ಮಗಳ ಮದುವೆ ಮಾಡಿದ್ದಕ್ಕೆ ಮೂರು ಕುಟುಂಬದ 12 ಮಕ್ಕಳು, ಗರ್ಭಿಣಿ ಸೇರಿ 17 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಗ್ರಾಮಕ್ಕೆ ಮುಖ್ಯಮಂತ್ರಿ ಕೂಡ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ಈ ಗ್ರಾಮದಲ್ಲಿ ಬೆಳೆಯುತ್ತಿದ್ದ ಸುಂದರ ಯುವತಿ ಸುಲ್ತಾನಳ ಮದುವೆಯನ್ನು ಅವರ ಅಪ್ಪ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ. ಆದರೆ, ಮಗಳ ಮದುವೆಗೆ ಹಾಜರಾಗಿದ್ದ 3 ಕುಟುಂಬಗಳ 12 ಮಕ್ಕಳು ಸೇರಿದಂತೆ 17 ಜನರು ವಿಚಿತ್ರ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ತಿಳಿದ ಸಿಎಂ ಫಾರೂಖ್ ಅಬ್ದುಲ್ಲಾ ಸಹ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಾಶ್ಮೀರದ ರಜೌರಿ ಜಿಲ್ಲೆಯ ಬಡಾಲ್ ಗ್ರಾಮಕ್ಕೆ 2024ರ ಡಿಸೆಂಬರ್ 2 ಸಾಮಾನ್ಯ ದಿನವಾಗಿತ್ತು. ಆದರೆ, ಆ ದಿನ ಫಜಲ್ ಹುಸೇನ್ ಅವರ ಮಗಳ ಮದುವೆಯಾಗಿತ್ತು. ಎಲ್ಲರೂ ಊಟ ಮಾಡಿ ಹೋದರು. ಆದರೆ 54 ದಿನಗಳ ನಂತರ ಮೂರು ಕುಟುಂಬಗಳ 17 ಜನ ನಿಗೂಢವಾಗಿ ಸಾವನ್ನಪ್ಪಿದರು. ಮದುವೆ ನಂತರ ಐದು ದಿನಗಳಿಂದ ಸಾವುಗಳು ಪ್ರಾರಂಭವಾದವು. ಫಜಲ್ ಹುಸೇನ್ ಮತ್ತು ಅವರ 4 ಮಕ್ಕಳಿಗೆ ಜ್ವರ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ಥಳೀಯ ಜನರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಸಾಮಾನ್ಯ ಜ್ವರ ಎಂದು ವಾಪಸ್ ಕಳುಹಿಸಿದ್ದರು. ಆದರೆ, ಅವರಿಗೆ ಗುಣಮುಖವಾಗದೇ ಎಲ್ಲರೂ ಪುನಃ ಆಸ್ಪತ್ರೆಗೆ ಬಂದು ದಾಖಲಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಫಜಲ್ ಹುಸೇನ್ ಸೇರಿದಂತೆ ಕುಟುಂಬದ ಎಲ್ಲ ಐದೂ ಜನ್ನು ಸಾವನ್ನಪ್ಪಿದರು. ಇದಕ್ಕೆ ಸೂಕ್ತ ಕಾರಣ ಏನೆಂಬುದು ವೈದ್ಯರಿಗೆ ತಿಳಿದು ಬಂದಿಲ್ಲ. ಆದರೆ, ಮಗಳ ಮದುವೆ ಮಾಡಿದ ಫಜಲ್ ಇಡೀ ಕುಟುಂಬದವರು ಇದೀಗ ಮಸಣ ಸೇರಿದ್ದು, ಕುಟುಂಬದ ಹೆಸರೇಳಲೂ ಒಬ್ಬರೂ ಇಲ್ಲದಂತಾಗಿದ್ದಾರೆ.

Scroll to load tweet…

ಇದನ್ನೂ ಓದಿ: ಪತಿಯರಿಂದ ಬೇಸತ್ತ ಇಬ್ಬರು ಮಹಿಳೆಯರು ಮಾಡಿದ್ದಾರೆ ಶಾಕಿಂಗ್ ಕೆಲಸ!

ನಂತರ, ಫಜಲ್ ಅವರ ಮಗಳ ಮದುವೆಗೆ ಬಂದಿದ್ದ ನೆರೆಮನೆಯವರಾದ ಮೊಹಮ್ಮದ್ ರಫೀಕ್ ಅವರ ಗರ್ಭಿಣಿ ಪತ್ನಿ ಮತ್ತು 3 ಮಕ್ಕಳು ಸಹ ಅದೇ ಲಕ್ಷಣಗಳಿಂದ ಬಳಲಿದ್ದಾರೆ. ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೂ ಕೂಡ ಅದೇ ಜ್ವರದ ಲಕ್ಷಣಗಳಿದ್ದರಿಂದ ವಿಷಾಹಾರ ಸೇವನೆ (ಫುಡ್ ಪಾಯ್ಸನ್) ಆಗಿರಬಹುದು ಎಂದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ, ಅವರ ಕುಟುಂಬದ ಮೂವರು ಮಕ್ಕಳು, ಗರ್ಭಿಣಿ ಹೆಂಡತಿ ಮತ್ತು ರಫೀಕ್ ಸಾವನ್ನಪ್ಪಿದರು. ವೈದ್ಯರು ಫುಡ್ ಪಾಯ್ಸನ್ ಆಗಿರಬಹುದು ಎಂದು ಶಂಕಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯಾವುದೇ ವಿಷಾಹಾರ ಸೇವನೆ ಮಾಡಿರುವ ಲಕ್ಷಣಗಳು ಕಂಡುಬಂದಿಲ್ಲ.

ಆದರೆ, ಫಜಲ್ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡ 15 ಜನರು ಕೇವಲ 54 ದಿನಗಳಲ್ಲಿ ರಜೌರಿ ವೆದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ 12 ಮಕ್ಕಳಿದ್ದರು ಎಂಬುದೇ ತುಂಬಾ ಮನಕಲಕುವ ವಿಚಾರವಾಗಿದೆ. ಇದೀಗ ಜ.21ರ ಸಂಜೆಯ ವೇಳೆಗೆ ಇನ್ನೂ 5 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

Jammu and Kashmir Honourable CM @OmarAbdullah visits Badhal village in Rajouri to meet locals in the wake of death of 17 people under mysterious circumstances. pic.twitter.com/yfS7PJxNRX

— Nc kalakote Sunderbani (@NCkalakote) January 21, 2025

ಗೃಹ ಸಚಿವಾಲಯ ತಜ್ಞ ವೈದ್ಯರ ತಂಡವನ್ನು ನೇಮಿಸಿತು. ಬಡಾಲ್ ಗ್ರಾಮವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಯಿತು. ಜನರು ಭಯದಿಂದ ಮನೆಯಿಂದ ಹೊರಬರುತ್ತಿಲ್ಲ. ಕಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರು ಹಾಗೂ ಗ್ರಾಮಸ್ಥರಿಗೆ ಧೈರ್ಯ ಹೇಳಿ, ಸಾಂತ್ವನ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬೀದಿ ಬದಿಯ ₹5 ಇಡ್ಲಿ vs 5-ಸ್ಟಾರ್ ಹೋಟೆಲ್‌ನ ₹5000 ಚಿನ್ನದ ಇಡ್ಲಿ! ಯಾವುದು ರುಚಿಕರ?

ರೋಗಿಗಳನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೇರೆ ರಾಜ್ಯಗಳ ಆಸ್ಪತ್ರೆಗಳಿಗೆ ರವಾನಿಸಲಾಗುತ್ತಿದೆ. ಮೃತರ ಮನೆಗಳನ್ನು ಸೀಲ್ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರು ಮದುವೆಯಲ್ಲಿ ಭಾಗವಹಿಸಿದವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಸುಮಾರು 200 ಜನರು ಕ್ವಾರಂಟೈನ್ ನಲ್ಲಿದ್ದಾರೆ. ಈಗ ಬಡಾಲ್ ಗ್ರಾಮಸ್ಥರಿಗೆ ಪಕ್ಕದ ಮನೆಯವರಿಗೆ ಜ್ವರ ಬಂದರೆ ಭಯವಾಗುತ್ತದೆ.

ಮುನ್ನೆಚ್ಚರಿಕೆ ಕ್ರಮವಾಗಿ, ಅಧಿಕಾರಿಗಳು ಬಡಾಲ್ ಗ್ರಾಮಸ್ಥರಿಗೆ ಸ್ಥಳೀಯ ನೀರಿನ ಮೂಲದಿಂದ ನೀರು ತೆಗೆದುಕೊಳ್ಳುವುದನ್ನು ನಿಷೇಧಿಸಿದ್ದಾರೆ. ವೈದ್ಯರು ಸಾವುಗಳು ನರ ವಿಷದಿಂದ ಉಂಟಾಗಿವೆ ಎಂದು ಹೇಳುತ್ತಾರೆ. ಆದರೆ ಮೂಲ ತಿಳಿದುಬಂದಿಲ್ಲ. 54 ದಿನಗಳು ಕಳೆದರೂ ಕಾರಣ ತಿಳಿದುಬಂದಿಲ್ಲ.