Asianet Suvarna News Asianet Suvarna News

ಪಾಕ್ ಗಡಿಯಲ್ಲಿ 150 ಮೀ ಉದ್ದದ ಉಗ್ರ ಸುರಂಗ ಪತ್ತೆ: 8 ವರ್ಷದಿಂದ ಬಳಕೆ ಶಂಕೆ!

ಉಗ್ರರ ನುಸುಳಿಸಲು ಬಳಸುತ್ತಿದ್ದ 8 ವರ್ಷ ಹಳೆಯ ಸುರಂಗ ಪತ್ತೆ| ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ 150 ಮೀ ಉದ್ದದ ಸುರಂಗ ಪತ್ತೆ

Soldiers Find Tunnel Used By Pak To Infiltrate Terrorists Across Border In JK 2nd In 10 Days pod
Author
Bangalore, First Published Jan 24, 2021, 7:57 AM IST

ಜಮ್ಮು(ಜ.24): ಪಾಕಿಸ್ತಾನವು ಗಡಿ ಮೂಲಕ ಭಾರತಕ್ಕೆ ಉಗ್ರರನ್ನು ಕಳುಹಿಸಲು ಬಳಸುತ್ತಿದ್ದ 30 ಅಡಿ ಆಳ ಮತ್ತು 150 ಮೀಟರ್‌ ಉದ್ದದ ಸುರಂಗವೊಂದನ್ನು ಗಡಿಭದ್ರತಾ ಪಡೆಯ ಸಿಬ್ಬಂದಿ ಶನಿವಾರ ಪತ್ತೆ ಹಚ್ಚಿದ್ದಾರೆ. ಕಳೆದ 10 ದಿನಗಳಲ್ಲಿ ಬಿಎಸ್‌ಎಫ್‌ ಯೋಧರು ಪತ್ತೆ ಹಚ್ಚಿದ 2ನೇ ಸುರಂಗವಿದು.

ಬಿಎಸ್‌ಎಫ್‌ನ ಗಡಿ ಪೋಸ್ಟ್‌ 14 ಮತ್ತು 15ರ ನಡುವಿನ ಪ್ರದೇಶದಲ್ಲಿ ಈ ಸುರಂಗ ಪತ್ತೆಯಾಗಿದೆ. ಸುರಂಗದ ಮತ್ತೊಂದು ತುದಿ ಪಾಕಿಸ್ತಾನದ ಶಕರ್‌ಗಢ ಜಿಲ್ಲೆಯ ವ್ಯಾಪ್ತಿಗೆ ಬರುವ ಕಿಂಗ್ರೆ ಡಿ ಕೋಥೆ ಪ್ರದೇಶವನ್ನು ಸಂಪರ್ಕಿಸುತ್ತದೆ. ಶಕರ್‌ಗಢ, ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ತರಬೇತಿ ಕೇಂದ್ರ ಇರುವ ಪ್ರದೇಶ. ಕಳೆದ ಕೆಲ ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಕೆಲ ಸ್ಥಳಗಳಲ್ಲಿ ನಡೆದ ಪ್ರಮುಖ ಉಗ್ರ ದಾಳಿಗಳಲ್ಲಿ ಜೈಷ್‌ ಸಂಘಟನೆಯ ಕೈವಾಡ ಪ್ರಮಖವಾಗಿತ್ತು.

ಹೀಗಾಗಿ ಆ ಸಂಘಟನೆಯು ಈ ಸುರಂಗವನ್ನು ಉಗ್ರರನ್ನು ಭಾರತಕ್ಕೆ ಕಳುಹಿಸಲು ಪ್ರಮುಖವಾಗಿ ಬಳಸಿಕೊಳ್ಳುತ್ತಿತ್ತು ಎಂದು ಹೇಳಲಾಗಿದೆ. ಇದಕ್ಕೆ ಪೂರಕವೆಂಬಂತೆ 2012ರಿಂದಲೂ ಈ ಪ್ರದೇಶದಲ್ಲೇ ಪಾಕ್‌ ಪಡೆಗಳು ಭಾರತದ ಮೇಲೆ ಸತತ ಗುಂಡಿನ ದಾಳಿ ನಡೆಸುತ್ತಿದ್ದವು. ಇದು ಉಗ್ರರನ್ನು ಭಾರತಕ್ಕೆ ಒಳನುಸುಳಿಸುವ ಕಾರ್ಯಾಚರಣೆಯ ಭಾಗವಾಗಿದ್ದಿರಬಹುದು ಎಂದು ಸೇನಾ ಪಡೆಗಳು ಶಂಕಿಸಿವೆ.

Follow Us:
Download App:
  • android
  • ios