Asianet Suvarna News Asianet Suvarna News

ಉಗ್ರರ ಜತೆ ಸಿಕ್ಕಿಬಿದ್ದ ಡಿವೈಎಸ್ಪಿ! : ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್‌ ಬಲೆಗೆ

ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್‌ ಅಧಿ​ಕಾ​ರಿ​ಯೊ​ಬ್ಬರು ಇಬ್ಬರು ಉಗ್ರ​ಗಾ​ಮಿ​ಗಳ ಜತೆ ಒಂದೇ ಕಾರಿ​ನಲ್ಲಿ ಪ್ರಯಾ​ಣಿ​ಸು​ತ್ತಿ​ರು​ವಾಗ ಪೊಲೀ​ಸರ ಬಲೆಗೆ ಬಿದ್ದಿ​ರು​ವ ಅತ್ಯಂತ ಅಪ​ರೂ​ಪದ ಹಾಗೂ ತೀವ್ರ ಕಳ​ವ​ಳ​ಕಾರಿ ಪ್ರಕ​ರಣ ಬೆಳ​ಕಿಗೆ ಬಂದಿದೆ.

Kashmir DYSP arrested with two Hizbul terrorists
Author
Bengaluru, First Published Jan 13, 2020, 7:33 AM IST
  • Facebook
  • Twitter
  • Whatsapp

ಶ್ರೀನ​ಗ​ರ [ಜ.13]:  ಕಾಶ್ಮೀ​ರ​ದಲ್ಲಿ ಭಯೋ​ತ್ಪಾ​ದ​ಕ​ರನ್ನು ಬಗ್ಗು​ಬ​ಡಿ​ಯ​ಬೇ​ಕಾದ ಹೊಣೆ ಹೊತ್ತಿ​ರುವ, ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್‌ ಅಧಿ​ಕಾ​ರಿ​ಯೊ​ಬ್ಬರು ಇಬ್ಬರು ಉಗ್ರ​ಗಾ​ಮಿ​ಗಳ ಜತೆ ಒಂದೇ ಕಾರಿ​ನಲ್ಲಿ ಪ್ರಯಾ​ಣಿ​ಸು​ತ್ತಿ​ರು​ವಾಗ ಪೊಲೀ​ಸರ ಬಲೆಗೆ ಬಿದ್ದಿ​ರು​ವ ಅತ್ಯಂತ ಅಪ​ರೂ​ಪದ ಹಾಗೂ ತೀವ್ರ ಕಳ​ವ​ಳ​ಕಾರಿ ಪ್ರಕ​ರಣ ಬೆಳ​ಕಿಗೆ ಬಂದಿದೆ. ಉಪ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ (ಡಿ​ವೈ​ಎ​ಸ್ಪಿ) ದರ್ಜೆಯ ಆ ಅಧಿ​ಕಾ​ರಿ​ಯನ್ನು ಉಗ್ರರ ಸಮೇ​ತ ಪೊಲೀ​ಸರು ಬಂಧಿ​ಸಿದ್ದು, ತೀವ್ರ ವಿಚಾ​ರ​ಣೆಗೆ ಒಳ​ಪ​ಡಿ​ಸಿ​ದ್ದಾರೆ. ಗುಪ್ತ​ಚರ ದಳ, ರಾ, ಸಿಐ​ಡಿ, ಪೊಲೀಸ್‌, ಭದ್ರತಾ ಪಡೆ​ಗಳು ಕೂಡ ವಿಚಾ​ರ​ಣೆ​ಯ​ಲ್ಲಿ ಭಾಗ​ವ​ಹಿ​ಸಿ​ವೆ.

ದವೀಂದರ್‌ ಸಿಂಗ್‌ ಎಂಬ ಡಿವೈ​ಎ​ಸ್ಪಿಯೇ ಉಗ್ರರ ಜತೆ ಪ್ರಯಾ​ಣಿ​ಸು​ವಾಗ ಸಿಕ್ಕಿ​ಬಿ​ದ್ದಿ​ರುವ ಅಧಿ​ಕಾರಿ. ಶ್ರೀನ​ಗರ ವಿಮಾನ ನಿಲ್ದಾ​ಣ​ದ​ಲ್ಲಿನ ಅಪ​ಹ​ರಣ ನಿಗ್ರಹ ವಿಭಾ​ಗ​ದಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದ ಈತ, ಕಳೆದ ವಾರ ಕಾಶ್ಮೀ​ರಕ್ಕೆ ವಿದೇಶಿ ರಾಜ​ತಾಂತ್ರಿ​ಕರು ಭೇಟಿ ನೀಡಿ​ದಾಗ ಅವರ ಜತೆಗೇ ಇದ್ದ ಎಂಬ ಆತಂಕ​ಕಾರಿ ಮಾಹಿ​ತಿಯೂ ಬೆಳ​ಕಿಗೆ ಬಂದಿದೆ. ಈ ಅಧಿ​ಕಾರಿ ಬಗ್ಗೆ ನಮಗೆ ಶನಿ​ವಾ​ರ​ದ​ವ​ರೆ​ಗೂ ಸಣ್ಣ ಸಂದೇ​ಹವೂ ಇರ​ಲಿಲ್ಲ ಎಂದು ಕಾಶ್ಮೀ​ರದ ಐಜಿಪಿ ವಿಜಯ ಕುಮಾರ್‌ ಅವರು ಭಾನು​ವಾರ ತಿಳಿ​ಸಿ​ದ್ದಾ​ರೆ.

ಉಗ್ರರಿಗೆ ಆಶ್ರಯ: ಚಾಮರಾಜನಗರದಲ್ಲಿ ಇಬ್ಬರು ಮೌಲ್ವಿಗಳ ಬಂಧನ...

ಮಾಜಿ ಪೊಲೀಸ್‌ ಸಿಬ್ಬಂದಿ ಕೂಡ ಆಗಿ​ರು​ವ ಹಾಲಿ ಉಗ್ರ ಸೇರಿ ಇಬ್ಬರು ಭಯೋ​ತ್ಪಾ​ದ​ಕರ ಜತೆ ದವೀಂದರ್‌ ಸಿಂಗ್‌ ಸಿಕ್ಕಿ​ಬೀ​ಳು​ತ್ತಿ​ದ್ದಂತೆ, ಕಾಶ್ಮೀ​ರದ ಶೋಪಿ​ಯಾ​ನ್‌​ನಲ್ಲಿ ಅಡ​ಗಿದ್ದ ಹಲವು ಉಗ್ರರು ಪರಾ​ರಿ​ಯಾ​ಗಿ​ದ್ದಾರೆ ಎನ್ನ​ಲಾ​ಗಿ​ದೆ.

ಈ ಅಧಿ​ಕಾ​ರಿ ಉಗ್ರ​ರನ್ನು ಕಾಶ್ಮೀ​ರ​ದಿಂದ ಜಮ್ಮು​ವಿಗೆ ಕರೆ​ದೊಯ್ದು ಅವರ ಪರಾ​ರಿಗೆ ಸಹಾಯ ಮಾಡಲು ಯತ್ನಿ​ಸಿ​ದ್ದಿ​ರ​ಬ​ಹುದು ಎಂಬ ಅನು​ಮಾನ ವ್ಯಕ್ತ​ವಾ​ಗಿವೆ. ಆದರೆ ತಾನು ಉಗ್ರ​ರನ್ನು ಶರ​ಣಾ​ಗ​ತಿ ಮಾಡಿ​ಸಲು ಕರೆ ತಂದಿದ್ದೆ ಎಂದು ಡಿವೈ​ಎಸ್ಪಿ ಹೇಳಿ​ದ್ದಾರೆ ಎನ್ನ​ಲಾ​ಗಿದೆ. ಗಣ​ರಾ​ಜ್ಯೋ​ತ್ಸವ ದಿನ ಹತ್ತಿ​ರ​ವಾ​ಗು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಘೋರ ದಾಳಿಗೆ ಏನಾ​ದರೂ ಯತ್ನ ನಡೆ​ದಿತ್ತಾ ಎಂಬ ಶಂಕೆಯೂ ವ್ಯಕ್ತ​ವಾ​ಗಿದೆ. ಬಂಧ​ನದ ಬೆನ್ನಲ್ಲೇ ಡಿವೈ​ಎಸ್ಪಿ ಮನೆ​ಯಲ್ಲಿ ಪೊಲೀ​ಸರು ಶೋಧ ಕಾರ್ಯ ನಡೆ​ಸಿ​ದ್ದಾ​ರೆ.

ಸಿಕ್ಕಿ​ಬಿ​ದ್ದದ್ದು ಹೇಗೆ?​:

ನವೀ​ದ್‌ ಅಹ​ಮದ್‌ ಶಾ ಅಲಿ​ಯಾಸ್‌ ನವೀದ್‌ ಬಾಬು ಎಂಬಾ​ತ ಪೊಲೀಸ್‌ ಪೇದೆ​ಯಾ​ಗಿದ್ದ. 2017ರಲ್ಲಿ ಕರ್ತವ್ಯ ತ್ಯಜಿ​ಸಿದ ಆತ 4 ಬಂದೂ​ಕು​ಗ​ಳನ್ನು ಕದ್ದು ಹಿಜ್ಬುಲ್‌ ಮುಜಾ​ಹಿ​ದಿನ್‌ ಉಗ್ರ ಸಂಘ​ಟ​ನೆಗೆ ಸೇರ್ಪ​ಡೆ​ಯಾ​ಗಿ​ದ್ದ. ಪೊಲೀಸ್‌ ಸಿಬ್ಬಂದಿ, ನಾಗ​ರಿ​ಕರ ಹತ್ಯೆ ಪ್ರಕ​ರ​ಣ​ಗ​ಳಲ್ಲಿ ಭಾಗಿ​ಯಾ​ಗಿ​ದ್ದ. ಹಲವು ಪೊಲೀಸ್‌ ಪ್ರಕ​ರ​ಣ​ಗ​ಳಲ್ಲಿ ಬೇಕಾ​ಗಿ​ದ್ದ.

ನವೀ​ದ್‌ ಹಾಗೂ ಮತ್ತೊಬ್ಬ ಉಗ್ರ​ಗಾಮಿ ಶನಿ​ವಾ​ರ ಜಮ್ಮುವಿನ ಕಡೆಗೆ ಕಾರಿ​ನಲ್ಲಿ ತೆ​ರ​ಳು​ತ್ತಿ​ರುವ ಖಚಿತ ಮಾಹಿತಿ ಪೊಲೀ​ಸ​ರಿಗೆ ಲಭ್ಯ​ವಾ​ಯಿತು. ನಾಕಾ ಬಂದಿ ಹಾಕಿ ಐ10 ಕಾರೊಂದನ್ನು ತಪಾ​ಸಣೆ ಮಾಡಿ​ದಾಗ ಪೊಲೀ​ಸ​ರಿಗೆ ಅಚ್ಚರಿ ಕಾದಿತ್ತು. ಅದ​ರಲ್ಲಿ ಉಗ್ರರ ಜತೆಗೆ ಹಾಲಿ ಡಿವೈ​ಎಸ್ಪಿ ದವಿಂದರ್‌ ಸಿಂಗ್‌ ಕೂಡ ಇದ್ದರು. ಮೂವ​ರನ್ನೂ ಪೊಲೀ​ಸರು ಬಂಧಿ​ಸಿ​ದ​ರು. ಇದೇ ಕಾರಿ​ನಲ್ಲಿ ಉಗ್ರ ಪರ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ವಕೀಲ ಕೂಡ ಸಿಕ್ಕಿ​ಬಿ​ದ್ದಿ​ದ್ದಾನೆ ಎಂದು ಪೊಲೀ​ಸರು ಮಾಹಿತಿ ನೀಡಿ​ದ್ದಾ​ರೆ.

ಉಗ್ರರ ಜತೆ ಬಂಧ​ನ​ಕ್ಕೊ​ಳ​ಗಾ​ಗಿ​ರುವ ಡಿವೈ​ಎಸ್ಪಿ ದವಿಂದರ್‌ ಸಿಂಗ್‌ ಅವರು 1990ರಿಂದಲೂ ಕಾಶ್ಮೀ​ರ​ದಲ್ಲಿ ಉಗ್ರ ನಿಗ್ರಹ ಕಾರ್ಯಾ​ಚ​ರ​ಣೆ​ಯಲ್ಲಿ ಭಾಗ​ವ​ಹಿ​ಸಿ​ದ್ದಾರೆ. ಇದೀಗ ಅವರೇ ಉಗ್ರರ ಜತೆ ಸಿಕ್ಕಿ​ಬಿ​ದ್ದಿ​ರು​ವುದು ಪೊಲೀ​ಸ​ರಿಗೂ ಅಚ್ಚ​ರಿಗೆ ಕಾರ​ಣ​ವಾ​ಗಿ​ದೆ.

Follow Us:
Download App:
  • android
  • ios