Asianet Suvarna News Asianet Suvarna News

ಆನ್‌ಲೈನ್ ಗೇಮಿಂಗ್ ವಿರುದ್ಧದ ಕಾನೂನಿಗೆ ಕರ್ನಾಟಕ ಹೈಕೋರ್ಟ್ ತಡೆ

  • ಆನ್‌ಲೈನ್ ಗೇಮಿಂಗ್ ವಿರುದ್ಧದ ಕಾನೂನಿಗೆ ತಡೆ
  •  ಹೊಸ ಕಾನೂನನ್ನು ತರಲು ಯಾವುದೇ ಅಡ್ಡಿ ಇಲ್ಲ
  • ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಿಂದ ತೀರ್ಪು
Karnataka High Court strikes down law against online gaming akb
Author
Bangalore, First Published Feb 14, 2022, 1:24 PM IST | Last Updated Feb 14, 2022, 1:24 PM IST

ಬೆಂಗಳೂರು(ಫೆ.14):  ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಂಬ್ಲಿಂಗ್‌ ಮತ್ತು ಬೆಟ್ಟಿಂಗ್‌ ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಹೊಸ ಕಾಯಿದೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ಹೊಸ ಕಾನೂನು ಆನ್‌ಲೈನ್ ಆಟಗಳನ್ನು ಒಳಗೊಂಡಂತೆ ಬೆಟ್ಟಿಂಗ್ ಮತ್ತು ಆಟವಾಡುವುದನ್ನು ನಿಷೇಧಿಸುವ ಜೊತೆ ಅಪರಾಧ ಎಂದು ಪರಿಗಣಿಸಿತ್ತು. ಈಗ ಹೈಕೋರ್ಟ್‌ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ, 2021 ರ ನಿಬಂಧನೆಗಳನ್ನು ರದ್ದುಗೊಳಿಸಿದ್ದು, ಆನ್‌ಲೈನ್‌ ಗ್ಯಾಂಬ್ಲಿಂಗ್‌ ಮತ್ತು ಬೆಟ್ಟಿಂಗ್‌ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. 

ಆದರೆ, ಜೂಜಾಟದ ವಿರುದ್ಧ ಸಂವಿಧಾನಕ್ಕೆ ಅನುಗುಣವಾಗಿ ಹೊಸ ಕಾನೂನನ್ನು ತರಲು ಶಾಸಕಾಂಗದ ಮಾರ್ಗದಲ್ಲಿ ಈ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ(Ritu Raj Awasthi) ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ( Krishna S Dixit) ಅವರಿದ್ದ  ವಿಭಾಗೀಯ ಪೀಠವು ಈ  ತೀರ್ಪು ಪ್ರಕಟಿಸಿದೆ. ಇಡೀ ಕಾಯಿದೆಯನ್ನು ಹೊಡೆದು ಹಾಕಿಲ್ಲ, ಕೇವಲ ಆಕ್ಷೇಪಾರ್ಹ ನಿಬಂಧನೆಗಳನ್ನು ಮಾತ್ರ ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆದರೆ, ಜೂಜಾಟದ ವಿರುದ್ಧ ಸಂವಿಧಾನಕ್ಕೆ ಅನುಗುಣವಾಗಿ ಹೊಸ ಕಾನೂನನ್ನು ತರಲು ಶಾಸಕಾಂಗದ ಮಾರ್ಗದಲ್ಲಿ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಅಕ್ರಮ ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ಶೀಘ್ರ ಕಾನೂನು!

ಅಕ್ಟೋಬರ್ 5, 2021 ರಂದು ಜಾರಿಯಾದ ತಿದ್ದುಪಡಿ ಕಾಯಿದೆಯು ಜೂಜು ಅಥವಾ ಬೆಟ್ಟಿಂಗ್ ಅನ್ನು ನಿಷೇಧಿಸುತ್ತದೆ.  ಇದು ಯಾವುದೇ ಆಟಕ್ಕೆ ಸಂಬಂಧಿಸಿದಂತೆ ವರ್ಚುವಲ್ ಕರೆನ್ಸಿ ಮತ್ತು ಹಣದ ಎಲೆಕ್ಟ್ರಾನಿಕ್ ವರ್ಗಾವಣೆಯನ್ನು ಸಹ ನಿಷೇಧಿಸುತ್ತಿತ್ತು.  ಈ ತಿದ್ದುಪಡಿ ಕಾಯ್ದೆ ಉಲ್ಲಂಘಿಸಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು  1 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತಿತ್ತು. ಈ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯಲ್ಲಿ, ಈ  ಕೌಶಲ್ಯದ ಆಟಗಳು ( games of skill)ಹಣವನ್ನು ಕಳೆದುಕೊಳ್ಳುವ ಅಪಾಯವನ್ನು ಒಳಗೊಂಡಿರುತ್ತವೆಯೇ ಎಂಬುದನ್ನು ಲೆಕ್ಕಿಸದೆ ಇದು ಜೂಜು ಅಥವಾ ಬೆಟ್ಟಿಂಗ್‌ಗೆ ಸಮನಾಗಿರುವುದಿಲ್ಲ ಹಾಗಾಗಿ ನಿಷೇಧಿಸಲಾಗುವುದಿಲ್ಲ ಎಂದು ವಾದಿಸಲಾಗಿದೆ.

ಗೇಮ್‌ ಪ್ರಿಯರೇ ಗಮನಿಸಿ, ಆನ್‌ಲೈನ್‌ ಗೇಮ್‌ಗೂ ಬೀಳಲಿದೆ ಬ್ರೇಕ್?

ಈ ಕಾಯಿದೆಯನ್ನು ಅಂಗೀಕರಿಸಲು ರಾಜ್ಯವು ಶಾಸಕಾಂಗ ಅಧಿಕಾರವನ್ನು ಹೊಂದಿಲ್ಲ, ಇದು ಸುಪ್ರೀಂಕೋರ್ಟ್ ನಿಗದಿಪಡಿಸಿದ ಪೂರ್ವ ನಿದರ್ಶನಕ್ಕೆ ವಿರುದ್ಧವಾಗಿದೆ ಮತ್ತು ಸಂವಿಧಾನದ 14, 19 (1) (ಜಿ), 21 ಮತ್ತು 301 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಯಿತು. ಕೌಶಲ್ಯದ ಆಟಗಳು (ಹಣದ ಅಪಾಯವನ್ನು ಒಳಗೊಂಡಿರುವ ಅಥವಾ ಇನ್ನಾವುದೇ ರೀತಿಯಲ್ಲಿ) ಜೂಜು ಅಥವಾ ಬೆಟ್ಟಿಂಗ್‌ಗೆ ಸಮನಾಗಿರುವುದಿಲ್ಲ ಮತ್ತು ಆದ್ದರಿಂದ ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ ರಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಹಿರಿಯ ವಕೀಲ ಸಜನ್ ಪೂವಯ್ಯ (Sajan Poovayya) ಅವರು ಪ್ಲೇ ಗೇಮ್ಸ್ 247, ಹೆಡ್ ಡಿಜಿಟಲ್ (Head Digital) ಮತ್ತು ಜಂಗ್ಲೀ ಗೇಮ್ಸ್‌ ಪರ ಹಾಜರಾಗಿದ್ದರು. ಕೀಸ್ಟೋನ್ ಪಾಲುದಾರ ವ್ಯವಸ್ಥಾಪಕ ಪಾಲುದಾರ ಪ್ರದೀಪ್ ನಾಯಕ್ (Pradeep Nayak) ಪ್ರಮುಖ ಅರ್ಜಿದಾರರಾದ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಅನ್ನು ಪ್ರತಿನಿಧಿಸಿದರು.

ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ದಾವಣಗೆರೆಯ ಡಿ.ಆರ್‌. ಶಾರದಾ ಈ ಹಿಂದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಕಳೆದ ವರ್ಷ ವಿಚಾರಣೆ ನಡೆಸಿತ್ತು. ಇದಕ್ಕೂ ಮುನ್ನ ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧಿಸುವ ಕುರಿತು ಸ್ಪಷ್ಟನಿಲುವು ತಿಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶಿಸಿತ್ತು.

Latest Videos
Follow Us:
Download App:
  • android
  • ios