ಬೆಂಗಳೂರಿನಲ್ಲಿ ಒಬ್ಬ ಸೋಶಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ ಬೀದಿ ಬದಿಯ ₹5 ಇಡ್ಲಿಯಿಂದ ಹಿಡಿದು 5-ಸ್ಟಾರ್ ಹೋಟೆಲ್‌ನ ₹5000 ಚಿನ್ನದ ಇಡ್ಲಿಯವರೆಗೆ ರುಚಿ ನೋಡುತ್ತಾನೆ. ಕೊನೆಯಲ್ಲಿ ಯಾವ ಇಡ್ಲಿಗೆ ಅತಿ ಹೆಚ್ಚು ರೇಟಿಂಗ್ಸ್ ಸಿಗುತ್ತದೆ ಎಂಬುದನ್ನು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾನೆ.

ಕಾಸು ಕೊಟ್ಟಂತೆ ಕಜ್ಜಾಯ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಾವು ಕಾಸುಕೊಟ್ಟರೂ ನಮಗೆ ತೃಪ್ತಿ ಸಿಗದ ವಸ್ತುಗಳು ಸಿಕ್ಕರೆ ಬೇಸರವಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಸೋಶಿಯಲ್ ಮಿಡಿಯಾ ಇನ್ಲ್ಯೂಯೆನ್ಸರ್ ಬೀದಿ ಬದಿಯಲ್ಲಿ ಸಿಗುವಂತಹ 5 ರೂ. ಇಡ್ಲಿ, ಸಾಮಾನ್ಯ ಹೋಟೆಲ್‌ನಲ್ಲಿ ಸಿಗ ಇಡ್ಲಿ, ಸ್ಟಾರ್ ಹೋಟೆಲ್‌ನ ಇಡ್ಲಿ ಹಾಗೂ 5 ಸ್ಟಾರ್ ಹೋಟೆಲ್‌ನಲ್ಲಿ ಸಿಗುವ 23 ಕ್ಯಾರೆಟ್ ಚಿನ್ನದ ಲೇಪನವನ್ನು ಹೊಂದಿರುವ ಇಡ್ಲಿಯನ್ನೂ ತಿನ್ನುತ್ತಾನೆ. ಆದರೆ, ಈ ಎಲ್ಲ ಇಡ್ಲಿಗಳಲ್ಲಿ ಯಾವ ಇಡ್ಲಿ ತುಂಬಾ ರುಚಿಕರ ಆಗಿತ್ತು ಎಂಬುದನ್ನು ಕೊನೆಯಲ್ಲಿ ರೇಟಿಂಗ್ಸ್ ಕೊಡುವ ಮೂಲಕ ಬಹಿರಂಗಪಡಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 

ಇವತ್ತು ನಮಗೆ ಎಷ್ಟು ರೂಪಾಯಿ ಊಟ ಬೇಕು ಅಂದ್ರೆ ಅಷ್ಟು ರೂಪಾಯಿ ಊಟ ಸಿಗುತ್ತೆ. 5 ರೂಪಾಯಿಗೂ ಸಿಗುತ್ತೆ, 5,000 ರೂಪಾಯಿಗೂ ಸಿಗುತ್ತದೆ. ಆದರೆ ಈ ಬೆಲೆ ಬದಲಾದಾಗ ರುಚಿ ಕೂಡ ಬದಲಾಗುತ್ತಾ? ಇದನ್ನೇ ಹುಡುಕಿಕೊಂಡು ಹೋಗುವ ಒಂದು ವಿಡಿಯೋವನ್ನು ಕ್ಯಾಸಿ ಪೆರೇರ ಎಂಬ ಕಂಟೆಂಟ್ ಕ್ರಿಯೇಟರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅವರು ಬೇರೆ ಬೇರೆ ಬೆಲೆಯ ಇಡ್ಲಿಗಳನ್ನು ಟ್ರೈ ಮಾಡ್ತಾರೆ.

ಐದು ರೂಪಾಯಿ ಇಡ್ಲಿಯಿಂದ ಹಿಡಿದು ಐದು ಸಾವಿರ ರೂಪಾಯಿ ಇಡ್ಲಿವರೆಗೂ ಟ್ರೈ ಮಾಡಿ ಯಾವ ಇಡ್ಲಿ ಚೆನ್ನಾಗಿತ್ತು ಅಂತ ಹೇಳ್ತಾರೆ. ಐದು ರೂಪಾಯಿ ಇಡ್ಲಿ ಓಕೆ. ಆದರೆ ಐದು ಸಾವಿರ ರೂಪಾಯಿ ಇಡ್ಲಿ ಏನು ಸ್ಪೆಷಲ್ ಅಂತೀರಾ? ತಿನ್ನೋಕೆ ಆಗುವ ರೀತಿಯ ಚಿನ್ನವನ್ನು ಮೇಲೆ ಹಾಕಿ ಮಾಡಿರೋ ಇಡ್ಲಿ ಅಂತೆ!

View post on Instagram

ಯುವಕ ಮೊದಲು ರಸ್ತೆ ಬದಿಯ ಇಡ್ಲಿ ಅಂಗಡಿಯಿಂದ ಶುರು ಮಾಡ್ತಾನೆ. ಅಲ್ಲಿ ಐದು ರೂಪಾಯಿ ಇಡ್ಲಿ ತಿಂತಾನೆ. ಆಮೇಲೆ ರಾಮೇಶ್ವರಂ ಕೆಫೆಗೆ ಹೋಗಿ ಐವತ್ತು ರೂಪಾಯಿ ಇಡ್ಲಿ ತಿಂತಾನೆ. ನಂತರ ತಾಜ್ ಹೋಟೆಲ್‌ನಲ್ಲಿ 500 ರೂಪಾಯಿ ಇಡ್ಲಿ ತಿಂತಾನೆ. ಕೊನೆಯದಾಗಿ 5000 ರೂಪಾಯಿ ಇಡ್ಲಿ ತಿಂತಾನೆ. ಇದು 23 ಕ್ಯಾರೆಟ್ ತಿನ್ನಬಹುದಾದ ಚಿನ್ನದ ಇಡ್ಲಿ. ಪ್ರತಿ ಇಡ್ಲಿಗೂ 10ಕ್ಕೆ ಎಷ್ಟು ಅಂಕ ಅಂತಾನೂ ಹೇಳ್ತಾರೆ. ಅವರಿಗೆ ರಸ್ತೆ ಬದಿಯ 5 ರೂಪಾಯಿ ಇಡ್ಲಿಯೇ ತುಂಬಾ ಇಷ್ಟ ಆಗುತ್ತದೆ.

ಈ ಬೀದಿ ಬದಿಯ ಇಡ್ಲಿಗೆ ಬರೋಬ್ಬರಿ 9.7 ಅಂಕ ಕೊಡ್ತಾರೆ. ದುಬಾರಿ ಇಡ್ಲಿಗಳು ಅಷ್ಟೇನೂ ಚೆನ್ನಾಗಿಲ್ಲ ಅಂತಾನೂ ವಿಡಿಯೋದಲ್ಲಿ ತೋರಿಸ್ತಾರೆ. ಒಟ್ಟಿನಲ್ಲಿ, ಬೆಲೆಯಲ್ಲಿ ಏನೂ ಇಲ್ಲ. ಬೆಲೆ ಜಾಸ್ತಿ ಅಂದರೆ ವಾತಾವರಣ ಬದಲಾಗಬಹುದು. ಆದರೆ, ರುಚಿ ಅನ್ನೋದು ಬೇರೆ ವಿಷಯ ಅಂತ ಈ ವಿಡಿಯೋ ತೋರಿಸುತ್ತದೆ.