ಶ್ರೀನಗರ(ಫೆ.08): ಭಾರತದ ಭದ್ರತಾ ವಿಭಾಗ ಸ್ಫೋಟಕ ಅಂಕಿ ಅಂಶವನ್ನು ಬಹಿರಂಗ ಪಡಿಸಿದೆ. ಕಳೆದ 3 ವರ್ಷದಲ್ಲಿ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ತೆರಳಿದ 100ಕ್ಕೂ ಹೆಚ್ಚು ಮಂದಿ ಯುವಕರು ನಾಪತ್ತೆಯಾಗಿದ್ದಾರೆ. ಭಾರತದ ದಾಖಲೆಗಳಲ್ಲಿ ಯುವಕರು ನಾಪತ್ತೆಯಾಗಿದ್ದಾರೆ. ಮತ್ತೆ ಭಾರತಕ್ಕೆ ಮರಳಿದ ಅಥವಾ ಭಾರತದಲ್ಲಿ ಎಲ್ಲಿದ್ದಾರೋ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದಿದೆ.

18 ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಆರಂಭ

ಹಣದ ಆಮಿಷ, ಕೆಲ ವಹಿವಾಟು ಸೇರಿದಂತೆ ಹಲವು ಕಾರಣಗಳಿಗೆ ಕಾಶ್ಮೀರ ಯುವಕರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಬಳಿಕ ನಾಪತ್ತೆಯಾಗಿದ್ದಾರೆ. ಈ ಯುವಕರನ್ನು ಮನ ಪರಿವರ್ತಿಸಿ, ಭಾರತದೊಳಕ್ಕೆ ಸ್ಲೀಪರ್ ಸೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಅಥವಾ ಯಾವುದಾದರೂ ನಿಷೇಧಿತ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಾಧ್ಯತೆ ಇದೆ ಎಂದು ಭದ್ರತಾ ವಿಭಾಗದ ಐಪಿಎಸ್ ಅಧಿಕಾರಿ ಹೇಳಿದ್ದಾರೆ.

ಪಾಕ್ ಗಡಿಯಲ್ಲಿ 150 ಮೀ ಉದ್ದದ ಉಗ್ರ ಸುರಂಗ ಪತ್ತೆ: 8 ವರ್ಷದಿಂದ ಬಳಕೆ ಶಂಕೆ!..

ಕಾಶ್ಮೀರದಿಂದ ಪಾಕಿಸ್ತಾನಕ್ಕೆ ತೆರಳಿದ 100ಕ್ಕೂ ಹೆಚ್ಚು ಯುವಕರು ಸರಿಯಾದ ವೀಸಾ ಮೂಲಕ ತೆರಳಿದ್ದಾರೆ. ಅಲ್ಪಾವದಿ ವೀಸಾ ಮೂಲಕ ತೆರಳಿದ ಯುವಕರು ಮತ್ತೆ ಮರಳಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಮರಳಿದ್ದರೂ ಎಲ್ಲಿದ್ದಾರೆ ಅನ್ನೋ ಕುರಿತು ಸುಳಿವಿಲ್ಲ ಎಂದಿದೆ.

ಕಾಶ್ಮೀರ ಯುವಕರು ಪಾಕಿಸ್ತಾನ ಭೇಟಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದು ಅವರವರ ಆಯ್ಕೆ. ಆದರೆ ತೆರಳಿದವರ ಕುರಿತು ನಿಘಾ ಇಡಲು ಸಾಧ್ಯವಿದೆ.  ಹೀಗಾಗಿ ಈ ಕುರಿತು ಭದ್ರತಾ ವಿಭಾಗ ಹೊಸ ಕೆಲ ನಿಯಮ ಜಾರಿಗೆ ತರುತ್ತಿದೆ ಎಂದಿದೆ.