ಬಿಷ್ಣೋಯಿ ಕೊಂದರೆ ₹ 1,11,11,111 ಬಹುಮಾನ: ಕರ್ಣಿ ಸೇನೆ

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಹತ್ಯೆಗೈಯ್ಯುವ ಪೊಲೀಸರಿಗೆ 1,11,11,111 ರು. ನೀಡುವುದಾಗಿ ಕರ್ಣಿ ಸೇನೆ ನಾಯಕ ರಾಜ್‌ ಶೆಖಾವತ್‌ ಘೋಷಣೆ ಮಾಡಿದ್ದಾರೆ.

Karni Sena s Cash Offer For Lawrence Bishnoi Encounter mrq

ಜೈಪುರ: ಪ್ರಸ್ತುತ ಗುಜರಾತ್‌ನಲ್ಲಿ ಜೈಲುವಾಸ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯುವ ಪೊಲೀಸರಿಗೆ 1,11,11,111 ರು. ನೀಡುವುದಾಗಿ ರಜಪೂತರ ಕ್ಷತ್ರಿಯ ಕರ್ಣಿ ಸೇನೆ ಘೋಷಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಬಿಷ್ಣೋಯಿ ಬಂಟರು ರಜಪೂತ ನಾಯಕ ಸುಖದೇವ್‌ ಸಿಂಗ್‌ ಗೊಗಾಮೆಡಿ ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಸೇನೆ ನಾಯಕ ರಾಜ್‌ ಶೆಖಾವತ್‌ ಈ ಘೋಷಣೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗೊಗಾಮೆಡಿ ಜೈಪುರದ ತನ್ನ ಮನೆಯಲ್ಲಿ ಚಹಾ ಸೇವಿಸುತ್ತಿದ್ದಾಗ 2 ಬಂದೂಕುಧಾರಿಗಳು ಹಾಡಹಗಲೇ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇದರ ಬೆನ್ನಲ್ಲೇ, ಬಿಷ್ಣೋಯಿ ಜತೆಗಾರ ಹಾಗೂ ಗೋಲ್ಡಿ ಬ್ರಾರ್‌ ಗ್ಯಾಂಗ್‌ನ ಸದಸ್ಯ ರೋಹಿತ್‌ ಗೊದಾರಾ ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ. ಇದು ರಾಜಸ್ಥಾನದಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿ, ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆಗಳು ಭುಗಿಲೆದ್ದವು.

ಬಿಷ್ಣೋಯಿ ಭಯಕ್ಕೆ ದುಬೈನಿಂದ ಹೊಸ ಕಾರ್ ತರಿಸಿಕೊಂಡ ನಟ ಸಲ್ಮಾನ್ ಖಾನ್!

ಪ್ರಕರಣ ಸಂಬಂಧ ಅಶೋಕ್‌ ಮೇಘ್ವಾಲ್‌ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು, ರಾಜಸ್ಥಾನ ಹಾಗೂ ಹರ್ಯಾಣದ 31 ಕಡೆಗಳಲ್ಲಿ ಶೋಧ ನಡೆಸಿ ಪಿಸ್ತೂಲು ಸಂಗ್ರಹ, ಮದ್ದುಗುಂಡು, ಮೊಬೈಲ್‌, ಸಿಮ್‌ಗಳು, ಡಿಜಿಟಲ್‌ ವಿಡಿಯೋ ರೆಕಾರ್ಡರ್‌ ಹಾಗೂ ಹಣಕಾಸು ಸಂಬಂಧಿತ ಕಡತಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಗೊದಾರಾ ಪತ್ತೆ ಇನ್ನೂ ಸಾಧ್ಯವಾಗಿಲ್ಲ.

ಬಿಷ್ಣೋಯಿ ಗ್ಯಾಂಗ್‌ ನೆಕ್ಸ್ಟ್‌ ಟಾರ್ಗೆಟ್‌ ರಾಹುಲ್‌ ಗಾಂಧಿ ಎಂದಿದ್ದ ನಟ, ವಿರೋಧ ಬಳಿಕ ಕ್ಷಮೆಯಾಚನೆ

Latest Videos
Follow Us:
Download App:
  • android
  • ios