Asianet Suvarna News Asianet Suvarna News

Kashmiri Pandits ಜೀವಂತವಿರುಗಾಲೇ ಪಂಡಿತ್ ಸಹೋದರಿಯನ್ನು ಕತ್ತರಿಸಿ ಕೊಂದರು, ಕರಾಳ ಸತ್ಯ ಬಿಚ್ಚಿಟ್ಟ ಪಿಡಿಪಿ ನಾಯಕ!

  • ಕಾಶ್ಮೀರ ಪಂಡಿತರ ಮೇಲೆ ನಡೆದ ಕೌರ್ಯ ಒಂದೊಂದೆ ಬಹಿರಂಗ
  • 1990ರಲ್ಲಿ ಪಂಡಿತ ಕುಟುಂಬದ ಮೇಲೆ ನಡೆದ ದೌರ್ಜನ್ಯ
  • ಪಂಡಿತ್ ಕುಟುಂಬದ ಗಿರಿಜಾಳನ್ನು ಹತ್ಯೆಗೈದ ಘಟನೆ
Pundit sister Girja Tikoo was cut into pieces while she alive by militants PDp leader reveals horrific incident ckm
Author
Bengaluru, First Published Mar 15, 2022, 6:03 PM IST | Last Updated Mar 15, 2022, 7:06 PM IST

ನವದೆಹಲಿ(ಮಾ.15): ಕಾಶ್ಮೀರ ಪಂಡಿತರು, ಹಿಂದೂಗಳ ಮೇಲೆ ನಡೆದ ನರಮೇಧ ನೈಜ ಘಟನೆ ಆಧರಿಸಿ ಬಂದಿರುವ ದಿ ಕಾಶ್ಮೀರ ಫೈಲ್ಸ್ ಬಾಲಿವುಡ್ ಚಿತ್ರ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇಷ್ಟು ದಿನ ಅಡಗಿದ್ದ ನೋವು ಒಂದೊಂದಾಗಿ ಹೊರಬರುತ್ತಿದೆ. ನೋವಿನಲ್ಲಿ ಬೆಂದು ಹೋದ ಕಾಶ್ಮೀರ ಪಂಡಿತರು ಬಿಕ್ಕಿ ಬಿಕ್ಕಿ ಅತ್ತು ಸಮಾಧಾನ ಪಡುತ್ತಿದ್ದಾರೆ. ಇತ್ತ ಕಾಶ್ಮೀರ ಪಂಡಿತರ ನರಮೇಧ ಕಣ್ಣಾರೆ ನೋಡಿದ ಹಲವರು 32 ವರ್ಷಗಳ ಬಳಿಕ ಸತ್ಯ ಬಿಚ್ಚಿಡುತ್ತಿದ್ದಾರೆ. ಇದೀಗ ಕಾಶ್ಮೀರದ ಪೀಪಲ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯ ಕಾರ್ಯದರ್ಶಿ ಜಾವೇದ್ ಬೈಗ್ ಕಾಶ್ಮೀರಿ ಪಂಡಿತ್ ಕುಟುಂಬ ಗಿರಿಜಾ ಟಿಕೂ ಮೇಲೆ ನಡೆದ ಅತ್ಯಂತ ಘನಘೋರ ಘಟನೆಯನ್ನು ಹೇಳಿದ್ದಾರೆ. 

ಅದು 1990. ಕಾಶ್ಮೀರ ಪಂಡಿತರ ನರಮೇಧ ನಡೆದ ಕರಾಳ ಅಧ್ಯಾಯ. ದಿ ಕಾಶ್ಮೀರ ಪೈಲ್ಸ್ ಚಿತ್ರದಲ್ಲಿ ಈ ಘಟನೆಗಳನ್ನು ಸಂಕ್ಷಿಪ್ತವಾಗಿ ಚಿತ್ರಿಸಲಾಗಿದೆ. ಪಾಕಿಸ್ತಾನದ ಭಯೋತ್ಪಾದಕರು, ಮುಸ್ಲಿಂ ಮೂಲಭೂತವಾದಿಗಳು ನಡೆಸಿದ ನರಮೇಧದಲ್ಲಿ ಸತ್ತವರ ಸರಿಯಾದ ಲೆಕ್ಕವರ ಲೆಕ್ಕ ಇನ್ನೂ ಇಲ್ಲ. ಪಂಡಿತರ ಕುಟುಂಬದ ಮಹಿಳೆಯರನ್ನು ಮನೆಯಿಂದ ಹೊರಗೆಳೆದು ಪತಿ, ತಂದೆ ಎದುರೇ ಅತ್ಯಾಚಾರ ಹತ್ಯೆ ಮಾಡಲಾಗಿತ್ತು. ಹೀಗೆ ಪಂಡಿತರ ಕುಟುಂಬದಿಂದ ಗಿರಿಜಾ ಟಿಕೂ ಅನ್ನೋ ಹೆಣ್ಣುಮಗಳ ಹೊರಗೆಳೆದು ಜೀವಂತವಾಗಿಯೇ ತುಂಡು ತುಂಡು ಮಾಡಿ ಹತ್ಯೆಗೈದ ಘಟನೆ ಕುರಿತು ಜಾವೇದ್ ಬೈಗ್ ವಿವರಿಸಿದ್ದಾರೆ.

4 ಲಕ್ಷ ಕುಟುಂಬಗಳ ನೋವಿನ ಕಥೆ, ತೆರೆ ಮೇಲೆ ಬಂತು ಕರಾಳ ಇತಿಹಾಸ

ಕಾಶ್ಮೀರದ ಮೂಲಭೂತ ವಾದಿ ಮುಸ್ಲಿಂವರು ಪಾಕಿಸ್ತಾನ ನೀಡಿದ ಗನ್ ಬಳಸಿ ಕಾಶ್ಮೀರ ಪಂಡಿತರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಸ್ವತಂತ್ರ್ಯ ಕಾಶ್ಮೀರ ಹೆಸರಿನಲ್ಲಿ ಗಿರಿಜಾ ಟಿಕೂವನ್ನು ಜೀವಂತವಾಗಿ ಕತ್ತರಿಸಿದ್ದರು. ಇದು ಸತ್ಯ ಘಟನೆ. ಇದರಲ್ಲಿ ಯಾವುದೇ ಪ್ರಚಾರ ಅಥವಾ ಇನ್ಯಾವುದೇ ಉದ್ದೇಶವಿಲ್ಲ. ನಾನು ಈ ಸಂದರ್ಭದಲ್ಲಿ ಕೈಮುಗಿದ ಪಂಡಿತ್ ಬಿರಾದಾರಿ ಕುಟುಂಬದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಜಾವೇದ್ ಬೈಗ್ ಟ್ವೀಟ್ ಮಾಡಿದ್ದಾರೆ.

 

 

ಇಂತಹ ಅದೆಷ್ಟೋ ಸಾವಿರ ಘಟನೆಗಳು ನಡೆದಿದೆ. ಪಂಡಿತ್ ಕುಟುಂಬ ಹೆಣ್ಣು ಮಕ್ಕಳು, ಹಿಂದೂ ಕುಟುಂಬ ಹೆಣ್ಣುಮಕ್ಕಳು ಮುಸ್ಲಿಂ ಮತಾಂಧರ ಕೈಯಲ್ಲಿ ಸಿಲುಕಿ ನರಳಾಡಿದ್ದಾರೆ. ಈ ಸತ್ಯ ಕಾಶ್ಮೀರಿ ಫೈಲ್ಸ್ ಚಿತ್ರದ ಬಳಿಕ ಹೊರಬರುತ್ತಿದೆ. 

ಕಾಶ್ಮೀರ ಫೈಲ್ಸ್ ಸಿನಿಮಾದ ಪುಷ್ಕರನಾಥ ಪಂಡಿತರು ಅನುಭವಿಸಿದ ಕಾಯಿಲೆ, ಯಾವುದದು?

980ರ ದಶಕದಲ್ಲಿ ಏನಾಗಿತ್ತು?
1980ರ ದಶಕದ ದ್ವಿತೀಯಾರ್ಧ ಕಾಶ್ಮೀರ ಕಣಿವೆಯಲ್ಲಿ ವಾಸವಿದ್ದ ಪಂಡಿತ ಸಮುದಾಯಕ್ಕೆ ಅತ್ಯಂತ ಕರಾಳ ದಿನಗಳು. ಜಮ್ಮು-ಕಾಶ್ಮೀರದ ಲಿಬರೇಷನ್‌ ಫ್ರಂಟ್‌ ಮತ್ತು ಇಸ್ಲಾಮಿಕ್‌ ಉಗ್ರವಾದದ ಅಟ್ಟಹಾಸದಿಂದ ಸುಮಾರು 3.5 ಲಕ್ಷ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ಆಸ್ತಿ-ಪಾಸ್ತಿಗಳನ್ನೆಲ್ಲ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ರಾತ್ರೋರಾತ್ರಿ ಓಡಬೇಕಾದ ಪರಿಸ್ಥಿತಿ ಬಂದಿತ್ತು. 1989ರ ಸೆಪ್ಟೆಂಬರ್‌ನಲ್ಲಿ ಶಸ್ತ್ರ ಸಜ್ಜಿತ ಗುಂಪು ಬಿಜೆಪಿ ನಾಯಕ ಪಂಡಿತ ರಾಜಕೀಯ ಕಾರ‍್ಯಕರ್ತ ಟೀಕಾ ಲಾಲ್‌ ತಪ್ಲೋ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತು. ಇಲ್ಲಿಂದ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ಆರಂಭವಾಯಿತು. ಮಸೀದಿಗಳ ಮೈಕಿನಿಂದ ಪಂಡಿತರೇ ಇಲ್ಲಿಂದ ಹೊರಡಿ ಎಂದು ಫಾರ್ಮಾನು ಹೊರಡುತ್ತಿತ್ತು. ವ್ಯವಸ್ಥಿತವಾಗಿ ನಡೆದ ಅಮಾನವೀಯ ದೌರ್ಜನ್ಯದಿಂದ ಕಾಶ್ಮೀರಿ ಹಿಂದೂಗಳು ಅಲ್ಲಿಂದ ಅನಿವಾರ‍್ಯವಾಗಿ ವಲಸೆ ಹೋಗುವಂತಾಯಿತು. 1997 ಮಾಚ್‌ರ್‍ನಲ್ಲಿ 7 ಕಾಶ್ಮೀರಿ ಪಂಡಿತರನ್ನು ಮನೆಯಿಂದ ಹೊರಗೆಳೆದುಕೊಂಡು ಬಂದ ಭಯೋತ್ಪಾದರು ಗುಂಡಿಕ್ಕಿ ಹತ್ಯೆಗೈದರು. 1998 ಜನವರಿಯಲ್ಲಿ ವಂಧಾಮಾ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಸೇರಿ 23 ಕಾಶ್ಮೀರ ಪಂಡಿತರನ್ನು ಹತ್ಯೆ ಮಾಡಲಾಯಿತು. ಜನವರಿ 1990ರಂದು ಕಣಿವೆ ರಾಜ್ಯದ ಮಸೀದಿಗಳ ಮುಂದೆ ಬೃಹತ್‌ ಜನಸ್ತೋಮ ನೆರೆದು ಪಂಡಿತ್‌ ವಿರೋಧಿ ಮತ್ತು ಭಾರತ ವಿರೋಧಿ ಘೋಷಣೆ ಕೂಗಲು ಆರಂಭಿಸಿದರು. ಅಲ್ಲಿಂದ ಕಾಶ್ಮೀರಿ ಪಂಡಿತರ ಮಹಾ ವಲಸೆ ಆರಂಭವಾಯಿತು. ಮುಂದಿನ ಕೆಲ ತಿಂಗಳ ಕಾಲ ಮುಗ್ಧ ಕಾಶ್ಮೀರಿ ಪಂಡಿತರಿಗೆ ಚಿತ್ರ ಹಿಂಸೆ ನೀಡಿದರು, ಹಲವರನ್ನು ಕೊಂದರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರು. ವರ್ಷದ ಅಂತ್ಯದ ವೇಳೆಗೆ ಸುಮಾರು 3.5 ಲಕ್ಷ ಪಂಡಿತರು ಕಾಶ್ಮೀರ ತೊರೆದು ಪಲಾಯನ ಮಾಡಿದರು. ಅವರ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಲಾಯಿತು. ಅಥವಾ ತುರ್ತಾಗಿ ಕಾಶ್ಮೀರಿ ಮುಸ್ಲಿಮರಿಗೆ ಮಾರಾಟ ಮಾಡಲಾಯಿತು.

Latest Videos
Follow Us:
Download App:
  • android
  • ios