ಬಿಷ್ಣೋಯಿ ಭಯಕ್ಕೆ ದುಬೈನಿಂದ ಹೊಸ ಕಾರ್ ತರಿಸಿಕೊಂಡ ನಟ ಸಲ್ಮಾನ್ ಖಾನ್!

ಈ ಕಾರ್​ನಲ್ಲಿ ಅದೆಂಥಾ ತಂತ್ರಜ್ಞಾನ ಇದೆ ಅಂದ್ರೆ ಯಾವುದೇ ಸ್ಪೋಟಕಗಳು ಸನಿಹದಲ್ಲಿದ್ರೆ ತಾನೇ ತಾನಾಗಿ ಇದು ಅಲರ್ಟ್ ಮಾಡುತ್ತೆ. ಒಂದು ವೇಳೆ ಕಾರ್​ ಕೆಳಗೆ ಬಾಂಬ್ ಇಟ್ಟು ಸ್ಪೋಟಿಸಿದ್ರೂ ಒಳಗಿರುವವರ ಪ್ರಾಣಕ್ಕೆ ಯಾವುದೇ ಅಪಾಯವಾಗೋದಿಲ್ಲ..

Salman Khan purchased new car from dubai from Lawrence Bishnoi threats srb

ಲಾರೆನ್ಸ್ ಬಿಷ್ಣೋಯ್ ಕೊಡ್ತಿರೋ ಕಾಟಕ್ಕೆ ತತ್ತರಿಸಿ ಹೋಗಿರೋ ಸಲ್ಮಾನ್ ಖಾನ್, ಅದ್ಯಾವಾಗ ತನ್ನ ಮೇಲೆ ಅಟ್ಯಾಕ್ ಆಗುತ್ತೋ ಅಂತ ಭಯಭೀತರಾಗಿದ್ದಾರೆ. ಅದ್ರಲ್ಲೂ ತಮ್ಮ ಸ್ನೇಹಿತ-ಮಾಜಿ ಶಾಸಕ ಬಾಬಾ ಸಿದ್ದಿಕಿ ಹತ್ಯೆ ನಂತ್ರ ಸಲ್ಮಾನ್ ಖಾನ್ ಫುಲ್ ಅಲರ್ಟ್ ಅಗಿದ್ದಾರೆ. ಸದ್ಯ ಸಲ್ಮಾನ್ ದುಬೈನಿಂದ ಹೊಚ್ಚ ಹೊಸ ಕಾರ್​ವೊಂದನ್ನ ತರಿಸಿದ್ದಾರೆ. ಅದ್ರಲ್ಲಿರೋ ಸೇಫ್ಟಿ ಫೀಚರ್ಸ್ ಕೇಳಿದ್ರೆ ಖುದ್ದು ಯಮ ಕೂಡ ಅದರತ್ತ ಸುಳಿಯಲಾರ.

ಸಲ್ಮಾನ್​ಗೆ ತಪ್ಪದ ಜೀವಭಯ.. ಸೇಫ್ಟಿಗೆ ಹೊಸ ಪ್ಲ್ಯಾನ್..!
ಯೆಸ್ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್​ಗೆ ಅದ್ಯಾಪರಿಯ ಪ್ರಾಣಭೀತಿ ಕಾಡ್ತಾ ಇದೆ ಅಂದ್ರೆ ಮನೆಯಿಂದ ಹೊರಬರೋದಕ್ಕೆ ಅವರು ಹಿಂದೇಟು ಹಾಕ್ತಾ ಇದ್ದಾರೆ. ಸರ್ಕಾರ ಸಲ್ಮಾನ್​ಗೆ ವೈ ಪ್ಲಸ್ ಭದ್ರತೆಯನ್ನ ಕೊಟ್ಟಿದೆ. ಬರೊಬ್ಬರಿ 25 ಸಿಬ್ಬಂದಿ, ಇಬ್ಬರು ಎನ್.ಎಸ್.ಜಿ ಕಮಾಂಡೋಸ್ ಸಲ್ಮಾನ್ ಜೀವ ಕಾಯೋದಕ್ಕೆ ನೇಮಕ ಆಗಿದ್ದಾರೆ. ಇದಲ್ಲದೇ ಸಲ್ಮಾನ್​ಗೆ ಖಾಸಗಿ ಬಾಡಿಗಾರ್ಡ್ಸ್​ ಕೂಡ ಇದ್ದಾರೆ. 

ಖ್ಯಾತ ನಿರ್ಮಾಪಕ ಕೆ ಮಂಜು ಆಸ್ಪತ್ರೆಗೆ ದಾಖಲು; ಹೃದಯ ತಪಾಸಣೆ ಮಾಡಿದ ವೈದ್ಯರು!

ಇಷ್ಟೆಲ್ಲಾ ಸೆಕ್ಯೂರಿಟಿ ಇದ್ದರೂ ಸಲ್ಮಾನ್​ಗೆ ಜೀವಭಯ ಕಾಡ್ತಾ ಇದೆ. ಅದ್ರಲ್ಲೂ ಮಹಾರಾಷ್ಟ್ರ ಮಾಜಿ ಶಾಸಕ, ಸಲ್ಲು ಆಪ್ತ ಬಾಬಾ ಸಿದ್ದಿಕಿ ಮರ್ಡರ್ ನಂತ್ರ ಸಲ್ಮಾನ್ ಮತ್ತಷ್ಟು ಭಯಗೊಂಡಿದ್ದಾರೆ. ಅದ್ಯಾವಾಗ ಆದ್ಯಾವ ಮೂಲೆಯಿಂದ ಗುಂಡು ಸಿಡಿಯುತ್ತೋ.. ತನ್ನ ಎದೆಯನ್ನ ಸೀಳುತ್ತೋ ಅಂತ ಸಲ್ಮಾನ್ ಟೆನ್ಶನ್ ಆಗಿದ್ದಾರೆ. ಅದಕ್ಕಂತ್ಲೇ ಸದ್ಯ ತಮ್ಮ ಸುರಕ್ಷಿತ ಪ್ರಯಾಣಕ್ಕಾಗಿ  ಹೊಚ್ಚ ಹೊಸ ಕಾರ್​ವೊಂದನ್ನ ತರಿಸಿಕೊಂಡಿದ್ದಾರೆ.
 
ಸಲ್ಮಾನ್​​ ಸೇಫ್ಟಿಗೆ 2Cr ಕಾರ್.. ಯಮನಿಗೂ ಇಲ್ಲಿ  ನೋ ಎಂಟ್ರಿ..!
ಈ ಹಿಂದೆ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನ ಬಳಸ್ತಾ ಇದ್ದ ಸಲ್ಮಾನ್​ ಅದಕ್ಕೆ ಬುಲೆಟ್ ಪ್ರೂಫ್ ತಂತ್ರಜ್ಞಾನ ಅಳವಡಿಸಿಕೊಂಡಿದ್ರು. ಆದ್ರೆ ಬಿ ಗ್ಯಾಂಗ್​ನಿಂದ ಆಗೋ ಅಟ್ಯಾಕ್​ನಿಂದ ಇದು ಸೇಫ್ ಅಲ್ಲ ಅಂದುಕೊಂಡಿರೋ ಸಲ್ಮಾನ್ ದುಬೈನಿಂದ ಹೊಚ್ಚ ಬುಲೆಟ್ ಪ್ರೂಫ್ ಕಾರ್​​ನ ಆರ್ಡರ್ ಮಾಡಿದ್ದಾರೆ. ನಿಸಾನ್ ಕಂಪನಿಯ ಈ ಎಸ್.ಯು.ವಿ ಪೆಟ್ರೋಲ್ ಕಾರ್ (SUV) ಬೆಲೆ ಭರ್ತಿ 2 ಕೋಟಿ. 

ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ ಬೆನ್ನು ನೋವಿಗೆ ಬೆಂಗಳೂರಲ್ಲಿ ಸರ್ಜರಿ!?

ಗುಂಡು ನಿರೋಧಕ ಕಿಟಕಿ ಗಾಜು, ಅಲರ್ಟ್ ಇಂಡಿಕೇಟರ್..!
ಹೌದು ಈ ಕಾರ್​​ನಲ್ಲಿರೋ ಸೇಫ್ಟಿ ಫೀಚರ್ಸ್ ಹೇಗಿವೆ ಅಂದ್ರೆ ಇದರೊಳಗೆ ಸಾಕ್ಷಾತ್ ಯಮನಿಗೂ ಎಂಟ್ರಿ ಕೊಡೋದಕ್ಕೆ ಅಸಾಧ್ಯ ಅನ್ನಬಹುದು. ಗುಂಡು ನಿರೋಧಕ ಕಿಟಕಿ ಗಾಜುಗಳನ್ನ ಹೊಂದಿರುವ ಈ ಕಾರ್ ಮೇಲೆ ಎ.ಕೆ 47ನಿಂದ ಫೈರಿಂದ ನಡೆದರೂ ಒಳಗಿರೋರಿಗೆ ಒಂದು ಸಣ್ಣ ಚೂರು ಕೂಡ ತಾಕೋದಿಲ್ಲ.

ಇನ್ನೂ ಈ ಕಾರ್​ನಲ್ಲಿ ಅದೆಂಥಾ ತಂತ್ರಜ್ಞಾನ ಇದೆ ಅಂದ್ರೆ ಯಾವುದೇ ಸ್ಪೋಟಕಗಳು ಸನಿಹದಲ್ಲಿದ್ರೆ ತಾನೇ ತಾನಾಗಿ ಇದು ಅಲರ್ಟ್ ಮಾಡುತ್ತೆ. ಒಂದು ವೇಳೆ ಕಾರ್​ ಕೆಳಗೆ ಬಾಂಬ್ ಇಟ್ಟು ಸ್ಪೋಟಿಸಿದ್ರೂ ಒಳಗಿರುವವರ ಪ್ರಾಣಕ್ಕೆ ಯಾವುದೇ ಅಪಾಯವಾಗೋದಿಲ್ಲ.

ಬಿಗ್ ಬಾಸ್​ ಸೆಟ್​​ನಲ್ಲಿ ಸಲ್ಮಾನ್ ಖಾನ್​ ಕಾವಲಿಗೆ 60 ಜನ..!
ಸದ್ಯ ಬಿಗ್ ಬಾಸ್ ಹಿಂದಿ ಅವತರಣಿಕೆಯ ಶೂಟಿಂಗ್​ನಲ್ಲಿರೋ ಸಲ್ಮಾನ್​ಗೆ ಒಬ್ಬರಲ್ಲ ಇಬ್ಬರಲ್ಲ ಬರೊಬ್ಬರಿ 60 ಜನ ಸೆಕ್ಯೂರಿಟಿ ನಿಯೋಜನೆ ಗೊಂಡಿದ್ದಾರೆ. ಸಲ್ಮಾನ್​ಗೆ ಸರ್ಕಾರ ಕೊಟ್ಟಿರೋ ಭದ್ರತಾ ಪಡೆ, ಖಾಸಗಿ ಭದ್ರತಾ ಪಡೆ ಜೊತೆಗೆ ಬಿಗ್ ಬಾಸ್​ನಿಂದಲೂ ಸಪರೇಟ್ ಆಗಿ ಸೆಕ್ಯೂರಿಟಿ ಗಾರ್ಡ್ಸ್ ನೀಡಲಾಗಿದೆ.

ಹನುಮಾನ್ ಅವತಾರ ಎತ್ತಲಿರುವ ರಿಷಬ್ ಶೆಟ್ಟಿ; ಕಾಂತಾರಾ ಪ್ರೀಕ್ವೆಲ್‌ಗೂ ಮೊದಲೇನಾ?

ಅಲ್ಲಿಗೆ ಸಲ್ಮಾನ್ ಖಾನ್ ಅದೆಷ್ಟರ ಮಟ್ಟಿಗೆ ಪ್ರಾಣಭೀತಿಯಿಂದ ತತ್ತರಿಸಿದ್ದಾರೆ ಅನ್ನೋದು ಗೊತ್ತಾಗುತ್ತೆ. ಟ್ರಾವೆಲ್​ನಲ್ಲಿರೋವಾಗ ಬುಲೆಟ್ ಪ್ರೂಫ್ ಕಾರ್ ಮತ್ತು ಬೆಂಗಾವಲು ವಾಹನಗಳು. ಶೂಟಿಂಗ್​ನಲ್ಲಿರೋವಾಗ ಸುತ್ತ ಗನ್ ಹಿಡಿದ ಸೆಕ್ಯೂರಿಟಿಗಳ ಕೋಟೆ ಕಟ್ಟಿಕೊಂಡಿದ್ದಾರೆ. ಇದೆಲ್ಲವನ್ನೂ ದಾಟಿ ಅದ್ಹೇಗೆ ಬರ್ತಾನೋ ಬರಲಿ ಅಂತ ಸಾಕ್ಷಾತ್ ಯಮರಾಜನಿಗೆ ಸವಾಲ್ ಹಾಕ್ತಾ ಇದ್ದಾರೆ..!

Latest Videos
Follow Us:
Download App:
  • android
  • ios