರಷ್ಟು, ರೇಡಿಯೋ ಶೇ.57ರಷ್ಟುಹಾಗೂ ವಿದ್ಯುನ್ಮಾನ ಮಾಧ್ಯಮ ಶೇ.56ರಷ್ಟುಅಂಕ ಗಳಿಸಿವೆ. 17 ರಾಜ್ಯಗಳಲ್ಲಿ 15 ವರ್ಷ ಮೇಲ್ಪಟ್ಟನಗರ ಪ್ರದೇಶದ 2,400 ಸುದ್ದಿ ಗ್ರಾಹಕರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಓಮ್ರ್ಯಾಕ್ಸ್‌ ಈ ವರದಿ ಸಿದ್ಧಪಡಿಸಿದೆ.

ಹಿರಿಯ ಪತ್ರಕರ್ತೆ ಡಿಜಿಟಲ್ ಮೀಡಿಯಾ ಬಗ್ಗೆ ಮಾತನಾಡಿದ್ದು ಇಷ್ಟು

ಟ್ವೀಟರ್‌ ನಂ.1:
ಡಿಜಿಟಲ್‌ ಮಾಧ್ಯಮಗಳ ಪೈಕಿ ಜನರು ಟ್ವೀಟರ್‌ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಾರೆ. ವಾಟ್ಸಾಪ್‌ನಲ್ಲಿ ಹರಿದಾಡುವ ಸುದ್ದಿಗಳು ಅತ್ಯಂತ ಕಡಿಮೆ ವಿಶ್ವಾಸಾರ್ಹತೆ ಹೊಂದಿವೆ. ಟ್ವೀಟರ್‌ ಶೇ.53ರಷ್ಟುವಿಶ್ವಾಸಾರ್ಹತೆಯನ್ನು ಸಂಪಾದಿಸಿದರೆ, ಟೆಲಿಗ್ರಾಮ್‌ ಶೇ.31ರಷ್ಟು, ಫೇಸ್‌ಬುಕ್‌ ಶೇ.30ರಷ್ಟು, ಇನ್‌ಸ್ಟಾಗ್ರಾಮ್‌ ಶೇ.29ರಷ್ಟುಮತ್ತು ವಾಟ್ಸಾಪ್‌ ಮೇಲೆ ಶೇ.28ರಷ್ಟುಮಂದಿ ವಿಶ್ವಾಸ ಇಟ್ಟಿದ್ದಾರೆ. ಇದೇ ವೇಳೆ ಮಾಧ್ಯಮದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಶೇ.61ರಷ್ಟುಗ್ರಾಹಕರ ಕಳವಳಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.