ಚಾಮರಾಜನಗರ, [ಜ.12]: ಶಂಕಿತ ಉಗ್ರರಿಗೆ ಆಶ್ರಯ ನೀಡಿ, ಉಗ್ರರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಶಂಕೆಯ ಹಿನ್ನಲೆಯಲ್ಲಿ ಚಾಮರಾಜನಗರದಲ್ಲಿ ಇಬ್ಬರು ಮುಸ್ಲಿಂ ಮೌಲ್ವಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತರ ಹೆಸರು, ವಿವರ ಮಾತ್ರ ತಿಳಿದುಬಂದಿಲ್ಲ. ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಶಂಕಿತ ಭಯೋತ್ಪಾದಕರೊಂದಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕೇರಳದ ಮೂವರು ಶಂಕಿತ ಉಗ್ರರನ್ನು ಭಯೋತ್ಪಾದಕ ನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.

ದ. ಭಾರತದಲ್ಲಿ ಉಗ್ರ ಜಾಲ, ಶಂಕಿತ ಉಗ್ರರು ಬಿಚ್ಚಿಟ್ರು ಸ್ಫೋಟಕ ಸತ್ಯ! 

ಬಂಧಿತರಿಂದ ಪೊಲೀಸರು ವಿಚಾರಣೆಗೊಳಪಡಿಸಿದಾಗ ತಾವು ತಂಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು, ಇಬ್ಬರು ಮೌಲ್ವಿಗಳನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಮತ್ತೊಂದೆಡೆ ಕೇರಳದ ಕಣ್ಣೂರಿನಲ್ಲಿ ಜಿಹಾದಿಗಳಿಗೆ ಟ್ರೈನಿಂಗ್ ನೀಡಿದ್ದು RSS ನಾಯಕರ ಹತ್ಯೆಗೆ ತರಬೇತಿ ನೀಡಲಾಗುತ್ತಿದೆ ಎನ್ನು ವ ಸ್ಫೋಟ ಮಾಹಿತಿ ಸಿಕ್ಕಿದೆ. ಇದರಲ್ಲಿ ಬೆಂಗಳೂರಿನ ಮೂವರು ಯುವಕರು ಸಹ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಭಯೋತ್ಪಾದಕ ಜಾಲ ಹಬ್ಬಿಕೊಳ್ಳುತ್ತಿದೆ.