Asianet Suvarna News Asianet Suvarna News

ಕರ್ನಾಟಕಕ್ಕೆ ಗುಡ್ ನ್ಯೂಸ್, ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಹೊಯ್ಸಳ ದೇವಾಲಯ ಸೇರ್ಪಡೆ!

ಕರ್ನಾಟಕ ಸಾಂಸ್ಕೃತಿಕ ಶ್ರೀಮಂತಿಗೆ  ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಇದೀಗ ಕನ್ನಡಿಗರ ಹೆಮ್ಮೆ ಡಬಲ್ ಆಗಿದೆ. ಯುನೆಸ್ಕೋ  ವಿಶ್ವಪಾರಂಪರಿಕ ಪಟ್ಟಿ ಘೋಷಣೆ ಮಾಡಿದ್ದು, ಕರ್ನಾಟಕ ಹೊಯ್ಸಳ ದೇವಾಲಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

Karnataka Hoysala temple inscribed on UNESCO world heritage site ckm
Author
First Published Sep 18, 2023, 8:46 PM IST

ನವದೆಹಲಿ(ಸೆ.18) ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳು ವಾಸ್ತುಶಿಲ್ಪಗಳ ರಾಜ ಎಂದೇ ಗುರುತಿಸಿಕೊಂಡಿದೆ. ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡು, ಸೋಮಾನಾಥಪುರದಲ್ಲಿರುವ ಹೊಯ್ಸಳರ ದೇವಾಲಯದ ಗರಿಮೆ ದುಪಟ್ಟಾಗಿದೆ. ಯುನೆಸ್ಕೋ ಘೋಷಿಸಿದ ವಿಶ್ವಪಾರಂಪರಿಕ ತಾಣ ಪಟ್ಟಿಯಲ್ಲಿ ಇದೀಗ ಕರ್ನಾಟಕ ಹೊಯ್ಸಳರ ದೇವಾಲಯ ಸ್ಥಾನ ಪಡೆದಿದೆ. 2014ರಿಂದ ವಿಶ್ವಪಾರಂಪರಿಕ ತಾಣ ಸಂಭಾವ್ಯ ಪಟ್ಟಿಯಲ್ಲಿದ್ದ ಹೊಯ್ಸಳ ದೇವಾಲಯ ಕೊನೆಗೂ ಯನೆಸ್ಕೋ ಮಾನ್ಯತೆಗೆ ಒಳಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಯುನೆಸ್ಕೋ, ಭಾರತಕ್ಕೆ ಅಭಿನಂದನೆಗಳು, ಹೊಯ್ಸಳ ವಿಶಿಷ್ಠ ಹಾಗೂ ವಿಶೇಷ ವಾಸ್ತುಶಿಲ್ಪದ ಕೆತ್ತನೆಗಳು ಇದೀಗ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಅಚ್ಚೊತ್ತಿದೆ ಎಂದು ಟ್ವೀಟ್ ಮಾಡಿದೆ.  ಈ ಮೂಲಕ ಭಾರತದ 42 ಸ್ಮಾರಕಗಳು, ದೇವಾಲಯಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿ ಸೇರಿಕೊಂಡ ಠಾಗೋರ್ ಶಾಂತಿನಿಕೇತನ ಮನೆ!

12 ರಿಂದ 13ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಗಳು ವಾಸ್ತುಶಿಲ್ಪಗಳಿಂದಲೇ ವಿಶ್ವವಿಖ್ಯಾತಿಯಾಗಿದೆ. ಕರ್ನಾಟಕದ ಎಲ್ಲಾ ಹೊಯ್ಸಳ ದೇವಾಲಯಗಳನ್ನು  ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುತ್ತಿದೆ. ಅತ್ಯಂತ ವಿಶೇಷ ವಾಸ್ತುಶಿಲ್ಪದ ದೇವಾಲಯ ಇದಾಗಿದೆ.  ಹೊಯ್ಸಳರು 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶಜರು. ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ್ದಾರೆ. 

 

 

ಹೊಯ್ಸಳ ದೇವಾಲಯಗಳು ಬಹಳ ಪ್ರಬಲವಾಗಿವೆ. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿನ ಶಿಲ್ಪಕಲೆಗಳು ಅಪ್ರತಿಮವಾಗಿವೆ. ಸ್ಮಾರಕಗಳ ನಿರ್ಮಾಣಕ್ಕೆ 127 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ ಅನ್ನೋದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಕಲ್ಲಿನ ಕೆತ್ತನೆಗಳು ತುಂಬಾ ಸೂಕ್ಷ್ಮವಾಗಿವೆ. 

ಎಲ್ಲೋರ ಗುಹೆಗಳ ಸ್ಥಿರತೆಯ ರಹಸ್ಯ ಅನ್ವೇಷಣೆ: ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ಪೂರಕ

ನಿನ್ನೆ ನಡೆದ ಯುನೆಸ್ಕೋ ಮೊದಲ ಸಭೆಯಲ್ಲಿ ರಾಷ್ಟ್ರಗೀತೆ ‘ಜನಗಣಮನ’ದ ರಚನೆಕಾರ ರವೀಂದ್ರನಾಥ ಠ್ಯಾಗೋರ್‌ ಸ್ಥಾಪಿಸಿರುವ ಶಾಂತಿನಿಕೇತನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಿತ್ತು.. ಇದನ್ನು ಖುದ್ದು ಯುನೆಸ್ಕೋ ತನ್ನ ಟ್ವೀಟರ್‌ ಖಾತೆಯಲ್ಲಿ ಬಹಿರಂಗಪಡಿಸಿತ್ತು. ಇದರಿಂದಾಗಿ ದೇಶದಲ್ಲಿರುವ ಒಟ್ಟು ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ 41ಕ್ಕೆ ಏರಿಕೆಯಾಗಿತ್ತು. ಹೊಯ್ಸಳ ದೇವಾಲ ಸೇರ್ಪಡೆಯೊಂದಿಗೆ ಈ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.  ಶಾಂತಿನಿಕೇತನವನ್ನು ರವೀಂದ್ರನಾಥ ಟಾಗೋರ್‌ನವರ ತಂದೆ ಮಹರ್ಷಿ ದೇವೇಂದ್ರನಾಥ್‌ರವರು 1863ರಲ್ಲಿ ಪಶ್ಚಿಮ ಬಂಗಾಳದ ಬೀರ್‌ಭೂಂನಲ್ಲಿ ಸ್ಥಾಪಿಸಿದ್ದರು. ನಂತರ ರವೀಂದ್ರನಾಥ್‌ ಟಾಗೋರರು ಮುನ್ನಡೆಸಿಕೊಂಡು ಅದನ್ನು ವಿಶ್ವ ಭಾರತಿ ಎಂಬ ವಿಶ್ವ ವಿದ್ಯಾಲಯವನ್ನಾಗಿಸಿದರು.

Follow Us:
Download App:
  • android
  • ios