Asianet Suvarna News Asianet Suvarna News

ಅಪಘಾತ ಬ್ಲಾಕ್‌ಸ್ಪಾಟ್‌: ದೇಶಕ್ಕೇ ಕರ್ನಾಟಕ ನಂ.3..!

ದೇಶದ ವಿವಿಧ ರಾಜ್ಯಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 5803 ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ತಮಿಳುನಾಡು (784), ಪಶ್ಚಿಮ ಬಂಗಾಳ (701) ಮೊದಲ ಎರಡು ಸ್ಥಾನದಲ್ಲಿವೆ ಎಂದು ಹೇಳಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಮಾಹಿತಿ ನೀಡಿದ್ದರೂ, ಕರ್ನಾಟಕದ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆಯನ್ನು ನೀಡಿಲ್ಲ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ 

Karnataka No. 3 in India of Accident Blackspot grg
Author
First Published Dec 22, 2023, 4:11 AM IST

ನವದೆಹಲಿ(ಡಿ.22):  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿಹೆಚ್ಚು ಅಪಘಾತ ಸಂಭವಿಸುವ ಬ್ಲಾಕ್‌ ಸ್ಪಾಟ್‌ಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಈ ಕುರಿತು ಗುರುವಾರ ಲೋಕಸಭೆಗೆ ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ, ದೇಶದ ವಿವಿಧ ರಾಜ್ಯಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 5803 ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ತಮಿಳುನಾಡು (784), ಪಶ್ಚಿಮ ಬಂಗಾಳ (701) ಮೊದಲ ಎರಡು ಸ್ಥಾನದಲ್ಲಿವೆ ಎಂದು ಹೇಳಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಮಾಹಿತಿ ನೀಡಿದ್ದರೂ, ಕರ್ನಾಟಕದ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆಯನ್ನು ನೀಡಿಲ್ಲ.

ಅಫಜಲಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ಏನಿದು ಹೆದ್ದಾರಿ ಬ್ಲಾಕ್‌ ಸ್ಪಾಟ್‌?

ಕಳೆದ 3 ವರ್ಷಗಳಲ್ಲಿ ಕನಿಷ್ಠ 5 ಅಪಘಾತಗಳು ಸಂಭವಿಸಿದ ಹಾಗೂ ಇವುಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸುಮಾರು 500 ಮೀ. ಉದ್ದದ ಪ್ರದೇಶಗಳನ್ನು‘ಬ್ಲಾಕ್‌ ಸ್ಪಾಟ್‌’ ಎಂದು ಸರ್ಕಾರ ಗುರುತಿಸಿದೆ. ದೇಶದಲ್ಲಿ ಇಂತಹ 5,803 ಬ್ಲಾಕ್‌ ಸ್ಪಾಟ್‌ಗಳು ಪತ್ತೆಯಾಗಿವೆ.

Follow Us:
Download App:
  • android
  • ios