ರ್ವೋಚ್ಚ ನ್ಯಾಯಾಲಯದ ನೂತನ ನ್ಯಾಯಮೂರ್ತಿಗಳಾಗಿ ನೇಮಕವಾಗಿರುವ ಕನ್ನಡಿಗ ನ್ಯಾ. ಅರವಿಂದ್ ಕುಮಾರ್(Arvind Kumar) ಹಾಗೂ ನ್ಯಾ. ರಾಜೇಶ್ ಬಿಂದಾಲ್ (Rajesh Bindal)ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ನೂತನ ನ್ಯಾಯಮೂರ್ತಿಗಳಾಗಿ ನೇಮಕವಾಗಿರುವ ಕನ್ನಡಿಗ ನ್ಯಾ. ಅರವಿಂದ್ ಕುಮಾರ್(Arvind Kumar) ಹಾಗೂ ನ್ಯಾ. ರಾಜೇಶ್ ಬಿಂದಾಲ್ (Rajesh Bindal)ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯ ನ್ಯಾ. ಡಿ.ವೈ.ಚಂದ್ರಚೂಡ್ (DY Chandrachud) ಅವರಿಂದ ಪ್ರಮಾಣವಚನ ಬೋಧಿಸಲಿದ್ದಾರೆ. ನ್ಯಾ. ಅರವಿಂದ್ ಕುಮಾರ್ ಅವರು ಕರ್ನಾಟಕ ಮೂಲದವರಾಗಿದ್ದು, ನ್ಯಾ. ರಾಜೇಶ್ ಬಿಂದಾಲ್ ಅವರು ಪಂಜಾಬ್ ಹರ್ಯಾಣ ಮೂಲದವರು. ಇವರ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಅನ್ವಯ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಇದರೊಂದಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 34ಕ್ಕೆ ಏರಿಕೆ ಆಗಲಿದೆ ಹಾಗೂ ಎಲ್ಲ ಸ್ಥಾನ ಭರ್ತಿ ಆದಂತಾಗಲಿದೆ.
ಗುಜರಾತ್, ಅಸ್ಸಾಂ ಸೇರಿ 4 ಹೈಕೋರ್ಟ್‌ಗೆ ಸಿಜೆ ನೇಮಕ
ಗುಜರಾತ್, ಅಸ್ಸಾಂ( Assam), ತ್ರಿಪುರ (Tripura) ಹಾಗೂ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ಗಳಿಗೆ ಭಾನುವಾರ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಗುಜರಾತ್ (Gujarat)ಹಾಗೂ ತ್ರಿಪುರದ ನೂತನ ಮುಖ್ಯ ನ್ಯಾಯಮೂರ್ತಿಗಳು ಈ ತಿಂಗಳಲ್ಲೇ ನಿವೃತ್ತಿ ಹೊಂದಲಿದ್ದಾರೆ.
ಕನ್ನಡಿಗ, ನಿವೃತ್ತ ಜಸ್ಟೀಸ್ ಎಸ್ ಅಬ್ದುಲ್ ನಜೀರ್ ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ
ಗುಜರಾತ್ ಹೈಕೋರ್ಟ್‌ಗೆ ಅದೇ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಸೋನಿಯಾ ಗಿರಿಧರ್ ಗೋಕಾನಿ (Sonia Giridhar Gokani) ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ಅವರು ಈಗ ದೇಶದ 25 ಹೈಕೋರ್ಟ್‌ಗಳ ಪೈಕಿ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾ.ಸೋನಿಯಾ ಫೆ.25ರಂದು ನಿವೃತ್ತಿಯಾಗಲಿದ್ದಾರೆ. ಗುಜರಾತ್ ಹೈಕೋರ್ಟ್‌ಗೆ ಈವರೆಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕರ್ನಾಟಕ ಮೂಲದ ನ್ಯಾ.ಅರವಿಂದ್ ಕುಮಾರ್ ಸುಪ್ರೀಂಕೋರ್ಟ್‌ಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸೋನಿಯಾ ನೇಮಕವಾಗಿದ್ದಾರೆ. ಅದೇ ರೀತಿ, ಒಡಿಶಾ ಹೈಕೋರ್ಟ್‌ನ ನ್ಯಾ.ಜಸ್ವಂತ್ ಸಿಂಗ್ ಅವರನ್ನು ತ್ರಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಅವರು ಫೆ.22ಕ್ಕೆ ನಿವೃತ್ತಿಯಾಗಲಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೂ ಆಂಧ್ರದ ಕ್ಯಾತೆ: ಕರ್ನಾಟಕದ ಯೋಜನೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ..!
ರಾಜಸ್ಥಾನ ಹೈಕೋರ್ಟ್‌ನ ನ್ಯಾ.ಸಂದೀಪ್ ಮೆಹ್ತಾ (Justice Sandeep Mehta) ಅವರನ್ನು ಅಸ್ಸಾಂನ ಗುವಾಹಟಿ ಹೈಕೋರ್ಟ್‌ಗೆ (Guwahati High Court) ಹಾಗೂ ಗುವಾಹಟಿ ಹೈಕೋರ್ಟ್‌ನ ನ್ಯಾ.ಎನ್.ಕೋಟೀಶ್ವರ್ ಸಿಂಗ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಈ ನಾಲ್ಕೂ ಜಡ್ಜ್‌ಗಳ ಹೆಸರನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು 65 ವರ್ಷಕ್ಕೂ, ಹೈಕೋರ್ಟ್ ನ್ಯಾಯಮೂರ್ತಿಗಳು 62 ವರ್ಷಕ್ಕೂ ನಿವೃತ್ತಿ ಹೊಂದುತ್ತಾರೆ.
